ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೇಶಪೂರ್ವಕವಾಗಿ ನಿಷೇಧಿತ ಉದ್ದೀಪನ ಮದ್ದು ಸೇವಿಸಿಲ್ಲ: ಸಿಮೊನಾ ಹಲೆಪ್

Last Updated 22 ಅಕ್ಟೋಬರ್ 2022, 12:15 IST
ಅಕ್ಷರ ಗಾತ್ರ

ಲಂಡನ್‌: ‘ಉದ್ದೇಶಪೂರ್ವಕವಾಗಿ ನಿಷೇಧಿತ ಉದ್ದೀಪನ ಮದ್ದು ಎಂದಿಗೂ ಸೇವಿಸಿಲ್ಲ. ಅದನ್ನು ಸಾಬೀತುಪಡಿಸುವರೆಗೆ ಹೋರಾಡುವೆ‘ ಎಂದು ಎರಡು ಬಾರಿಯ ಗ್ರ್ಯಾನ್‌ಸ್ಲಾಮ್ ಟೆನಿಸ್‌ ಚಾಂಪಿಯನ್, ರುಮೇನಿಯಾದ ಸಿಮೊನಾ ಹಲೆಪ್ ಹೇಳಿದ್ದಾರೆ.

ಆಗಸ್ಟ್‌ನಲ್ಲಿ ನಡೆದ ಅಮೆರಿಕ ಓಪನ್ ಟೂರ್ನಿಯ ಸಂದರ್ಭದಲ್ಲಿ ಸಿಮೊನಾ ಅವರು ನಿಷೇಧಿತ ದ್ರವ್ಯ ಸೇವಿಸಿದ್ದರೆಂದು ಅಂತರರಾಷ್ಟ್ರೀಯ ಟೆನಿಸ್‌ ಇಂಟಿಗ್ರಿಟಿ ಘಟಕ (ಐಟಿಐಎ) ಶುಕ್ರವಾರ ಅವರಿಗೆ ತಾತ್ಕಾಲಿಕ ಅಮಾನತು ಶಿಕ್ಷೆ ವಿಧಿಸಿದೆ.

ಡಬ್ಲ್ಯುಟಿಎ ರ‍್ಯಾಂಕಿಂಗ್‌ನಲ್ಲಿ ಸದ್ಯ ಒಂಬತ್ತನೇ ಸ್ಥಾನದಲ್ಲಿರುವ ಸಿಮೊನಾ, 2019ರಲ್ಲಿ ವಿಂಬಲ್ಡನ್‌ ಹಾಗೂ 2018ರಲ್ಲಿ ಫ್ರೆಂಚ್‌ ಓಪನ್ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದರು.

ತಮ್ಮ ಕುರಿತ ಸುದ್ದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಸಿಮೊನಾ ‘ತುಂಬಾ ಆಘಾತವಾಗಿದೆ. ಸಂಪೂರ್ಣ ಗೊಂದಲದಲ್ಲಿರುವೆ ಮತ್ತು ದ್ರೋಹಕ್ಕೆ ಬಲಿಯಾಗಿರುವೆ. ಈ ಅನ್ಯಾಯವನ್ನು ಎದುರಿಸುತ್ತೇನೆ. ಶೀಘ್ರ ಸತ್ಯ ಹೊರಬರುವ ವಿಶ್ವಾಸವಿದೆ‘ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT