ಶನಿವಾರ, ಸೆಪ್ಟೆಂಬರ್ 18, 2021
21 °C

Tokyo Olympics: ಗಾಯದಿಂದಾಗಿ ಸಿಂಗಲ್ಸ್‌ನಿಂದ ಹಿಂದೆ ಸರಿದ ಆ್ಯಂಡಿ ಮರ್‍ರೆ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಟೋಕಿಯೊ: ಬ್ರಿಟನ್‌ನ ಚಾಂಪಿಯನ್ ಆಟಗಾರ ಆ್ಯಂಡಿ ಮರ್‍ರೆ ಅವರು ಗಾಯದ ಕಾರಣ ಟೆನಿಸ್ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಿಂದ ಹಿಂದೆ ಸರಿದಿದ್ದಾರೆ.

ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಅವರು ನಿಗದಿಯಂತೆ ಕೆನಡಾದ ಫೆಲಿಕ್ಸ್ ಆಗರ್-ಅಲಿಯಾಸಿಮ್ ವಿರುದ್ಧ ಆಡಬೇಕಿತ್ತು. ಈ ಪಂದ್ಯದಲ್ಲಿ ಮರ್‍ರೆ ಬದಲು ಫೆಲಿಕ್ಸ್ ವಿರುದ್ಧ ಆಸ್ಟ್ರೇಲಿಯಾದ ಮ್ಯಾಕ್ಸ್ ಪರ್ಸೆಲ್ ಸೆಣಸಲಿದ್ದಾರೆ.

ಓದಿ: 

ಆದರೆ ಡಬಲ್ಸ್‌ನಲ್ಲಿ ಅವರು ಆಡಲಿದ್ದಾರೆ.

‘ನನಗೆ ನಿಜಕ್ಕೂ ನಿರಾಸೆಯಾಗಿದೆ. ಆದರೆ ವೈದ್ಯಕೀಯ ಸಿಬ್ಬಂದಿ ಸಲಹೆ ಮೇರೆಗೆ ಸಿಂಗಲ್ಸ್‌ನಲ್ಲಿ ಆಡುವ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು. ತುಂಬಾ ಕಠಿಣ ನಿರ್ಧಾರ ಕೈಗೊಂಡಿದ್ದೇನೆ. ಡಬಲ್ಸ್‌ನಲ್ಲಿ ಆಡುವತ್ತ ಗಮನ ಕೇಂದ್ರೀಕರಿಸಲಿದ್ದೇನೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು