ಕೋಲ್ಕತ್ತ (ಪಿಟಿಐ): ರಾಬಿನ್ ಉತ್ತಪ್ಪ (42; 30 ಎಸೆತ) ಅವರ ಅಬ್ಬರದ ಬ್ಯಾಟಿಂಗ್ ಹಾಗೂ ವೇಗಿ ಉಮೇಶ್ ಯಾದವ್ (13ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ದಾಳಿ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡದವರು ಐಪಿಎಲ್ ಟೂರ್ನಿಯ ಫೈನಲ್ ತಲುಪಿದ್ದಾರೆ.

ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ನೈಟ್ ರೈಡರ್ಸ್ 28 ರನ್ಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಬಗ್ಗುಬಡಿಯಿತು. ಮಳೆಯಿಂದ ಪದೇಪದೇ ಅಡಚಣೆಗೆ ಒಳಗಾದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗೌತಮ್ ಗಂಭೀರ್ ಸಾರಥ್ಯದ ನೈಟ್ ರೈಡರ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತು. ಈ ಗುರಿಗೆ ಉತ್ತರವಾಗಿ ಜಾರ್ಜ್ ಬೇಲಿ ನೇತೃತ್ವದ ಕಿಂಗ್ಸ್ ಇಲೆವೆನ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗಳಿಸಿದ್ದು ಕೇವಲ 135 ರನ್.

ಗಂಭೀರ್ ಎಡವಟ್ಟು: ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಲು ಅವಕಾಶ ಪಡೆದ ನೈಟ್ ರೈಡರ್ಸ್ ತಂಡದವರು ಎರಡನೇ ಓವರ್ನಲ್ಲಿಯೇ ಆಘಾತ ಅನುಭವಿಸಿದರು. ಮಿಷೆಲ್ ಜಾನ್ಸನ್ ಓವರ್ನಲ್ಲಿ ನಾಯಕ ಗಂಭೀರ್ ವಿಕೆಟ್ ಒಪ್ಪಿಸಿದರು. ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ಆಗ ಸ್ವಲ್ಪ ಹೊತ್ತು ಮೌನ.

ಆದರೆ ಆ ಮೌನವನ್ನು ಸೀಳಿದ್ದು ಕರ್ನಾಟಕದ ಉತ್ತಪ್ಪ ಅವರ ಬ್ಯಾಟಿಂಗ್ ಅಬ್ಬರ. ಈ ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿರುವ ಆಟಗಾರ ಎನಿಸಿರುವ ರಾಬಿನ್ 4 ಬೌಂಡರಿ ಹಾಗೂ 2 ಸಿಕ್ಸರ್ ಎತ್ತಿ ಸ್ಥಳೀಯ ಅಭಿಮಾನಿಗಳ ಮೊಗದಲ್ಲಿ ಖುಷಿಗೆ ಕಾರಣವಾದರು. ಅಷ್ಟು ಮಾತ್ರವಲ್ಲದೇ , ತಂಡದ ಮೊತ್ತವನ್ನು ಹೆಚ್ಚಿಸಿದರು. ಅವರಿಗೆ ಮನೀಷ್ ಪಾಂಡೆ (21; 20 ಎ., 3 ಬೌಂ.,) ಉತ್ತಮ ಬೆಂಬಲ ನೀಡಿದರು.

ನಂತರ ಬಂದ ಶಕೀಬ್ ಅಲ್ ಹಸನ್ (18; 16 ಎ., 2 ಬೌಂ.,), ಯೂಸುಫ್ ಪಠಾಣ್ (20; 18 ಎ., 2 ಬೌಂ., 1 ಸಿ.), ರ್ಯಾನ್ ಟೆನ್ ಡಾಶೆಟ್ (17; 10 ಎ., 2 ಸಿ.,), ಸೂರ್ಯಕುಮಾರ್ ಯಾದವ್ (20; 14 ಬೌಂ., 3 ಬೌಂ., 1 ಸಿ,) ಹಾಗೂ ಪಿಯೂಷ್ ಚಾವ್ಲಾ (17; 9 ಎ., 3 ಬೌಂ.,) ಬಿರುಸಿನ ಆಟದ ಮೂಲಕ ಮಿಂಚಿದರು. ಈ ಬ್ಯಾಟ್ಸ್ಮನ್ಗಳು ಗಳಿಸಿದ್ದು ಅಲ್ಪ ಮೊತ್ತವಾದರೂ ಇದರಿಂದ ತಂಡದ ಸ್ಕೋರ್ ಬೆಳೆಯಲು ಸಾಧ್ಯವಾಯಿತು.
ಕಿಂಗ್ಸ್ ಇಲೆವೆನ್ನ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ (4–1–11–2) ಸೊಗಸಾದ ಪ್ರದರ್ಶನ ತೋರಿದರು. ಆದರೆ ಉಳಿದವರಿಂದ ಅದೇ ಮಟ್ಟದ ಪ್ರದರ್ಶನ ಮೂಡಿಬರಲಿಲ್ಲ. ರಿಷಿ ಧವನ್ 44 ರನ್ ನೀಡಿ ದುಬಾರಿಯಾದರು.

ವೀರೂ ವೈಫಲ್ಯ: ಸವಾಲಿನ ಗುರಿ ಎದುರು ವೀರೇಂದ್ರ ಸೆಹ್ವಾಗ್ ಕೈ ಚೆಲ್ಲಿದರು. ಎರಡನೇ ಓವರ್ನಲ್ಲಿಯೇ ಅವರು ವಿಕೆಟ್ ಒಪ್ಪಿಸಿದರು. ಆದರೆ ಮನನ್ ವೋಹ್ರಾ (26; 19 ಎ.,) ಹಾಗೂ ವೃದ್ಧಿಮಾನ್ ಸಹಾ (35; 31 ಎ.,) ಎರಡನೇ ವಿಕೆಟ್ಗೆ 40 ರನ್ ಸೇರಿಸಿ ಭರವಸೆ ಮೂಡಿಸಿದ್ದರು.

ಈ ಹಂತದಲ್ಲಿ ಮಾರ್ನ್ ಮಾರ್ಕೆಲ್ ಹಾಗೂ ಉಮೇಶ್ ಯಾದವ್ ಅವರು ನೈಟ್ ರೈಡರ್ಸ್ ಮೇಲುಗೈ ಸಾಧಿಸಲು ನೆರವಾದರು. ಅಪಾಯಕಾರಿ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಬೇಗನೇ ಪೆವಿಲಿಯನ್ಗೆ ಕಳುಹಿಸುವಲ್ಲಿ ಉಮೇಶ್ ಯಶಸ್ವಿಯಾದರು. ಕಿಂಗ್ಸ್ ಇಲೆವೆನ್ ಏಳು ರನ್ಗಳ ಅಂತರದಲ್ಲಿ ಮೂರು ವಿಕೆಟ್ ಕಳೆದುಕೊಂಡು ಅಪಾಯಕ್ಕೆ ಸಿಲುಕಿತು. ನಾಯಕ ಜಾರ್ಜ್ ಬೇಲಿ (26; 17 ಎಸೆತ) ಅವರ ಪ್ರಯತ್ನ ಕೂಡ ಸಾಕಾಗಲಿಲ್ಲ.
ನೈಟ್ ರೈಡರ್ಸ್ನ ಉಮೇಶ್ ಯಾದವ್ ಅವರಲ್ಲದೇ, ಮಾರ್ಕೆಲ್ (23ಕ್ಕೆ2) ಹಾಗೂ ಪಿಯೂಷ್ ಚಾವ್ಲಾ ಕೂಡ ಗಮನ ಸೆಳೆದರು. ಕಿಂಗ್ಸ್ ಇಲೆವೆನ್ ಬ್ಯಾಟಿಂಗ್ ವೇಳೆ ಮಳೆ ಅಡ್ಡಿಯಾಗಿದ್ದರೆ ಡಕ್ವರ್ಥ್ ಲೂಯಿಸ್ ನಿಯಮ ಅಳವಡಿಸುವ ಸಾಧ್ಯತೆ ಇತ್ತು. ಆದರೆ ಆ ರೀತಿ ಆಗಲಿಲ್ಲ. ಈ ಪಂದ್ಯ ಮಂಗಳವಾರ ರಾತ್ರಿಯೇ ನಡೆಯಬೇಕಿತ್ತು. ಆದರೆ ಮಳೆಯ ಕಾರಣ ಮುಂದೂಡಲಾಗಿತ್ತು.

ನೈಟ್ ರೈಡರ್ಸ್ ತಂಡದವರು ಈ ಟೂರ್ನಿಯ ಆರಂಭದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಕೆಳಗಿನ ಸ್ಥಾನದಲ್ಲಿದ್ದರು. ಆದರೆ ಲೀಗ್ ಹಂತದ ಕೊನೆಯ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ತೋರಿ ಅಂತಿಮ ಘಟ್ಟದಲ್ಲಿ ಆಡಲು ಅವಕಾಶ ಪಡೆದಿದ್ದಾರೆ. ಈ ತಂಡ 2012ರಲ್ಲಿ ಚಾಂಪಿಯನ್ ಆಗಿತ್ತು.

ಎರಡನೇ ಕ್ವಾಲಿಫೈಯರ್ನಲ್ಲಿ ಆಡಲು ಅವಕಾಶ
ಕಿಂಗ್ಸ್ ಇಲೆವೆನ್ ತಂಡದವರು ಈ ಪಂದ್ಯದಲ್ಲಿ ಸೋತಿದ್ದರೂ ಮತ್ತೊಂದು ಅವಕಾಶ ಹೊಂದಿದ್ದಾರೆ. ಏಕೆಂದರೆ ಲೀಗ್ ಹಂತದ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಈ ತಂಡದವರು ಶುಕ್ರವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆಡಲಿದ್ದಾರೆ. ಅದರಲ್ಲಿ ಗೆದ್ದರೆ ಫೈನಲ್ ತಲುಪಲು ಅವಕಾಶವಿದೆ.

ಸ್ಕೋರ್ ವಿವರ
ಕೋಲ್ಕತ್ತ ನೈಟ್ ರೈಡರ್ಸ್ 20 ಓವರ್ಗಳಲ್ಲಿ

8 ವಿಕೆಟ್ ನಷ್ಟಕ್ಕೆ 163
ರಾಬಿನ್ ಉತ್ತಪ್ಪ ಸಿ ಮಿಲ್ಲರ್ ಬಿ ಅಕ್ಷರ್ ಪಟೇಲ್ 42
ಗೌತಮ್ ಗಂಭೀರ್ ಸಿ ಬೇಲಿ ಬಿ ಮಿಷೆಲ್ ಜಾನ್ಸನ್ 01
ಮನೀಷ್ ಪಾಂಡೆ ಬಿ ಅಕ್ಷರ್ ಪಟೇಲ್ 21
ಶಕೀಬ್ ಅಲ್ ಹಸನ್ ಸಿ ಮಿಲ್ಲರ್ ಬಿ ಕರಣ್ವೀರ್ ಸಿಂಗ್ 18
ಯೂಸುಫ್ ಪಠಾಣ್ ಸಿ ಮಿಲ್ಲರ್ ಬಿ ಕರಣವೀರ್ ಸಿಂಗ್ 20
ಟೆನ್ ಡಾಶೆಟ್ ಸಿ ವೋಹ್ರಾ ಬಿ ಮಿಷೆಲ್ ಜಾನ್ಸನ್ 17
ಸೂರ್ಯಕುಮಾರ್ ಯಾದವ್ ಬಿ ಕರಣ್ವೀರ್ ಸಿಂಗ್ 20
ಪಿಯೂಷ್ ಚಾವ್ಲಾ ಔಟಾಗದೆ 17
ಸುನಿಲ್ ನಾರಾಯಣ್ ರನ್ಔಟ್ (ಜಾನ್ಸನ್) 00
ಮಾರ್ನ್ ಮಾರ್ಕೆಲ್ ಔಟಾಗದೆ 00
ಇತರೆ (ಲೆಗ್ಬೈ–4, ವೈಡ್–3) 07

ವಿಕೆಟ್ ಪತನ: 1–2 (ಗಂಭೀರ್; 1.2); 2–67 (ಉತ್ತಪ್ಪ; 8.2); 3–67 (ಪಾಂಡೆ; 8.5); 4–108 (ಶಕೀಬ್; 14.2); 5–108 (ಯೂಸುಫ್; 14.3); 6–145 (ಸೂರ್ಯ ಕುಮಾರ್; 17.6); 7–147 (ಡಾಶೆಟ್; 18.4); 8–159 (ಸುನಿಲ್; 19.5)
ಬೌಲಿಂಗ್: ಪರ್ವಿಂದರ್ ಅವಾನ 4–0–33–0, ಮಿಷೆಲ್ ಜಾನ್ಸನ್ 4–0–31–2 (ವೈಡ್–2), ಅಕ್ಷರ್ ಪಟೇಲ್ 4–1–11–2 ,ರಿಶಿ ಧವನ್ 4–0–44–0, ಕರಣ್ವೀರ್ ಸಿಂಗ್ 4–0–40–3 (ವೈಡ್–1)
ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್ಗಳಲ್ಲಿ
8 ವಿಕೆಟ್ ನಷ್ಟಕ್ಕೆ 135
ವೀರೇಂದ್ರ ಸೆಹ್ವಾಗ್ ಸಿ ಶಕೀಬ್ ಬಿ ಉಮೇಶ್ ಯಾದವ್ 02
ಮನನ್ ವೋಹ್ರಾ ಸಿ ಉಮೇಶ್ ಯಾದವ್ ಬಿ ಮಾರ್ನ್ ಮಾರ್ಕೆಲ್ 26
ವೃದ್ಧಿಮಾನ್ ಸಹಾ ಸಿ ಉಮೇಶ್ ಯಾದವ್ ಬಿ ಮಾರ್ನ್ ಮಾರ್ಕೆಲ್ 35
ಗ್ಲೆನ್ ಮ್ಯಾಕ್ಸ್ವೆಲ್ ಎಲ್ಬಿಡಬ್ಲ್ಯು ಬಿ ಉಮೇಶ್ ಯಾದವ್ 06
ಡೇವಿಡ್ ಮಿಲ್ಲರ್ ಬಿ ಪಿಯೂಷ್ ಚಾವ್ಲಾ 08
ಅಕ್ಷರ್ ಪಟೇಲ್ ರನ್ಔಟ್ (ಚಾವ್ಲಾ/ಉತ್ತಪ್ಪ) 02
ಜಾರ್ಜ್ ಬೇಲಿ ಸಿ ಮನೀಷ್ ಪಾಂಡೆ ಬಿ ಉಮೇಶ್ ಯಾದವ್ 26
ರಿಷಿ ಧವನ್ ಸ್ಟಂಪ್ಡ್ ಉತ್ತಪ್ಪ ಬಿ ಶಕೀಬ್ ಅಲ್ ಹಸನ್ 14
ಮಿಷೆಲ್ ಜಾನ್ಸನ್ ಔಟಾಗದೆ 10
ಕರಣ್ವೀರ್ ಸಿಂಗ್ ಔಟಾಗದೆ 01
ಇತರೆ (ಲೆಗ್ಬೈ–3, ವೈಡ್–2) 05
ವಿಕೆಟ್ ಪತನ: 1–5 (ಸೆಹ್ವಾಗ್; 1.1); 2–45 (ವೋಹ್ರಾ; 5.5); 3–55 (ಮ್ಯಾಕ್ಸ್ವೆಲ್; 7.5); 4–80 (ಸಹಾ; 11.6); 5–82 (ಮಿಲ್ಲರ್; 12.2); 6–87 (ಅಕ್ಷರ್; 13.3); 7–117 (ರಿಷಿ; 17.3); 8–134 (ಬೇಲಿ; 19.1)

ಬೌಲಿಂಗ್: ಮಾರ್ನ್ ಮಾರ್ಕೆಲ್ 4–0–23–2 (ವೈಡ್–1), ಉಮೇಶ್ ಯಾದವ್ 4–0–13–3 (ವೈಡ್–1), ಸುನಿಲ್ ನಾರಾಯಣ್ 4–0–30–0, ಶಕೀಬ್ ಅಲ್ ಹಸನ್ 4–0–43–1, ಪಿಯೂಷ್ ಚಾವ್ಲಾ 4–0–23–1
ಫಲಿತಾಂಶ: ಕೋಲ್ಕತ್ತ ನೈಟ್ ರೈಡರ್ಸ್ಗೆ 28
ರನ್ಗಳ ಗೆಲುವು ಹಾಗೂ ಫೈನಲ್ ಪ್ರವೇಶ.
ಪಂದ್ಯ ಶ್ರೇಷ್ಠ: ಉಮೇಶ್ ಯಾದವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.