ಅಡಿಲೇಡ್: ಕ್ರೀಸ್‌ನಲ್ಲಿದ್ದ ವೇಳೆ ಕೆಟ್ಟ ಪದ ಬಳಸಿ ತಮ್ಮನ್ನು ನಿಂದಿಸುತ್ತಿದ್ದ ಆಸ್ಟ್ರೇಲಿಯಾದ ಆಟಗಾರರನ್ನು ವಿರಾಟ್ ಕೊಹ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತ್ರವಲ್ಲ ಅಂಗಳದಲ್ಲಿ ಎದುರಾಳಿ ಆಟಗಾರರು ತೋರಿದ ವರ್ತನೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

`ಆಸೀಸ್ ಆಟಗಾರರು ನಿರಾಸೆಗೆ ಒಳಗಾದ ಸಂದರ್ಭ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಗುರಿಯಾಗಿಸಿ ಕೆಟ್ಟ ಪದಗಳನ್ನು ಪ್ರಯೋಗಿಸುವರು. ಆ ಮೂಲಕ ಏಕಾಗ್ರತೆಗೆ ಭಂಗ ಉಂಟುಮಾಡಲು ಪ್ರಯತ್ನಿಸುವರು. ನಮ್ಮ ಜೊತೆಯಾಟದ ವೇಳೆ (ವೃದ್ಧಿಮಾನ್ ಸಹಾ ಜೊತೆ) ನಿಜವಾಗಿಯೂ ಆತಿಥೇಯ ಆಟಗಾರರು ತೀರಾ ನಿರಾಸೆಗೆ ಒಳಗಾಗಿದ್ದರು~ ಎಂದು ದಿನದಾಟದ ಬಳಿಕ ಕೊಹ್ಲಿ ಮಾಧ್ಯಮದವರಿಗೆ ತಿಳಿಸಿದರು.

ಕೊಹ್ಲಿ 99 ರನ್ ಗಳಿಸಿದ್ದ ಸಂದರ್ಭ ರನೌಟ್‌ನಿಂದ ಬಚಾವಾಗಿದ್ದರು. ಈ ವೇಳೆ ಆಸೀಸ್ ಬೌಲರ್ ಬೆನ್ ಹಿಲ್ಫೆನಾಸ್ ಭಾರತದ ಬ್ಯಾಟ್ಸ್‌ಮನ್‌ನ್ನು ಉದ್ದೇಶಿಸಿ ಏನೋ ಹೇಳಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಕೊಹ್ಲಿ, `ರನೌಟ್‌ನಿಂದ ಪಾರಾದ ಸಂದರ್ಭ ಹಿಲ್ಫೆನಾಸ್ ಏನೋ ಹೇಳಿದರು. ಅಲ್ಲಿ ಅವರು ಮಾತನಾಡುವುದು ಅನಗತ್ಯವಾಗಿತ್ತು. ಏಕೆಂದರೆ ಆ ಸಂದರ್ಭ ಅವರು ಬೌಲಿಂಗ್ ಮಾಡುತ್ತಿರಲಿಲ್ಲ. ಬೆನ್ ನನ್ನನ್ನು ಉದ್ದೇಶಿಸಿ ಆಡಿದ ಮಾತನ್ನು ಇಲ್ಲಿ ಬಹಿರಂಗಪಡಿಸುವುದಿಲ್ಲ~ ಎಂದರು.

`ಚೊಚ್ಚಲ ಶತಕ ಸಂತಸ ಉಂಟುಮಾಡಿದೆ~ ಎಂದ ಕೊಹ್ಲಿ, `ಸಣ್ಣ ಹುಡುಗನಾಗಿದ್ದಾಗ ಇಂತಹ ಕನಸು ಕಂಡಿದ್ದೆ. ಅದು ಈಡೇರಿದೆ~ ಎಂದು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.