ಪರ್ತ್ (ಪಿಟಿಐ): ರ್ಯಾನ್ ಹ್ಯಾರಿಸ್ (22ಕ್ಕೆ2) ಹಾಗೂ ಮಿಷೆಲ್ ಜಾನ್ಸನ್ (28ಕ್ಕೆ2) ಅವರ ಪ್ರಭಾವಿ ಬೌಲಿಂಗ್ ದಾಳಿ ನೆರವಿನಿಂದ ಆಸ್ಟ್ರೇಲಿಯಾ ತಂಡದವರು ಇಲ್ಲಿ ನಡೆಯು ತ್ತಿರುವ ಇಂಗ್ಲೆಂಡ್ ವಿರುದ್ಧದ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಗೆಲುವಿನ ಸನಿಹ ತಲುಪಿದ್ದಾರೆ. ಡಬ್ಲ್ಯುಎಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ 391 ರನ್‌ಗಳ ಗುರಿ ಬೆನ್ನಟ್ಟಿರುವ ಪ್ರವಾಸಿ ಇಂಗ್ಲೆಂಡ್ ತನ್ನ ಎರಡನೇ ಇನಿಂಗ್ಸ್‌ನಲ್ಲಿ ಮೂರನೇ ದಿನದಾಟದ ಅಂತ್ಯಕ್ಕೆ 27 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ.

ಇನ್ನೂ ಎರಡು ದಿನಗಳ ಆಟ ಬಾಕಿ ಉಳಿದಿದ್ದು ಇಂಗ್ಲೆಂಡ್ ತಂಡದವರು ಸೋಲು ತಪ್ಪಿಸಿಕೊಳ್ಳಲು ಪವಾಡವೇ ನಡೆಯಬೇಕು. ಏಕೆಂದರೆ ಈ ತಂಡದ ಐದು ಮಂದಿ ಪ್ರಮುಖ ಬ್ಯಾಟ್ಸ್ ಮನ್‌ಗಳು ಔಟ್ ಆಗಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯಾ ತಂಡ ತನ್ನ ಎರಡನೇ ಇನಿಂಗ್ಸ್‌ನಲ್ಲಿ 86 ಓವರ್‌ಗಳಲ್ಲಿ 309 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.

ಮೈಕ್ ಹಸ್ಸಿ ಅವರ ಅಮೋಘ ಶತಕದಿಂದ ಆ್ಯಷಸ್ ಕ್ರಿಕೆಟ್ ಇತಿಹಾಸ ದಲ್ಲಿ ಸತತ ಆರು ಅರ್ಧ ಶತಕಗಳ ಗಡಿ ದಾಟಿದ ಮೊದಲ ಬ್ಯಾಟ್ಸ್‌ಮನ್ ಎಂಬ ಶ್ರೇಯಕ್ಕೆ ಅವರು ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ ಮೊದಲ ಇನಿಂಗ್ಸ್: 76 ಓವರ್‌ಗಳಲ್ಲಿ 268 ಹಾಗೂ 86 ಓವರ್‌ಗಳಲ್ಲಿ 309 (ಶೇನ್ ವಾಟ್ಸನ್ 95, ಮೈಕ್ ಹಸ್ಸಿ 116, ಸ್ಟೀವನ್ ಸ್ಮಿತ್ 36; ಕ್ರಿಸ್ ಟ್ರೆಮ್ಲೆಟ್ 87ಕ್ಕೆ5, ಸ್ಟೀವನ್ ಫಿನ್ 97ಕ್ಕೆ3); ಇಂಗ್ಲೆಂಡ್ ಮೊದಲ ಇನಿಂಗ್ಸ್: 62.3 ಓವರ್‌ಗಳಲ್ಲಿ 187 ಹಾಗೂ 27 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 81 (ಜೋನಾಥನ್ ಟ್ರಾಟ್ 31; ರ್ಯಾನ್ ಹ್ಯಾರಿಸ್ 22ಕ್ಕೆ2, ಮಿಷೆಲ್ ಜಾನ್ಸನ್ 28ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.