ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Ben Stokes | 10 ಸಾವಿರ ರನ್, 100 ವಿಕೆಟ್: ಸಚಿನ್, ಗಂಗೂಲಿ ಸಾಲಿಗೆ ಸ್ಟೋಕ್ಸ್

Published 9 ನವೆಂಬರ್ 2023, 3:11 IST
Last Updated 9 ನವೆಂಬರ್ 2023, 3:11 IST
ಅಕ್ಷರ ಗಾತ್ರ

ಪುಣೆ: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಹಾಗೂ 100ಕ್ಕೂ ಹೆಚ್ಚು ವಿಕೆಟ್ ಗಳಿಸಿದ ಇಂಗ್ಲೆಂಡ್‌ನ ಮೊದಲ ಆಟಗಾರ ಎಂಬ ಕೀರ್ತಿಗೆ ಬೆನ್ ಸ್ಟೋಕ್ಸ್ ಭಾಜನರಾಗಿದ್ದಾರೆ.

ಆ ಮೂಲಕ ಇದೇ ಸಾಧನೆ ಮಾಡಿದ ಭಾರತದ ಸಚಿನ್ ತೆಂಡೂಲ್ಕರ್ ತೆಂಡೂಲ್ಕರ್, ಸೌರವ್ ಗಂಗೂಲಿ ಅವರೊಂದಿಗೆ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಟೋಕ್ಸ್ ಈ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಬೆನ್ ಸ್ಟೋಕ್ಸ್ ಶತಕದ (108) ಬೆಂಬಲದೊಂದಿಗೆ ಆಂಗ್ಲರ ಪಡೆಯು ನೆದರ್ಲೆಂಡ್ಸ್ ವಿರುದ್ಧ ಪುಣೆಯಲ್ಲಿ ನಡೆದ ಪಂದ್ಯದಲ್ಲಿ 160 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತು.

ಬೆನ್ ಸ್ಟೋಕ್ಸ್ 84 ಎಸೆತಗಳಲ್ಲಿ ತಲಾ ಆರು ಬೌಂಡರಿ ಹಾಗೂ ಸಿಕ್ಸರ್‌ಗಳಿಂದ 108 ರನ್ ಗಳಿಸಿದರು. ಆ ಮೂಲಕ ಇಂಗ್ಲೆಂಡ್ ಒಂಬತ್ತು ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿತು. ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ 37.2 ಓವರ್‌ಗಳಲ್ಲಿ 179 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಏಕದಿನ ಕ್ರಿಕೆಟ್‌ನಲ್ಲಿ 10,000ಕ್ಕೂ ರನ್ ಹಾಗೂ 100ಕ್ಕೂ ಹೆಚ್ಚು ವಿಕೆಟ್ ಸಾಧಕರು:

ಸಚಿನ್ ತೆಂಡೂಲ್ಕರ್ (ಭಾರತ),

ಸೌರವ್ ಗಂಗೂಲಿ (ಭಾರತ),

ಜ್ಯಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ),

ಸನತ್ ಜಯಸೂರ್ಯ (ಶ್ರೀಲಂಕಾ),

ತಿಲಕರತ್ನೆ ದಿಲ್ಶಾನ್ (ಶ್ರೀಲಂಕಾ).

32 ವರ್ಷದ ಸ್ಟೋಕ್ಸ್, 113 ಏಕದಿನ ಪಂದ್ಯಗಳಲ್ಲಿ 3,379 ರನ್ ಮತ್ತು 74 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗೆಯೇ 97 ಟೆಸ್ಟ್ ಪಂದ್ಯಗಳಲ್ಲಿ 6,117 ರನ್ ಮತ್ತು 197 ವಿಕೆಟ್‌ಗಳನ್ನು ಗಳಿಸಿದ್ದಾರೆ. ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 585 ರನ್ ಹಾಗೂ 26 ವಿಕೆಟ್‌ಗಳನ್ನು ಹೊಂದಿದ್ದಾರೆ.

ಸ್ಟೋಕ್ಸ್, ಏಕದಿನದಲ್ಲಿ ಐದು ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ 13 ಶತಕಗಳನ್ನು ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT