ಕೊಲಂಬೊ: ಪ್ರಸಕ್ತ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮೈನವಿರೇಳಿಸುವ ಹೋರಾಟಕ್ಕೆ ವೇದಿಕೆ ಸಜ್ಜುಗೊಂಡಿದೆ. ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ ‘ಎ’ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಆತೀಥೇಯ ಶ್ರೀಲಂಕಾ ತಂಡವನ್ನು ಎದುರಿಸಲಿದ್ದು, ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.

ವಿಶ್ವಕಪ್ ಕ್ರಿಕೆಟ್ ಟೂರ್ನಿಗಳಲ್ಲಿ ಆಸೀಸ್ ತಂಡ ಸತತ 31 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈ ಗೆಲುವಿನ ಓಟಕ್ಕೆ ಕುಮಾರ ಸಂಗಕ್ಕಾರ ಬಳಗ ತಡೆ ಒಡ್ಡುವುದೇ ಎಂಬ ಪ್ರಶ್ನೆಗೆ ಶುಕ್ರವಾರ ಉತ್ತರ ಲಭಿಸಿದೆ. ಈ ಪಂದ್ಯ ಒಂದು ರೀತಿಯಲ್ಲಿ ಆಸ್ಟ್ರೇಲಿಯಾದ ವೇಗ ಹಾಗೂ ಶ್ರೀಲಂಕಾದ ಸ್ಪಿನ್ ಬೌಲಿಂಗ್ ನಡುವಿನ ಹೋರಾಟ ಎನಿಸಿದೆ. ಉಭಯ ತಂಡಗಳೂ ಸಂಪೂರ್ಣ ಭಿನ್ನ ಯೋಜನೆಯೊಂದಿಗೆ ಕಣಕ್ಕಿಳಿಯಲಿರುವ ಕಾರಣ ಸಾಕಷ್ಟು ರೋಚಕ ಪೈಪೋಟಿ ನಿರೀಕ್ಷಿಸಬಹುದು.

ಲಂಕಾ ತಂಡ ಸ್ಪಿನ್ ಆಕ್ರಮಣದ ಮೂಲಕ ಆಸ್ಟ್ರೇಲಿಯದ ಮೇಲೆರಗಲು ಸಜ್ಜಾಗಿದೆ. ಅದೇ ವೇಳೆ ರಿಕಿ ಪಾಂಟಿಂಗ್ ಬಳಗ ತನ್ನ ವೇಗಿಗಳನ್ನು ನೆಚ್ಚಿಕೊಂಡಿದೆ. ಮೂವರು ಸ್ಪಿನ್ನರ್ಗಳೊಂದಿಗೆ ಆಡುವ ಸೂಚನೆಯನ್ನು ಲಂಕಾ ನಾಯಕ ಸಂಗಕ್ಕಾರ ಗುರುವಾರ ನೀಡಿದ್ದಾರೆ. ಮುತ್ತಯ್ಯ ಮುರಳೀಧರನ್, ರಂಗನಾ ಹೆರಾತ್ ಮತ್ತು ಅಜಂತಾ ಮೆಂಡಿಸ್ ಅವರು ತಮ್ಮ ವೈವಿಧ್ಯಮಯ ಎಸೆತಗಳ ಮೂಲಕ ಆಸೀಸ್ ಬ್ಯಾಟ್ಸ್ಮನ್ಗಳ ಸಾಮರ್ಥ್ಯ ಪರೀಕ್ಷಿಸಲಿದ್ದಾರೆ.

ಇದರ ಜೊತೆಗೆ ಲಸಿತ್ ಮಾಲಿಂಗ ಅವರ ವೇಗದ ಬೌಲಿಂಗ್ ಕೂಡಾ ಸೇರಿದರೆ, ಆಸೀಸ್ ಬ್ಯಾಟ್ಸ್ಮನ್ಗಳ ಕೆಲಸ ಮತ್ತಷ್ಟು ಕಠಿಣವಾಗಲಿದೆ. ಮಾಲಿಂಗ ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಒಳಗೊಂಡಂತೆ ಆರು ವಿಕೆಟ್ ಪಡೆದಿದ್ದರು.

ಮತ್ತೊಂದೆಡೆ ರಿಕಿ ಪಾಂಟಿಂಗ್ ತನ್ನ ವೇಗಿಗಳಾದ ಬ್ರೆಟ್ ಲೀ. ಮಿಷೆಲ್ ಜಾನ್ಸನ್ ಮತ್ತು ಶಾನ್ ಟೇಟ್ ಅವರನ್ನು ನೆಚ್ಚಿಕೊಂಡಿದ್ದಾರೆ. ಏಕೆಂದರೆ ಆಸೀಸ್ ತಂಡದಲ್ಲಿ ಹೇಳಿಕೊಳ್ಳುವಂತಹ ಸ್ಪಿನ್ನರ್ಗಳು ಇಲ್ಲ. ನಥಾನ್ ಹೌರಿಜ್ ಗಾಯದ ಕಾರಣ ಈ ಟೂರ್ನಿಯಲ್ಲಿ ಆಡುತ್ತಿಲ್ಲ. ಜಾಸನ್ ಕ್ರೇಜಾ ಮತ್ತು ಆಲ್ರೌಂಡರ್ ಸ್ಟೀವನ್ ಸ್ಮಿತ್ ಅವರ ಸ್ಪಿನ್ ಎಷ್ಟಮಟ್ಟಿಗೆ ಪರಿಣಾಮಕಾರಿಯಾಗುತ್ತದೆ ಎಂಬುದನ್ನು ನೋಡಬೇಕು.

ಬ್ಯಾಟಿಂಗ್ನಲ್ಲಿ ಉಭಯ ತಂಡಗಳು ಸಮಬಲ ಹೊಂದಿವೆ. ಆದರೆ ತವರು ನೆಲದಲ್ಲಿ ಆಡುವುದರಿಂದ ಲಂಕಾ ಅಲ್ಪ ಮೇಲುಗೈ ಪಡೆದಿರುವುದು ನಿಜ. ತಿಲಕರತ್ನೆ ದಿಲ್ಶಾನ್, ಮಾಹೇಲ ಜಯವರ್ಧನೆ ಮತ್ತು ಕುಮಾರ ಸಂಗಕ್ಕಾರ ಸಿಡಿದು ನಿಂತರೆ ಲಂಕಾಕ್ಕೆ ದೊಡ್ಡ ಮೊತ್ತ ಪೇರಿಸುವುದು ಕಷ್ಟವಾಗದು.

ಆಸೀಸ್ ತಂಡದ ಯಶಸ್ಸು ಶೇನ್ ವ್ಯಾಟ್ಸನ್ ಮೇಲೆ ನೆಲೆನಿಂತಿದೆ. ಈ ಆರಂಭಿಕ ಆಟಗಾರ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಅದೇ ರೀತಿ ಸ್ಪಿನ್ ಬೌಲಿಂಗ್ನ್ನು ಚೆನ್ನಾಗಿ ಎದುರಿಸಬಲ್ಲ ಮೈಕಲ್ ಕ್ಲಾರ್ಕ್ ಅವರಿಗೂ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಲಿಕ್ಕಿದೆ.

ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್ನಲ್ಲಿ ಇದುವರೆಗೆ ಒಟ್ಟು ಏಳು ಸಲ ಪರಸ್ಪರ ಪೈಪೋಟಿ ನಡೆಸಿವೆ. ಇದರಲ್ಲಿ ಆರು ಸಲ ಕಾಂಗರೂ ನಾಡಿನವರು ಜಯ ಸಾಧಿಸಿದ್ದಾರೆ. ಲಂಕಾ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿದೆ. ಆ ಏಕೈಕ ಗೆಲುವು 1996ರ ಟೂರ್ನಿಯ ಫೈನಲ್ನಲ್ಲಿ ದಾಖಲಾಗಿತ್ತು.
ಶ್ರೀಲಂಕಾ
ಕುಮಾರ ಸಂಗಕ್ಕಾರ (ನಾಯಕ), ಮಾಹೇಲ ಜಯವರ್ಧನೆ, ತಿಲಕರತ್ನೆ ದಿಲ್ಶಾನ್, ಉಪುಲ್ ತರಂಗ, ತಿಲಾನ್ ಸಮರವೀರ, ಚಾಮರ ಸಿಲ್ವಾ, ಚಾಮರ ಕಪುಗೆಡೆರಾ, ಆ್ಯಂಗೆಲೊ ಮ್ಯಾಥ್ಯೂಸ್, ತಿಸಾರಾ ಪೆರೇರಾ, ನುವಾನ್ ಕುಲಶೇಖರ, ಲಸಿತ್ ಮಾಲಿಂಗ, ದಿಲ್ಹಾರಾ ಫರ್ನಾಂಡೊ, ಮುತ್ತಯ್ಯ ಮುರಳೀಧರನ್, ಅಜಂತಾ ಮೆಂಡಿಸ್ ಹಾಗೂ ರಂಗನ ಹೆರಾತ್.
ಆಸ್ಟ್ರೇಲಿಯಾ
ರಿಕಿ ಪಾಂಟಿಂಗ್ (ನಾಯಕ), ಮೈಕಲ್ ಕ್ಲಾರ್ಕ್, ಶೇನ್ ವ್ಯಾಟ್ಸನ್, ಬ್ರಾಡ್ ಹಡಿನ್, ಕ್ಯಾಮರೂನ್ ವೈಟ್, ಕಾಲಮ್ ಫರ್ಗ್ಯುಸನ್, ಡೇವಿಡ್ ಹಸ್ಸಿ, ಟಿಮ್ ಪೈನ್, ಸ್ಟೀವನ್ ಸ್ಮಿತ್, ಜಾನ್ ಹೇಸ್ಟಿಂಗ್ಸ್, ಮಿಷೆಲ್ ಜಾನ್ಸನ್, ಜಾಸನ್ ಕ್ರೇಜಾ, ಬ್ರೆಟ್ ಲೀ, ಶಾನ್ ಟೇಟ್.
ಅಂಪೈರ್: ಟೋನಿ ಹಿಲ್ ಮತ್ತು ಇಯಾನ್ ಗೌಲ್ಡ್
ಮೂರನೇ ಅಂಪೈರ್: ಶಾವೀರ್ ತಾರಾಪುರ್;
ಮ್ಯಾಚ್ ರೆಫರಿ: ಕ್ರಿಸ್ ಬ್ರಾಡ್
ಪಂದ್ಯದ ಆರಂಭ: ಮಧ್ಯಾಹ್ನ 2.30ಕ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.