ಸೋನೆಪತ್ (ಪಿಟಿಐ): `ಆ ನಾಲ್ಕು ವರ್ಷಗಳು ನನ್ನ ಪಾಲಿಗೆ ಮುಳ್ಳಿನ ಹಾಸಿಗೆಯಂತಿದ್ದವು. ಅದೆಷ್ಟೊ ರಾತ್ರಿಗಳು ನಿದ್ದೆ ಇಲ್ಲದೇ ಕಳೆದಿದ್ದೆ. ಏಕೆಂದರೆ 2008ರ ಬೀಜಿಂಗ್ ಒಲಿಂಪಿಕ್ಸ್ನ ಕ್ವಾರ್ಟರ್ ಫೈನಲ್ನಲ್ಲಿ ಸೋಲು ಕಂಡಿದ್ದ ಕಹಿ ಕ್ಷಣ ಮತ್ತೆ ಮತ್ತೆ ನನ್ನನ್ನು ಕಾಡುತಿತ್ತು~

-ಈ ಮಾತು ಹೇಳಿದ್ದು ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ಯೋಗೀಶ್ವರ್ ದತ್. `ಈ ಬಾರಿ ಕಂಚಿನ ಪದಕದ ಸಾಧನೆ ಮಾಡಲು ಸಾಧ್ಯವಾಗಿದ್ದು ನನಗೆ ಸಮಾಧಾನ ಉಂಟು ಮಾಡಿದೆ. ನಾಲ್ಕು ವರ್ಷಗಳ ಬಳಿಕ ಸರಿಯಾಗಿ ನಿದ್ದೆ ಮಾಡಲು ಅವಕಾಶ ಮಾಡಿಕೊಟ್ಟಿದೆ~ ಎಂದರು.

`ಕೊನೆಗೂ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಲು ನನಗೆ ಸಾಧ್ಯವಾಗಿದೆ. ಅದಕ್ಕೆ ದೇವರಿಗೆ ಧನ್ಯವಾದ ಹೇಳಬೇಕು. ಈಗ ಖುಷಿಯಿಂದ ನಿದ್ದೆ ಮಾಡಬಹುದು~ ಎಂದು ದತ್ ನುಡಿದಿದ್ದಾರೆ. ಅವರು 60 ಕೆ.ಜಿ. ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು.

`ಲಂಡನ್ನಲ್ಲಿ ಪದಕ ಗೆಲ್ಲುವ ವಿಶ್ವಾಸವಿತ್ತು. ಆದರೆ ಈ ಬಾರಿ ನನಗೆ ಕಠಿಣ ಡ್ರಾ ಲಭಿಸಿತ್ತು. ಹಾಗಾಗಿ ಚಿನ್ನದ ಪದಕದೊಂದಿಗೆ ಹಿಂತಿರುಗುವ ಆಸೆ ಈಡೇರಲಿಲ್ಲ. ಆ ಸಾಧನೆ ಮಾಡಲು ಸಾಧ್ಯವಾಗದ್ದಕ್ಕೆ ಇದು ನಾನು ನೀಡುತ್ತಿರುವ ಕಾರಣವಲ್ಲ. ಆದರೆ ಯಾರು ಎದುರಾಳಿ ಎಂಬುದರ ಮೇಲೂ ಫಲಿತಾಂಶ ಅಡಗಿರುತ್ತದೆ~ ಎಂದು 29 ವರ್ಷ ವಯಸ್ಸಿನ ಯೋಗೀಶ್ವರ್ ಹೇಳಿದರು.

`ನಾನು ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ರಷ್ಯಾದ ಬೆಸಿಕ್ ಕುಡುಖೋವ್ ಎದುರು ಪೈಪೋಟಿ ನಡೆಸಿದೆ. ಕುಡುಖೋವ್ ಈ ಬಾರಿ ಬೆಳ್ಳಿ ಪದಕ ಗೆದ್ದರು. ಜೊತೆಗೆ ಅವರು ನಾಲ್ಕು ಬಾರಿಯ ವಿಶ್ವ ಚಾಂಪಿಯನ್. ಬೀಜಿಂಗ್ನಲ್ಲಿ ಕಂಚು ಜಯಿಸಿದ್ದರು. ಅವರ ಎದುರು ಸೋತರೂ ಮತ್ತೊಂದು ಅವಕಾಶ ಸಿಗಲಿದೆ ಎಂಬುದು ನನಗೆ ಗೊತ್ತಿತ್ತು. ಏಕೆಂದರೆ ಕುಡುಖೋವ್ ಫೈನಲ್ ತಲುಪುವ ವಿಶ್ವಾಸ ನನಗಿತ್ತು~ ಎಂದು ಅವರು ವಿವರಿಸಿದರು.

2009ರಲ್ಲಿ ಮಂಡಿ ನೋವಿನಿಂದ ದತ್ ಒಂದು ವರ್ಷ ಕುಸ್ತಿಯಿಂದ ಹೊರ ಉಳಿದಿದ್ದರು. ಹಾಗಾಗಿ ಕುಸ್ತಿಯನ್ನೇ ತ್ಯಜಿಸುವ ಹಂತ ತಲುಪಿದ್ದರು. ಆದರೆ ಪದಕ ಗೆಲ್ಲಬೇಕೆಂಬ ಅವರ ಛಲ ಅದಕ್ಕೆ ಅವಕಾಶ ನೀಡಲಿಲ್ಲ.

ಈ ಬಾರಿಯ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಸಿಗಬಹುದೇ ಎಂಬುಕ್ಕೆ ಪ್ರತಿಕ್ರಿಯಿಸಿದ ದತ್, `ಆ ಪುರಸ್ಕಾರ ನನಗೆ ಲಭಿಸುತ್ತದೆಯೇ ಇಲ್ಲವೇ ನನಗೆ ಗೊತ್ತಿಲ್ಲ. ಈ ವರ್ಷ ಅಲ್ಲದಿದ್ದರೂ ಮುಂದಿನ ವರ್ಷ ಸಿಗಬಹುದು. ಆದರೆ ಇಷ್ಟು ದಿನ ನನ್ನ ಹೃದಯ ಒಲಿಂಪಿಕ್ಸ್ ಪದಕಕ್ಕಾಗಿ ಮಿಡಿಯುತಿತ್ತು. ಅದರಲ್ಲಿ ನಾನು ಯಶಸ್ವಿಯಾಗಿದ್ದೇನೆ. ಆ ಖುಷಿಯಲ್ಲಿ ನಾನೀಗ ತೇಲುತ್ತಿದ್ದೇನೆ~ ಎಂದರು.

2016ರಲ್ಲಿ ರಯೋ ಡಿ ಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲೂ ಸ್ಪರ್ಧಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. `ನನಗೀಗ 29 ವರ್ಷ. ಮುಂದಿನ ಒಲಿಂಪಿಕ್ಸ್ ಆಗಮನಕ್ಕೆ ಇನ್ನೂ 4 ವರ್ಷಗಳಿವೆ. ಫಿಟ್ನೆಸ್ ಕಾಯ್ದುಕೊಂಡರೆ ಆ ಕ್ರೀಡಾ ಮೇಳದಲ್ಲಿ ಸ್ಪರ್ಧಿಸಬಹುದು. ಅದಕ್ಕೂ ಮೊದಲು 2014ರ ಏಷ್ಯನ್ ಕೂಟದಲ್ಲಿ ಉತ್ತಮ ಸಾಧನೆ ತೋರಬೇಕು~ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.