ಗುರುವಾರ , ಆಗಸ್ಟ್ 22, 2019
27 °C
7ರಿಂದ ಮರೀನಾ ಓಪನ್‌ ಎಐಟಿಎ ರ‍್ಯಾಂಕಿಂಗ್‌ ವೀಲ್‌ಚೇರ್‌ ಟೆನಿಸ್‌ ಟೂರ್ನಿ

ಕರ್ನಾಟಕದ ಶಂಕರ್‌ಗೆ ಅಗ್ರಶ್ರೇಯಾಂಕ

Published:
Updated:

ಚೆನ್ನೈ: ಕರ್ನಾಟಕದ ಶಂಕರ್‌ ವೀರಾಸ್ವೆ ಹಾಗೂ ಪ್ರತಿಮಾ ರಾವ್‌ ಅವರಿಗೆ ಮರೀನಾ ಓಪನ್‌ ಎಐಟಿಎ ರ‍್ಯಾಂಕಿಂಗ್‌ ವೀಲ್‌ಚೇರ್‌ ಟೆನಿಸ್‌ ಟೂರ್ನಿಯ ಅಗ್ರಶ್ರೇಯಾಂಕ ನೀಡಲಾಗಿದೆ. 40ಕ್ಕಿಂತ ಅಧಿಕ ಸ್ಪರ್ಧಿಗಳು ಭಾಗವಹಿಸುವ ಟೂರ್ನಿಯು ಇಲ್ಲಿನ ಎಸ್‌ಡಿಎಟಿ ಕ್ರೀಡಾಂಗಣದಲ್ಲಿ ಆಗಸ್ಟ್‌ 7ರಿಂದ ಆಯೋಜನೆಯಾಗಿದೆ.

ತಮಿಳುನಾಡು ಟೆನಿಸ್‌ ಸಂಸ್ಥೆಯ ಅಧ್ಯಕ್ಷ ವಿಜಯ್‌ ಅಮೃತರಾಜ್‌, ಭಾರತದಲ್ಲಿ ವೀಲ್‌ಚೇರ್‌ ಟೆನಿಸ್‌ ಬೆಳವಣಿಗೆಯ ಕುರಿತು ಮಾತನಾಡಿದರು. ‘ವಿಭಿನ್ನ ಸಾಮರ್ಥ್ಯ ಉಳ್ಳವರನ್ನು ಒಳಗೊಂಡು ಟೆನಿಸ್‌ ಕ್ಷೇತ್ರ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದು ಮಹತ್ವದ್ದಾಗಿದೆ’ ಎಂದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಪರ್ಧಿಗಳು ಭಾಗವಹಿಸುವ ವಿಶ್ವಾಸವಿದೆ’ ಎಂದು ಅಮೃತರಾಜ್‌ ಹೇಳಿದರು.

ಟೂರ್ನಿಯಲ್ಲಿ ಭಾಗವಹಿಸುತ್ತಿರುವ 34 ಪುರುಷ ಸ್ಪರ್ಧಿಗಳಲ್ಲಿ 19 ಮಂದಿ ಕರ್ನಾಟಕದವರು. ತಮಿಳುನಾಡಿನ 13 ಹಾಗೂ ಇಂಗ್ಲೆಂಡ್‌ನಿಂದ ಓರ್ವ ಸ್ಪರ್ಧಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಎಂಟು ಮಹಿಳಾ ಸ್ಪರ್ಧಿಗಳಲ್ಲಿ ಏಳು ಮಂದಿ ಕರ್ನಾಟಕದವರು.

ತಮಿಳುನಾಡಿನಿಂದ ಒಬ್ಬರು ಪಾಲ್ಗೊಳ್ಳಲಿದ್ದಾರೆ. ಟೂರ್ನಿಯ ಒಟ್ಟು ಬಹುಮಾನ ಮೊತ್ತ ₹ 2.32 ಲಕ್ಷ.

Post Comments (+)