ಮಂಗಳೂರು:  ಬಿಸಿಲಿನ ಝಳ, ಚತುಷ್ಪಥ ಕಾಮಗಾರಿ ದೂಳಿನ ನಡುವೆ ಎಕ್ಕೂರಿನ ಮೀನುಗಾರಿಕಾ ಕಾಲೇಜು ಮೈದಾನದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಗಲ್ಫ್ ಡರ್ಟ್ ಟ್ರ್ಯಾಕ್ ರಾಷ್ಟ್ರೀಯ ಚಾಂಪಿಯನ್ಷಿಪ್ನ ಮೊದಲ ಸುತ್ತಿನಲ್ಲಿ ಅನುಭವಿ ಸ್ಪರ್ಧಿಗಳೂ ಪರದಾಡಿದರು. ಇಂಥದ್ದರಲ್ಲಿ ಬೆಂಗಳೂರಿನ ಚಾಲಕ ವಿ.ಎಸ್. ನರೇಶ್ ನಾಲ್ಕು ಸ್ಪರ್ಧೆಗಳಲ್ಲಿ ಮೊದಲಿಗರಾದರು.

ಯಮಹಾ ಆರ್ಎಕ್ಸ್ 135ರಲ್ಲಿ ಸವಾರಿ ಮಾಡಿದ ನರೇಶ್ ಪ್ರೈವೇಟ್ ಎಕ್ಸ್ಪರ್ಟ್ ಕ್ಲಾಸ್ನ ಎರಡು ರೇಸ್ಗಳಲ್ಲಿ ಮೊದಲಿಗರಾದರು. ಇಂಡಿಯನ್ ಎಕ್ಸ್ಪರ್ಟ್ ಕ್ಲಾಸ್ ಮತ್ತು ಲೋಕಲ್ ಕ್ಲಾಸ್ ಸ್ಪರ್ಧೆಯನ್ನೂ ಗೆದ್ದು ಗಮನ ಸೆಳೆದರು. ಉಳಿದ ರೇಸ್ಗಳಲ್ಲಿ ಟಿವಿಎಸ್ ರೇಸಿಂಗ್ ಟೀಮ್ನ ನುರಿತ ಸ್ಪರ್ಧಿಗಳು ಮೊದಲಿಗರಾದರು. ನರೇಶ್, ಪ್ರೈವೇಟ್ ಎಕ್ಸ್ಪರ್ಟ್ ಕ್ಲಾಸ್ನ ಒಂದು ಸ್ಪರ್ಧೆಯಲ್ಲಿ ಅನುಭವಿಗಳಾದ ಸುಹೇಲ್ ಮತ್ತು ಶಾಬಾಜ್ ಖಾನ್ ಅವರನ್ನು ಕೂಡ ಹಿಂದೆಹಾಕಿದ್ದರು.

ಪ್ರಮೋದ್ ಜೋಶುವ ದಿನದ ಮೊದಲ ಸ್ಪರ್ಧೆ (ಫಾರಿನ್ ಮೋಟರ್ಸೈಕಲ್, ಗ್ರೂಪ್ ಎ, ರೇಸ್ 1) ಗೆದ್ದ ನಂತರ ಪರದಾಡಿದರು. ಅವರ 3ನೇ ರೇಸ್ನಲ್ಲಿ ಒಮ್ಮೆ ಬೈಕ್ (ಆರ್ಟಿಆರ್ 180) ಕೂಡ ಕೈಕೊಟ್ಟಿತ್ತು.
`ಮಂಗಳೂರಿನ ಟ್ರ್ಯಾಕ್, ಡರ್ಟ್ ಟ್ರ್ಯಾಕ್ಗಳಲ್ಲಿ ಸಣ್ಣದು~ ಎಂದು ಕೆಲವು ಸ್ಪರ್ಧಿಗಳು ಹೇಳಿದರು.

ದೂಳು ಕಡಿಮೆ ಮಾಡಲು ನೀರು ಹೆಚ್ಚು ಹಾಕಿದ್ದರಿಂದ ಕೆಲವು ಕಡೆ ಕೆಸರು ಸ್ವಲ್ಪ ಜಾಸ್ತಿಯೇ ಆಗಿ ಸ್ಪರ್ಧಿಗಳು ಎಕ್ಸಿಲೇಟರ್ ಹೆಚ್ಚಿಸುವಾಗ ಎಚ್ಚರಿಕೆ ವಹಿಸಬೇಕಾಯಿತು. ಕರ್ನಾಟಕ ಲೋಕಲ್ ಕ್ಲಾಸ್ನಲ್ಲಿ ಶಿವಮೊಗ್ಗದ ರಾಜೇಂದ್ರ ಆರ್.ಇ. ಉತ್ತಮವಾಗಿ ಬೈಕ್ (ಟಿವಿಎಸ್ ಅಪಾಚೆ) ಚಲಾಯಿಸಿ ಮೊದಲ ಸ್ಥಾನ ಗಳಿಸಿದರು.

ಮುಂಬೈನ ಸ್ಪೋರ್ಟ್ಸ್ ಕ್ರಾಫ್ಟ್, ಮಂಗಳೂರು ಮೋಟಾರ್ಸ್ಪೋರ್ಟ್ಸ್ ಸಂಸ್ಥೆ ಡರ್ಟ್ ಟ್ರ್ಯಾಕ್ ರಾಷ್ಟ್ರೀಯ ಚಾಂಪಿಯನ್ಷಿಪ್ ಐದು ಸುತ್ತುಗಳನ್ನು ಹೊಂದಿದ್ದು, ಮಂಗಳೂರಿನ ಲೆಗ್ ಮೊದಲ ಸುತ್ತು ಆಗಿತ್ತು.

ಫಲಿತಾಂಶಗಳು ಕೆಳಕಂಡಂತೆ ಇವೆ: ಫಾರಿನ್ ಮೋಟಾರ್ಸೈಕಲ್ 250 ಸಿ.ಸಿ.ವರೆಗೆ, ಗ್ರೂಪ್ ಎ ರೇಸ್ 1: ಪ್ರಮೋದ್ ಜೋಶುವ (ಬೆಂಗಳೂರು)-1, ಪಿ.ನಟರಾಜ್ (ಬೆಂಗಳೂರು)-2, ಹರಿತ್ ನೋವಾ (ಬೆಂಗಳೂರು)-3; ಇಂಡಿಯನ್ ನೋವಿಸ್ ಕ್ಲಾಸ್: ಅಭಿಜಿತ್ ಶೆಟ್ಟಿ (ಬೆಂಗಳೂರು)-1, ರಾಜೇಂದ್ರ ಆರ್.ಇ. (ಶಿವಮೊಗ್ಗ)-2, ಡೀನ್ ಜೆ.ಮಸ್ಕರೇನಸ್ (ಮಂಗಳೂರು)-3.

ಪ್ರೈವೇಟ್ ಎಕ್ಪರ್ಟ್ ಕ್ಲಾಸ್, ರೇಸ್ 1: ನರೇಶ್ ವಿ.ಎಸ್. (ಬೆಂಗಳೂರು)-1, ಸುಹೇಲ್ ಅಹಮದ್ (ಬೆಂಗಳೂರು)-2, ಶಾಬಾಜ್ ಖಾನ್ (ಮೈಸೂರು)-3; ಕರ್ನಾಟಕ ಲೋಕಲ್ ಕ್ಲಾಸ್, 165 ಸಿ.ಸಿ., ಗ್ರೂಪ್ ಸಿ: ರಾಜೇಂದ್ರ ಆರ್.ಇ. (ಶಿವಮೊಗ್ಗ)-1, ಡೀನ್ ಜೆ.ಮಸ್ಕರೇನಸ್ -2, ಜಿ.ಎನ್.ಜೀವನ್ (ಬೆಂಗಳೂರು)-3; ಇಂಡಿಯನ್ ಎಕ್ಸ್ಪರ್ಟ್, 260 ಸಿ.ಸಿ.ವರೆಗೆ, ಗ್ರೂಪ್ ಬಿ: ಎಸ್.ಮಧು (ಬೆಂಗಳೂರು)-1, ಪ್ರಮೋದ್ ಜೋಶುವ-2, ಅದ್ನಾದ್ ಮಹಮದ್ (ಬೆಂಗಳೂರು)-3.

ಇಂಡಿಯನ್ ನೋವಿಸ್ ಕ್ಲಾಸ್, 130 ಸಿ.ಸಿ. ಗ್ರೂಪ್ ಸಿ: ಸಾಜೀಶ್ ಆರ್. (ಮಂಗಳೂರು)-1, ಯುವಕುಮಾರ್ ಪಿ.ವಿ. (ಬೆಂಗಳೂರು)-2, ಯೂಸುಫ್ (ಭೋಪಾಲ್)-3.

ಸ್ಕೂಟರ್ 150 ಸಿ.ಸಿ.ವರೆಗೆ ಓಪನ್ ಕ್ಲಾಸ್: ಶಮೀಮ್ ಖಾನ್ (ನಾಸಿಕ್)-1, ಫಿರೋಜ್ ಖಾನ್ (ಔರಂಗಾಬಾದ್)-2, ಜಹಾಂಗೀರ್ ಅನ್ಸಾರಿ (ಮುಂಬೈ)-3; ಪ್ರೈವೇಟ್ ಎಕ್ಸ್ಪರ್ಟ್ ಕ್ಲಾಸ್, 250 ಸಿ.ಸಿ.ವರೆಗೆ, ಗ್ರೂಪ್ ಬಿ: ನರೇಶ್ ವಿ.ಎಸ್. (ಬೆಂಗಳೂರು)-2, ಸೈಯ್ಯದ್ ಹಿದಾಯತ್ಉಲ್ಲ (ಬೆಂಗಳೂರು)-3, ಶಾಬಾಜ್ ಖಾನ್ -3. ಇಂಡಿಯನ್ ನೋವಿಸ್ ಕ್ಲಾಸ್, 165 ಸಿ.ಸಿ.ವರೆಗೆ, ಗ್ರೂಪ್ ಸಿ: ರಾಜೇಂದ್ರ ಆರ್.ಇ. (ಶಿವಮೊಗ್ಗ)-1, ಆಂಥೋನಿ ಬೆನೆಡಿಕ್ಟ್ (ಬೆಂಗಳೂರು)-2.

ಇಂಡಿಯನ್ ಎಕ್ಸ್ಪರ್ಟ್, 260 ಸಿ.ಸಿ. ಗ್ರೂಪ್ ಬಿ, ರೇಸ್ 2: ನರೇಶ್ ವಿ.ಎಸ್. -1, ಹರಿತ್ ನೋವಾ -2, ಎಸ್.ಮಧು-3; ಕರ್ನಾಟಕ ಲೋಕಲ್ ಕ್ಲಾಸ್, 165 ಸಿ.ಸಿ.ವರೆಗೆ, ಗ್ರೂಪ್ ಸಿ; ನರೇಶ್ ವಿ.ಎಸ್. -1, ಎಸ್.ಮಧು-2, ಅರುಣ್ ಬಾಬು ನಾಯ್ಡು (ಬೆಂಗಳೂರು)-3; ಫಾರಿನ್ ಮೋಟರ್ಸೈಕಲ್, 250 ಸಿ.ಸಿ. ಗ್ರೂಪ್ ಎ, ರೇಸ್ 2: ಹರಿತ್ ನೋವಾ -1, ಆರ್.ನಟರಾಜ್ (ಬೆಂಗಳೂರು)-2, ಅದ್ನಾನ್ ಅಹಮದ್ -3.

ಮಂಗಳೂರು ಕ್ಲಾಸ್, 165 ಸಿ.ಸಿ. ಗ್ರೂಪ್ ಸಿ: ಸಾಜೀಶ್ ಆರ್. -1, ಡೀನ್ ಜೆ.ಮಸ್ಕರೇನಾಸ್ -2, ಮಹಮದ್ ನಬೀಲ್ -3; ಓಪನ್ ಫಾರಿನ್ ಪ್ರೈವೇಟ್ ಮೋಟರ್ಸೈಕಲ್, 250 ಸಿ.ಸಿ.ವರೆಗೆ, ಗ್ರೂಪ್ ಎ: ಜಾವೆದ್ ಶೇಖ್ (ಗೋವಾ)-1, ವಿನೀತ್ ವಿ.ಕುರುಪ್ (ನಾಸಿಕ್)-2, ಸುಹೇಲ್ ಅಹ್ಮದ್ (ಬೆಂಗಳೂರು)-3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.