ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ 229 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರನೇ ಗೆಲುವು ದಾಖಲಿಸಿರುವ ಹರಿಣಗಳ ಪಡೆ, ಆರು ಅಂಕಗಳೊಂದಿಗೆ ಮೂರನೇ ಸ್ಥಾನ ಭದ್ರಪಡಿಸಿದೆ.

ಅತ್ತ ನಾಲ್ಕು ಪಂದ್ಯಗಳಲ್ಲಿ ಮೂರನೇ ಸೋಲಿಗೆ ಗುರಿಯಾಗಿರುವ ಆಂಗ್ಲರ ಪಡೆ, ಎರಡು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಹೆನ್ರಿಚ್ ಕ್ಲಾಸೆನ್ ಅಮೋಘ ಶತಕದ (109) ಬೆಂಬಲದೊಂದಿಗೆ ಏಳು ವಿಕೆಟ್ ನಷ್ಟಕ್ಕೆ 399 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತು.

ರೀಜಾ ಹೆಂಡ್ರಿಕ್ಸ್ (85) ಹಾಗೂ ವ್ಯಾನ್ ಡೆರ್ ದುಸ್ಸಾನ್ (60) ಹಾಗೂ ಏಡೆನ್ ಮಾರ್ಕರಮ್ (42) ಉಪಯುಕ್ತ ಕಾಣಿಕೆ ನೀಡಿದರು.

ಈ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ ಬ್ಯಾಟಿಂಗ್ ವೈಫಲ್ಯ ಕಂಡು 22 ಓವರ್ಗಳಲ್ಲೇ 170 ರನ್ನಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. 100ಕ್ಕೆ ಎಂಟು ವಿಕೆಟ್ ಕಳೆದುಕೊಂಡಿದ್ದ ಆಂಗ್ಲರ ಪಡೆಗೆ 150ರ ಗಡಿ ದಾಟಲು ಮಾರ್ಕ್ ವುಡ್ (43*) ಹಾಗೂ ಗಸ್ ಅಟ್ಕಿನ್ಸನ್ (35) ನೆರವಾದರು.

ನಾಯಕ ಜೋಸ್ ಬಟ್ಲರ್ (15), ಜಾನಿ ಬೆಸ್ಟೊ (10), ಡೇವಿಡ್ ಮಲಾನ್ (6), ಜೋ ರೂಟ್ (2), ಬೆನ್ ಸ್ಟೋಕ್ಸ್ (17) ಹಾಗೂ ಹ್ಯಾರಿ ಬ್ರೂಕ್ (17) ನಿರಾಸೆ ಮೂಡಿಸಿದರು.

ಹರಿಣಗಳ ಪರ ಜೆರಾಲ್ಡ್ ಕೋಟ್ಜಿ ಮೂರು ಮತ್ತು ಲುಂಗಿ ಗಿಡಿ ಹಾಗೂ ಮಾರ್ಕೊ ಜಾನ್ಸೆನ್ ತಲಾ ಎರಡು ವಿಕೆಟ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.