ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್ ಕ್ರೀಡಾಕೂಟ: ಭಾರತ ಹಾಕಿ ತಂಡದ ಐವರಿಗೆ ಕೋವಿಡ್

Last Updated 30 ಜೂನ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು/ನವದೆಹಲಿ: ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತೆರಳಲು ಸಿದ್ಧತೆ ನಡೆಸಿರುವ ಹಾಕಿ ಪುರುಷರ ತಂಡದ ಐವರಿಗೆ ಕೋವಿಡ್ ಖಚಿತವಾಗಿದೆ.

ನಗರದ ಭಾರತ ಕ್ರೀಡಾ ಪ್ರಾಧಿಕಾರದ ವಸತಿ ನಿಲಯದಲ್ಲಿ ತಂಡದ ಶಿಬಿರ ನಡೆಯುತ್ತಿದೆ.ತಂಡದ ಮುಖ್ಯ ಕೋಚ್ ಗ್ರಹಾಂ ರೀಡ್, ಸ್ಟ್ರೈಕರ್ ಗುರ್ಜಂತ್ ಸಿಂಗ್ ಅವರಿಗೆ ಕೋವಿಡ್ ಇರುವುದು ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.

‘ಇಬ್ಬರು ಆಟಗಾರರು ಮತ್ತು ಮೂವರು ನೆರವು ಸಿಬ್ಬಂದಿಗೆ ಕೋವಿಡ್ ಇರುವುದು ಖಚಿತವಾಗಿದೆ’ ಎಂದು ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಆಟಗಾರರ ಹೆಸರುಗಳನ್ನು ಬಹಿರಂಗಪಡಿಸಿಲ್ಲ.

ಮಿಡ್‌ಫೀಲ್ಡರ್ ಆಶಿಶ್ ಕುಮಾರ್ ಟೊಪ್ನೊ ಅವರಿಗೂ ಸೋಂಕು ತಗುಲಿದೆ ಎಂದು ಹೇಳಲಾಗಿದೆ.

31 ಆಟಗಾರರ ಸಂಭವನೀಯ ತಂಡದಲ್ಲಿ ಪಿ.ಆರ್. ಶ್ರೀಜೇಶ್, ಮನಪ್ರೀತ್ ಸಿಂಗ್, ಪವನ್, ಲಲಿತ್‌ಕುಮಾರ್ ಉಪಾಧ್ಯಾಯ, ಹರ್ಮನ್‌ಪ್ರೀತ್ ಸಿಂಗ್, ವರುಣಕುಮಾರ ಮತ್ತು ಅಮಿತ್ ರೋಹಿದಾಸ್ ಇದ್ದಾರೆ.

ಜುಲೈ 23ರಂದು ಶಿಬಿರ ಮುಕ್ತಾಯವಾಗಲಿದೆ. ಅದರ ನಂತರ ತಂಡವು ಬರ್ಮಿಂಗ್‌ಹ್ಯಾಮ್‌ಗೆ ತೆರಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT