ಬೆಂಗಳೂರು/ನವದೆಹಲಿ: ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತೆರಳಲು ಸಿದ್ಧತೆ ನಡೆಸಿರುವ ಹಾಕಿ ಪುರುಷರ ತಂಡದ ಐವರಿಗೆ ಕೋವಿಡ್ ಖಚಿತವಾಗಿದೆ.

ನಗರದ ಭಾರತ ಕ್ರೀಡಾ ಪ್ರಾಧಿಕಾರದ ವಸತಿ ನಿಲಯದಲ್ಲಿ ತಂಡದ ಶಿಬಿರ ನಡೆಯುತ್ತಿದೆ.ತಂಡದ ಮುಖ್ಯ ಕೋಚ್ ಗ್ರಹಾಂ ರೀಡ್, ಸ್ಟ್ರೈಕರ್ ಗುರ್ಜಂತ್ ಸಿಂಗ್ ಅವರಿಗೆ ಕೋವಿಡ್ ಇರುವುದು ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.

‘ಇಬ್ಬರು ಆಟಗಾರರು ಮತ್ತು ಮೂವರು ನೆರವು ಸಿಬ್ಬಂದಿಗೆ ಕೋವಿಡ್ ಇರುವುದು ಖಚಿತವಾಗಿದೆ’ ಎಂದು ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಆಟಗಾರರ ಹೆಸರುಗಳನ್ನು ಬಹಿರಂಗಪಡಿಸಿಲ್ಲ.

ಮಿಡ್‌ಫೀಲ್ಡರ್ ಆಶಿಶ್ ಕುಮಾರ್ ಟೊಪ್ನೊ ಅವರಿಗೂ ಸೋಂಕು ತಗುಲಿದೆ ಎಂದು ಹೇಳಲಾಗಿದೆ.

31 ಆಟಗಾರರ ಸಂಭವನೀಯ ತಂಡದಲ್ಲಿ ಪಿ.ಆರ್. ಶ್ರೀಜೇಶ್, ಮನಪ್ರೀತ್ ಸಿಂಗ್, ಪವನ್, ಲಲಿತ್‌ಕುಮಾರ್ ಉಪಾಧ್ಯಾಯ, ಹರ್ಮನ್‌ಪ್ರೀತ್ ಸಿಂಗ್, ವರುಣಕುಮಾರ ಮತ್ತು ಅಮಿತ್ ರೋಹಿದಾಸ್ ಇದ್ದಾರೆ.

ಜುಲೈ 23ರಂದು ಶಿಬಿರ ಮುಕ್ತಾಯವಾಗಲಿದೆ. ಅದರ ನಂತರ ತಂಡವು ಬರ್ಮಿಂಗ್‌ಹ್ಯಾಮ್‌ಗೆ ತೆರಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.