ಸೋಮವಾರ, ಮೇ 16, 2022
23 °C
ಎಐಟಿಎ ಮಹಿಳಾ ಟೆನಿಸ್ ಚಾಂಂಪಿಯನ್‌ಷಿಪ್ ಇಂದಿನಿಂದ

ಶರ್ಮದಾ ಬಾಲು ಕಣಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಫೆಡರೇಷನ್ ಕಪ್ ಆಟಗಾರ್ತಿ, ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಪದಕ ಗೆದ್ದಿದ್ದ ಶರ್ಮದಾ ಬಾಲು ಸುಮಾರು ಐದು ವರ್ಷಗಳ ನಂತರ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳುತ್ತಿದ್ದಾರೆ. ಇಲ್ಲಿಯ ಪಡುಕೋಣೆ–ದ್ರಾವಿಡ್‌ ಸ್ಪೋರ್ಟ್ಸ್ ಎಕ್ಸ್‌ಲೆನ್ಸ್‌ನ ಪಿಬಿಐ–ಸಿಎಸ್‌ಇ ಅಕಾಡೆಮಿಯಲ್ಲಿ ಸೋಮವಾರದಿಂದ ನಡೆಯಲಿರುವ ಎಐಟಿಎ ಮಹಿಳಾ ಚಾಂಪಿಯನ್‌ಷಿಪ್‌ನಲ್ಲಿ ಅವರು ಕಣಕ್ಕಿಳಿಯಲಿದ್ದಾರೆ.

ಭಾನುವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕರ್ನಾಟಕದ ಶರ್ಮದಾ 6–1, 6–0ರಿಂದ ವೈಷ್ಣವಿ ಶೆಟ್ಟಿ ಎದುರು ಗೆದ್ದು ಟೂರ್ನಿಯ ಮುಖ್ಯ ಸುತ್ತಿಗೆ ಪ್ರವೇಶಿಸಿದರು.

ತೆಲಂಗಾಣದ ಹ್ಯುಮೆರಾ ಬಹಾರ್ಮಸ್‌ ಅವರಿಗೆ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ನೀಡಲಾಗಿದೆ. ಕರ್ನಾಟಕ ಸೋಹಾ ಸಾದಿಕ್ ಹಾಗೂ ಪ್ರತಿಭಾ ಪ್ರಸಾದ್ ನಾರಾಯಣ್ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಶ್ರೇಯಾಂಕ ಪಡೆದಿದ್ದಾರೆ. ತೆಲಂಗಾಣದ ಚಿಲುಮುಲು ನಿಧಿ ಅವರಿಗೆ ನಾಲ್ಕನೇ ಶ್ರೇಯಾಂಕ ಲಭಿಸಿದೆ.

ಟೂರ್ನಿಯ ಮುಖ್ಯ ಸುತ್ತಿನಲ್ಲಿ ಒಟ್ಟು 32 ಆಟಗಾರ್ತಿಯರು ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.