ಲಂಡನ್: ದಾಖಲೆಯ 25ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಸರ್ಬಿಯಾದ ತಾರೆ ನೊವಾಕ್ ಜೊಕೊವಿಚ್, ಪ್ರತಿಷ್ಠಿತ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ಗೆ ಪ್ರವೇಶಿಸಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಆರನೇ ಶ್ರೇಯಾಂಕಿತ ಜೊಕೊವಿಚ್ ಅವರು 22ನೇ ಶ್ರೇಯಾಂಕದ ಇಟಲಿಯ ಫ್ಲಾವಿಯೊ ಕೊಬೊಲ್ಲಿ ವಿರುದ್ಧ 6-7 (6), 6-2, 7-5, 6-4ರ ಕಠಿಣ ಅಂತರದಲ್ಲಿ ಗೆದ್ದು ಅಂತಿಮ ನಾಲ್ಕರ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಆ ಮೂಲಕ ವಿಂಬಲ್ಡನ್ನಲ್ಲಿ 14ನೇ ಸಲ ಸೆಮಿಫೈನಲ್ ಪ್ರವೇಶಿಸಿರುವ ಜೊಕೊವಿಚ್, ನೂತನ ದಾಖಲೆ ಬರೆದಿದ್ದಾರೆ.

ಸೆಮಿಫೈನಲ್ನಲ್ಲಿ ಜೊಕೊವಿಚ್ ಅವರಿಗೆ ಅಗ್ರ ಶ್ರೇಯಾಂಕಿತ ಇಟಲಿಯ ಜಾನಿಕ್ ಸಿನ್ನರ್ ಸವಾಲು ಎದುರಾಗಲಿದೆ.

ಮಗದೊಂದು ಸೆಮಿಫೈನಲ್ನಲ್ಲಿ 23 ವರ್ಷದ ಸಿನ್ನರ್ ಅವರು 10ನೇ ಶ್ರೇಯಾಂಕದ ಅಮೆರಿಕದ ಬೆನ್ ಶೆಲ್ಟನ್ ವಿರುದ್ಧ 7-6 (7/2), 6-4, 6-4ರ ಅಂತರದಿಂದ ಗೆದ್ದರು.

ವಿಂಬಲ್ಡನ್ನಲ್ಲಿ ಏಳು ಬಾರಿಯ ಚಾಂಪಿಯನ್ ಆಗಿರುವ ಜೊಕೊವಿಚ್, 8ನೇ ಕಿರೀಟದ ನಿರೀಕ್ಷೆಯಲ್ಲಿದ್ದಾರೆ.

'ಯಾವುದೇ ಗಾಯದ ಸಮಸ್ಯೆ ಇಲ್ಲದೆ ಮುಂದಿನ ಪಂದ್ಯವನ್ನು ಆಡುವ ನಿರೀಕ್ಷೆಯಲ್ಲಿದ್ದೇನೆ. ಜಾನಿಕ್ ವಿರುದ್ಧ ಗೆಲ್ಲಲು ನನ್ನ ಶ್ರೇಷ್ಠ ಪ್ರದರ್ಶನವನ್ನೇ ನೀಡಬೇಕಿದೆ' ಎಂದು 38 ವರ್ಷದ ಜೊಕೊವಿಚ್ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.

ಆಲ್ ಇಂಗ್ಲೆಂಡ್ ಕ್ಲಬ್ ಅಂಗಳದಲ್ಲಿ ಸಿನ್ನರ್ ವಿರುದ್ಧ ಜೊಕೊವಿಚ್ 2-0 ಅಂತರದ ಮುನ್ನಡೆಯಲ್ಲಿದ್ದಾರೆ. 2023ರ ಸೆಮಿಫೈನಲ್ ಹಾಗೂ 2022ರ ಕ್ವಾರ್ಟರ್ ಫೈನಲ್ನಲ್ಲಿ ಗೆಲುವು ಸಾಧಿಸಿದ್ದರು.

ಜೊಕೊವಿಚ್ ವಿಂಬಲ್ಡನ್ ಗೆಲುವು: (2011, 2014, 2015, 2018, 2019, 2021, 2022)

ಮತ್ತೊಂದೆಡೆ ಸಿನ್ನರ್ ಚೊಚ್ಚಲ ವಿಂಬಲ್ಡನ್ ಕಿರೀಟದ ಹುಡುಕಾಟದಲ್ಲಿದ್ದಾರೆ. ಸಿನ್ನರ್ ಈಗಾಗಲೇ ಮೂರು ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಆಸ್ಟ್ರೇಲಿಯನ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದರು. 2024ರಲ್ಲಿ ಆಸ್ಟ್ರೇಲಿಯನ್ ಓಪನ್ ಮತ್ತು ಅಮೆರಿಕನ್ ಓಪನ್ ಗೆದ್ದಿದ್ದರು.

ಪ್ರಸಕ್ತ ಸಾಲಿನ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೂರ್ನಿಯ ಸೆಮಿಫೈನಲ್ನಲ್ಲಿ ಇಬ್ಬರು ಮುಖಾಮುಖಿಯಾಗಿದ್ದಾಗ ಗೆಲುವು ಸಿನ್ನರ್ ಪಾಲಾಗಿತ್ತು. ಆದರೆ ಫೈನಲ್ನಲ್ಲಿ ಕಾರ್ಲೊಸ್ ಅಲ್ಕರಾಜ್ ವಿರುದ್ಧ ಮುಗ್ಗರಿಸಿದ ಪರಿಣಾಮ ಸಿನ್ನರ್ ಅವರ ಪ್ರಶಸ್ತಿ ಕನಸು ಭಗ್ನವಾಗಿತ್ತು.
.Wimbledon: ಮೊದಲ ಬಾರಿ ಸೆಮಿಗೆ ಶ್ವಾಂಟೆಕ್.ಟೆನಿಸ್ ಆಟಗಾರರು ಭಾರತ-ಪಾಕ್ ಪಂದ್ಯಕ್ಕೆ ಸಮನಾದ ಒತ್ತಡ ನಿಭಾಯಿಸುತ್ತಾರೆ: ಕೊಹ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.