ಸೋಮವಾರ, ಸೆಪ್ಟೆಂಬರ್ 16, 2019
26 °C

ಯೂಫಾ ಟೂರ್ನಿ ಫೈನಲ್ ಪಂದ್ಯದ ನೇರ ಪ್ರಸಾರ

Published:
Updated:

ಮುಂಬೈ: ಯೂಫಾ ಚಾಂಪಿಯನ್ಸ್ ಫುಟ್‌ಬಾಲ್‌ ಲೀಗ್‌ನ ಫೈನಲ್‌ ಪಂದ್ಯವನ್ನು ಸೋನಿ ಪಿಕ್ಚರ್ಸ್ ಮತ್ತು ಸೋನಿ ನೆಟ್‌ವರ್ಕ್‌ ಸಂಸ್ಥೆಗಳು ಪಿವಿಆರ್‌ ಸಿನಿಮಾಸ್‌ ಸಹಯೋಗದಲ್ಲಿ ಬೃಹತ್ ಪರದೆಯಲ್ಲಿ ನೇರ ಪ್ರಸಾರ ಮಾಡಲಿವೆ.

ಸ್ಪೇನ್‌ನ ಮ್ಯಾಡ್ರಿಡ್‌ನ ಮೆಟ್ರೊ ಪಾಲಿಟಾನೊ ಕ್ರೀಡಾಂಗಣದಲ್ಲಿ ಜೂನ್‌ ಒಂದರಂದು ಫೈನಲ್ ಪಂದ್ಯ ನಡೆಯಲಿದೆ. ಪಂದ್ಯ ವೀಕ್ಷಿಸಲು ಬಾಲಿವುಡ್ ನಟ ಫರ್ಹಾನ್ ಅಕ್ತರ್ ತೆರಳಲಿದ್ದಾರೆ ಎಂದು ತಿಳಿಸಲಾಗಿದೆ.

ಮುಂಬೈ, ಪುಣೆ, ಕೋಲ್ಕತ್ತ, ನವದೆಹಲಿ ಮತ್ತು ಚೆನ್ನೈನ ಪಿವಿಆರ್ ಸಿನಿಮಾಗಳಲ್ಲಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Post Comments (+)