ಬೆಂಗಳೂರು: ಕೇರಳದ ಎಂಎಸ್ಪಿ ಎಚ್ಎಸ್ಎಸ್ ಪ್ರೌಢಶಾಲಾ ತಂಡ ಬಿಡಿಎಫ್ಎ ಹಾಗೂ ಪ್ರೊಕಾಮ್ ಇಂಟರ್ ನ್ಯಾಷನಲ್ ಲಿಮಿಟೆಡ್ ಆಶ್ರಯದಲ್ಲಿ ನಡೆಯುತ್ತಿರುವ ಮಹೀಂದ್ರಾ ಯೂತ್ ಚಾಲೆಂಜ್ ಅಂತರ ಶಾಲಾ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ 3-0ಗೋಲುಗಳಿಂದ ಗೋವಾದ ಬ್ರಿಟ್ಟೊ ಶಾಲಾ ತಂಡವನ್ನು ಮಣಿಸಿತು.

ವಿಜಯಿ ತಂಡದ ಮಹಮ್ಮದ್ ಸಾಜಿದ್ ಖಾನ್ 9 ಹಾಗೂ 18ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ರೆಹಮಾನ್ 35ನೇ ನಿಮಿಷದಲ್ಲಿ ಗೋಲು ತಂದಿಟ್ಟು ಗೆಲುವಿನ ರೂವಾರಿಯೆನಿಸಿದರು.

ಎಂಎಸ್ಪಿ ಶಾಲೆ ವಿರಾಮದ ವೇಳೆಗೆ 3-0ರಲ್ಲಿ ಮುನ್ನಡೆ ಸಾಧಿಸಿತ್ತು. ಎರಡು ಗೋಲುಗಳನ್ನು ಗಳಿಸಿದ ಸಾಜಿದ್ `ಪಂದ್ಯ ಶ್ರೇಷ್ಠ~ ಗೌರವ ಪಡೆದರು.

ದಿನದ ಇತರ ಪಂದ್ಯಗಳಲ್ಲಿ ಕೋಲ್ಕತ್ತದ ಪಂಧು ಎಸ್ಬಿಎಸ್ ಪ್ರೌಢಶಾಲೆ 3-0ಗೋಲುಗಳಿಂದ ಮುಂಬೈನ ಡಾನ್ ಬಾಸ್ಕೊ ಪ್ರೌಢಶಾಲಾ ತಂಡದ ಮೇಲೂ, ದೆಹಲಿಯ ಸಿಆರ್ಪಿಎಫ್ ಶಾಲೆ 1-0 ಗೋಲಿನಿಂದ ಆತಿಥೇಯ ಬೆಂಗಳೂರಿನ ಅಲೋಶಿಯಸ್ ಶಾಲಾ ತಂಡದ ವಿರುದ್ಧವೂ ಗೆಲುವು ಸಾಧಿಸಿತು. ಸಿಆರ್ಪಿಎಫ್ ತಂಡದ ದಿನೇಶ್ ಸುಹಾಗ್ 41ನೇ ನಿಮಿಷದಲ್ಲಿ ಗೋಲು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.