ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟೆನಿಸ್‌: ಜಪಾನ್‌ನ ನವೊಮಿ ಒಸಾಕಾ ಮುನ್ನಡೆ

Published 26 ಮೇ 2024, 23:59 IST
Last Updated 26 ಮೇ 2024, 23:59 IST
ಅಕ್ಷರ ಗಾತ್ರ

ಪ್ಯಾರಿಸ್‌: ಜಪಾನ್‌ನ ನವೊಮಿ ಒಸಾಕಾ, ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿ ಫ್ರೆಂಚ್‌ ಓಪನ್‌ನಲ್ಲಿ ಜಯ  ದಾಖಲಿಸಿದರು. ಅವರ ಮುಂದಿನ ಸಂಭವನೀಯ ಎದುರಾಳಿ ಇಗಾ ಶ್ವಾಂಟೆಕ್‌. ವಿಶ್ವದ ಮೂರನೇ ಕ್ರಮಾಂಕದ ಆಟಗಾರ ಕಾರ್ಲೋಸ್‌ ಅಲ್ಕರಾಜ್‌ ಅವರೂ ಗ್ರ್ಯಾನ್‌ಸ್ಲಾಮ್ ಟೂರ್ನಿ ಮೊದಲ ಸುತ್ತಿನಲ್ಲಿ ಸೋಲದ ದಾಖಲೆ ಕಾಪಾಡಿಕೊಂಡರು.

ನಾಲ್ಕು ಗ್ರ್ಯಾನ್‌ಸ್ಲಾಮ್ ಟೂರ್ನಿಗಳನ್ನು ಗೆದ್ದಿರುವ ಒಸಾಕಾ, ಪ್ಯಾರಿಸ್‌ನಲ್ಲಿ ಇದುವರೆಗೆ ಮೂರನೇ ಸುತ್ತನ್ನು ದಾಟಿಲ್ಲ. 26 ವರ್ಷ ವಯಸ್ಸಿನ ಒಸಾಕಾ, ಫಿಲಿಪ್‌ ಶಾಟಿಯೆ ಕೋರ್ಟ್‌ನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 6–1, 4–6, 7–5 ರಿಂದ 48ನೇ ಕ್ರಮಾಂಕದ ಲೂಸಿಯಾ ಬ್ರೊಂಝೆಟ್ಟಿ (ಇಟಲಿ) ಅವರನ್ನು ಸೋಲಿಸಿದರು.

ಇದು 2022ರ ಆಸ್ಟ್ರೇಲಿಯನ್‌ ಓಪನ್‌ ನಂತರ ಒಸಾಕಾ ಅವರಿಗೆ ಮೊದಲ ಜಯ. ಮಾಜಿ ಅಗ್ರಮಾನ್ಯ ಆಟಗಾರ್ತಿಯಾದ ಅವರು ಈಗ 134ನೇ ಸ್ಥಾನದಲ್ಲಿದ್ದಾರೆ.

ಅಗ್ರ ಶ್ರೇಯಾಂಕದ ಆಟಗಾರ್ತಿ ಹಾಗೂ ಹಾಲಿ ಚಾಂಪಿಯನ್‌ ಶ್ವಾಂಟೆಕ್‌ ಸೋಮವಾರ ತಮ್ಮ ಮೊದಲ ಸುತ್ತಿನಲ್ಲಿ ಕ್ವಾಲಿಫೈಯರ್‌ ಲಿಯೊಲಿಯಾ ಜೀನ್‌ಜೀನ್‌ (ಫ್ರಾನ್ಸ್‌) ಅವರನ್ನು ಎದುರಿಸಲಿದ್ದು, ಗೆದ್ದಲ್ಲಿ ಪೋಲೆಂಡ್‌ನ ಆಟಗಾರ್ತಿಗೆ ಒಸಾಕಾ ಎದುರಾಳಿಯಾಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT