ಮಂಗಳವಾರ, ಸೆಪ್ಟೆಂಬರ್ 17, 2019
22 °C
6–3, 7–5 ಅಂತರದಲ್ಲಿ ಸೆರೆನಾ ವಿಲಿಯಮ್ಸ್ ಮಣಿಸಿದ ಬಿಯಾಂಕ

ಅಮೆರಿಕ ಓಪನ್ ಟೆನಿಸ್: ಟ್ರೋಫಿಗೆ ಮುತ್ತಿಟ್ಟ ಬಿಯಾಂಕ ಆಂಡ್ರಿಸ್ಕು

Published:
Updated:

ನ್ಯೂಯಾರ್ಕ್: ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರನ್ನು ಮಣಿಸಿದ ಕೆನಡಾದ ಬಿಯಾಂಕ ಆಂಡ್ರಿಸ್ಕು ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದರು.

ಶನಿವಾರ ನಡೆದ ಫೈನಲ್‌ನಲ್ಲಿ ಎದುರಾಳಿ ವಿಲಿಯಮ್ಸ್ ಅವರ ದಿಟ್ಟ ದಾಳಿಗೆ ಅಂಜದ ಯುವ ಆಟಗಾರ್ತಿ ಬಿಯಾಂಕ 6–3, 7–5 ಅಂತರದ ನೇರ ಜಯಗಳಿಸಿದರು. 

ಸೆರೆನಾ, 2018ರ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿಯೂ ಜಪಾನಿನ ನವೊಮಿ ಒಸ್ಕರಾ ಅವರ ಎದುರು ಸೋಲು ಕಂಡಿದ್ದರು. ಈ ಪಂದ್ಯದಲ್ಲಿ ಸೆರೆನಾ ಜಯ ಸಾಧಿಸಿದ್ದರೆ 24ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗಳಿಸಿದ ಸಾಧನೆಗೆ ಪಾತ್ರರಾಗುತ್ತಿದ್ದರು. 

ಸೆಮಿಫೈನಲ್‌ನಲ್ಲಿ ಎಲಿನಾ ಸ್ವಿಟೋಲಿನಾ ಅವರನ್ನು 6–3, 6–1ರಲ್ಲಿ ಮಣಿಸಿದ್ದ ಸೆರೆನಾ 10ನೇ ಬಾರಿ ಅಮೆರಿಕ ಓಪನ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದರು. ಬಿಯಾಂಕ ಸೆಮಿಫೈನಲ್‌ನಲ್ಲಿ ಬೆಲಿಂದಾ ಬೆನ್ಸಿಕ್ ಅವರನ್ನು 7–6 (7/3), 7–5ರಲ್ಲಿ ಮಣಿಸಿದ್ದರು. 

Post Comments (+)