ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್ ಓಪನ್‌: ಹಿಂದೆ ಸರಿದ ಸಿಮೊನಾ ಹಲೆಪ್‌

Last Updated 21 ಮೇ 2021, 15:03 IST
ಅಕ್ಷರ ಗಾತ್ರ

ಬುಚರೆಸ್ಟ್‌, ರುಮೇನಿಯಾ: ವಿಶ್ವ ಟೆನಿಸ್ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಸಿಮೊನಾ ಹಲೆಪ್ ಅವರು ಫ್ರೆಂಚ್ ಓಪನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಕಾಲು ಗಾಯದ ಕಾರಣ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

2018ರಲ್ಲಿ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಕಿರೀಟ ಧರಿಸಿದ್ದ ರುಮೇನಿಯಾದ ಹಲೆಪ್‌, ಸದ್ಯ ಎಡಗಾಲಿನ ಗಾಯದಿಂದ ಬಳಲುತ್ತಿದ್ದಾರೆ. ಇಟಾಲಿಯನ್ ಓಪನ್ ಟೂರ್ನಿಯಲ್ಲಿ ಅವರು ಗಾಯಗೊಂಡಿದ್ದು, ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗಿದೆ. ಇದೇ 30ರಂದು ಫ್ರೆಂಚ್ ಓಪನ್ ಟೂರ್ನಿ ಆರಂಭವಾಗಲಿದೆ.

ರೋಲ್ಯಾಂಡ್ ಗ್ಯಾರೋಸ್‌ನ ಮೂರು ಆವೃತ್ತಿಗಳಲ್ಲಿ ಅವರು ಫೈನಲ್ ತಲುಪಿದ್ದರು. 2018ರ ಫೈನಲ್‌ನಲ್ಲಿ ಸ್ಲೋವಾನೆ ಸ್ಟಿಫನ್ಸ್ ಅವರನ್ನು ಮಣಿಸಿ ಪ್ರಶಸ್ತಿ ಜಯಿಸಿದ್ದರು.

‘ಫ್ರೆಂಚ್‌ ಓಪನ್ ಟೂರ್ನಿಯಲ್ಲಿ ಈ ಬಾರಿ ಆಡಲು ಸಾಧ್ಯವಾಗದಿರುವುದು ದುಃಖದ ಸಂಗತಿ. ಆದರೆ ಗಾಯದಿಂದ ಚೇತರಿಸಿಕೊಳ್ಳಲು ಗಮನ ವಹಿಸುವೆ. ಆದಷ್ಟು ಶೀಘ್ರ ಅಂಗಣಕ್ಕೆ ಮರಳುವೆ‘ ಎಂದು ಸಿಮೊನಾ ಹೇಳಿದ್ದಾರೆ.

ಸಿಮೊನಾ ಅವರು ಹಾಲಿ ವಿಂಬಲ್ಡನ್ ಓಪನ್ (2019) ಚಾಂಪಿಯನ್‌ ಆಗಿದ್ದಾರೆ. 2020ರ ಟೂರ್ನಿಯು ಕೋವಿಡ್‌ ಕಾರಣದಿಂದ ರದ್ದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT