ನವದೆಹಲಿ (ಪಿಟಿಐ/ ಐಎ ಎನ್‌ಎಸ್): ಭಾರತೀಯ ಒಲಿಂಪಿಕ್ ಸಂಸ್ಥೆಯು (ಐಒಎ) ತನ್ನ ನಿರ್ದೇಶ ನದಂತೆ ಸಂವಿಧಾನದಲ್ಲಿ ತಿದ್ದುಪಡಿ ತರಲು ಒಪ್ಪಿರುವುದಕ್ಕೆ ಅಂತರರಾ ಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಹರ್ಷ ವ್ಯಕ್ತಪಡಿಸಿದೆ.

ಜೊತೆಗೆ ಬಹು ಬೇಗನೆ ತನ್ನ ಸಂಸ್ಥೆಗೆ ಚುನಾವಣೆ ನಡೆಸಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಅವಕಾಶ ಪಡೆಯಲಿ ಎಂದು ಸಲಹೆ ನೀಡಿದೆ.
ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಕಾರ್ಯಕಾರಿ ಸಮಿತಿ ಸಭೆಯಲ್ಲಿ ,ಭ್ರಷ್ಟಾಚಾರ ಒಳಗೊಂಡಂತೆ ಇತರ ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವವರನ್ನು ಇನ್ನು ಮುಂದೆ ಸಂಸ್ಥೆಯ ಚುನಾವಣೆ ಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸ ಬೇಕೆಂಬ ಮಹತ್ವದ ತಿದ್ದುಪಡಿ ತರಲು ಐಒಎ ಸಮ್ಮತಿಸಿರುವುದಕ್ಕೆ ಸಭೆಯಲ್ಲಿ ಸಮಾಧಾನ ವ್ಯಕ್ತಪಡಿಸ ಲಾಯಿತು.

ಇತ್ತೀಚಿನ ದಿನಗಳಲ್ಲಿ ಐಒಎ ನಲ್ಲಿ ನಡೆದ ಸಂವಿಧಾನ ತಿದ್ದುಪಡಿ ಸೇರಿದಂತೆ, ಫೆಬ್ರುವರಿ 9ಕ್ಕೆ ಚುನಾವಣೆ ನಡೆಸುವ ತೀರ್ಮಾನ ದಂತಹ ಕೆಲ ಸಕಾರಾತ್ಮಕ ಬೆಳವಣಿಗೆಗಳನ್ನು ಸಭೆ ಸ್ವಾಗತಿಸಿತು.

‘ಐಒಎ ಮೇಲಿನ ನಿರ್ಬಂಧ ಮುಂದುವರೆಯಲಿದೆ. ಮುಂದಿನ ವರ್ಷ ನಡೆಯಲಿರುವ ಸೋಚಿ ಒಲಿಂಪಿಕ್ಸ್ ನಲ್ಲಿ ಭಾರತೀಯ ಸ್ಪರ್ಧಿಗಳು ರಾಷ್ಟ್ರ ಧ್ವಜದಡಿ ಯಲ್ಲಿಯೇ ಪಾಲ್ಗೊಳ್ಳಲಿದ್ದಾರೆ. ಒಂದು ವೇಳೆ ಐಒಎ ಫೆಬ್ರುವರಿ 9 ರ ಒಳಗಾಗಿ ಚುನಾವಣೆ ನಡೆಸಲು ವಿಫಲವಾದರೆ ಸ್ಪರ್ಧಿಗಳು ಒಲಿಂಪಿಕ್ ಧ್ವಜದಡಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ’ ಎಂದು ಬಾಕ್ ತಿಳಿಸಿದ್ದಾರೆ.

ಸಿಂಗ್ ಸಂತಸ: ಐಒಎ ಮೇಲಿನ ನಿಷೇಧವನ್ನು ಹಿಂಪಡೆ ಯಲು ನಿರ್ಧರಿಸಿರುವ ಐಒಸಿ ಕ್ರಮವನ್ನು ಕೇಂದ್ರ ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ಸ್ವಾಗತಿಸಿದ್ದಾರೆ.

ಐಒಸಿಯ ನಿರ್ಧಾರದಿಂದ ಭಾರತದ ಕ್ರೀಡಾಪಟುಗಳು ಒಲಿಂ ಪಿಕ್ಸ್, ಏಷಿಯನ್ ಕ್ರೀಡಾಕೂಟ ಮತ್ತು ಕಾಮನ್‌ವೆಲ್ತ್ ಕ್ರೀಡಾ ಕೂಟಗಳಲ್ಲಿ ತ್ರಿವರ್ಣ ಧ್ವಜ ದಡಿಯಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.