ಗುರುವಾರ , ಜನವರಿ 27, 2022
21 °C
ಆಸ್ಟ್ರೇಲಿಯಾ ಓಪನ್ ಟೆನಿಸ್ ಅರ್ಹತಾ ಪಂದ್ಯಗಳು

ಆಸ್ಟ್ರೇಲಿಯಾ ಓಪನ್ ಟೆನಿಸ್: ಎರಡನೇ ಸುತ್ತಿಗೆ ಯೂಕಿ ಬಾಂಭ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್ (ಪಿಟಿಐ): ದೀರ್ಘ ಕಾಲದ ನಂತರ ಗ್ರ್ಯಾನ್‌ಸ್ಲಾಂ ಕಣಕ್ಕೆ ಮರಳಿರುವ ಯೂಕಿ ಬಾಂಭ್ರಿ ಶುಭಾರಂಭ ಮಾಡಿದರು.

ಮಂಗಳವಾರ ನಡೆದ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಕ್ವಾಲಿಫೈಯರ್ಸ್‌ನ ಮೊದಲ ಪಂದ್ಯದಲ್ಲಿ ಯೂಕಿ 6–4, 6–2ರಿಂದ ಪೋರ್ಚುಗಲ್‌ನ ಜೊವಾ ಡಾಮಿಂಗೀಸ್ ವಿರುದ್ಧ ಜಯಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು.

2018ರಲ್ಲಿ ಅಮೆರಿಕ ಓಪನ್ ನಲ್ಲಿ ಭಾಗವಹಿಸಿದ ನಂತರ ಗಾಯಗೊಂಡಿದ್ದ ಯೂಕಿ ಗ್ರ್ಯಾನ್‌ಸ್ಲಾಂ ಟೂರ್ನಿಗಳಿಂದ ದೂರ ಉಳಿದಿದ್ದರು.  ಇಲ್ಲಿ ನಡೆದ 68 ನಿಮಿಷಗಳ ಹೋರಾಟದಲ್ಲಿ ಯೂಕಿ ಮೇಲುಗೈ ಸಾಧಿಸಿದರು.

29 ವರ್ಷದ ಯೂಕಿಯ ಪರಿಣಾಮಕಾರಿ ರಿಟರ್ನ್ ಮತ್ತು ನೆಟ್‌ ಸಮೀಪದ ಆಟದ ಮುಂದೆ 248ನೇ ರ‍್ಯಾಂಕ್‌ನ ಜಾವೊ ಶರಣಾದರು. ಯೂಕಿ ಮಾಡಿದ ಚೆಂದದ ಸರ್ವ್‌ಗಳು ಗಮನ ಸೆಳೆದವು.

ರಾಮಕುಮಾರ್, ಅಂಕಿತಾಗೆ ನಿರಾಶೆ: ಪುರುಷರ ಸಿಂಗಲ್ಸ್‌ನಲ್ಲಿ ರಾಮಕುಮಾರ್ ರಾಮನಾಥನ್ ನಿರಾಶೆ ಅನುಭವಿಸಿದರು. ದಿಟ್ಟ ಹೋರಾಟ ಮಾಡಿದರೂ ರಾಮಕುಮಾರ್‌ಗೆ ಜಯ ಒಲಿಯಲಿಲ್ಲ. 

ಮೊದಲ ಸುತ್ತಿನ ಪಂದ್ಯದಲ್ಲಿ ರಾಮಕುಮಾರ್ 3–6, 5–7 ರಿಂದ ಇಟಲಿಯ ಜಿಯಾನ್ ಮೊರೊನಿ ವಿರುದ್ಧ ಸೋತರು. ಮೊರೊನಿಯ ಶರವೇಗದ ಸರ್ವ್‌ಗಳ ಮುಂದೆ ಭಾರತದ ಆಟಗಾರ ಹಿನ್ನಡೆ ಅನುಭವಿಸಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ 203ನೇ ಶ್ರೇಯಾಂಕದ ಅಂಕಿತಾ 1–6, 0–6 ರಿಂದ 120ನೇ ರ್‍ಯಾಂಕ್‌ನ ಉಕ್ರೇನಿನ ಲಿಸಿಯಾ ಸುರೆಂಕೊ ವಿರುದ್ಧ ಸೋತರು. ಕೇವ 50 ನಿಮಿಷಗಳಲ್ಲಿ ಪಂದ್ಯ ಮುಗಿಯಿತು.

ಈ ಟೂರ್ನಿಗೆ ಬರುವ ಮುನ್ನ ಅಂಕಿತಾ ಅವರು ಕೋವಿಡ್ ಕಾಡಿತ್ತು. ದೀರ್ಘ ಚಿಕಿತ್ಸೆ ಮತ್ತು ವಿಶ್ರಾಂತಿಯ ನಂತರ ಕಣಕ್ಕೆ ಮರಳಿದ್ದಾರೆ.

‘ಕಳೆದ 14 ರಿಂದ 16 ದಿನಗಳಲ್ಲಿ ಒಂದು ದಿನವೂ ರೆಕೆಟ್ ಮುಟ್ಟಿಲ್ಲ. ಬೇರೆ ಯಾವ ಚಟುವಟಿಕೆಗಳನ್ನೂ ಮಾಡಿಲ್ಲ’ ಎಂದು ಪಂದ್ಯದ ನಂತರ ಅಂಕಿತಾ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು