ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯಾಸ ಮಾಡುವಾಗ ಕುಸಿದು ಪಾಕ್ ಟೆನಿಸ್ ಆಟಗಾರ್ತಿ ಸಾವು

Published 15 ಫೆಬ್ರುವರಿ 2024, 0:21 IST
Last Updated 15 ಫೆಬ್ರುವರಿ 2024, 0:21 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಪಾಕಿಸ್ತಾನದ ಯುವ ಟೆನಿಸ್ ಆಟಗಾರ್ತಿ ಝೈನಾಬ್ ಅಲಿ ನಖ್ವಿ ಅಭ್ಯಾಸ ಮಾಡುವಾಗ ಕುಸಿದು ಸಾವನ್ನಪ್ಪಿದರು.

17 ವರ್ಷದ ಆಟಗಾರ್ತಿಗೆ ಹೃದಯಾಘಾತವಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಮುಂಬರುವ ಐಟಿಎಫ್ ಜೂನಿಯರ್ ಟೂರ್ನಿಯಲ್ಲಿ ಆಡಲು ಅವರು ಸಿದ್ಧತೆ ನಡೆಸಿದ್ದರು. ಈ ಸಂದರ್ಭದಲ್ಲಿ ತಮ್ಮ ಕೋಣೆಯಲ್ಲಿದ್ದ ಅವರು ಸಾವಿಗೀಡಾದರು.  ಪ್ರಜ್ಞಾಹೀನರಾದ ಝೈನಾಬ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು. ಝೈನಾಬ್ ಜೊತೆಗೆ ಅವರ ಅಜ್ಜಿ ಕೂಡ ಕೋಣೆಯಲ್ಲಿದ್ದರು.

‘ಝೈನಾಬ್ ಉದಯೋನ್ಮುಖ ಆಟಗಾರ್ತಿಯಾಗಿದ್ದರು. ವೈದ್ಯರು ಅವರಿಗೆ ಹೃದಯಾಘಾತ ಆಗಿದೆ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.  ಆದ್ದರಿಂದ ಸಹಜ ಸಾವು ಎಂದು ದಾಖಲಿಸಲಾಗಿದೆ. ಆಟಗಾರ್ತಿಯ ದೇಹದ ಮರಣೋತ್ತರ ಪರೀಕ್ಷೆ ಬೇಡವೆಂದು ಪಾಲಕರೂ ಮನವಿ ಮಾಡಿದ್ದರು. ಆದ್ದರಿಂದ ಕುಟುಂಬದವರಿಗೆ ಆಟಗಾರ್ತಿಯ ಪಾರ್ಥಿವ ಶರೀರವನ್ನು ಹಸ್ತಾಂತರಿಸಲಾಗಿದೆ’ ಎಂದು ಪಾಕಿಸ್ತಾನ ಟೆನಿಸ್ ಫೆಡರೇಷನ್ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT