ನವದೆಹಲಿ: ಹೈದರಾಬಾದ್ ಪಂದ್ಯದ ಸೋಲಿನಿಂದ ನಮ್ಮ ತಂಡಕ್ಕೆ ಬಹಳ ಬೇಸರವಾಗಿದೆ. ನಾವು ಚೆನ್ನಾಗಿ ಆಡಲಿಲ್ಲ ಎಂದು ಇಂಗ್ಲೆಂಡ್ ಬೌಲರ್ ಜೇಡ್ ಡೆನ್‌ಬ್ಯಾಚ್ ವಿಷಾದ ವ್ಯಕ್ತಪಡಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಇನ್ನೂ ಸರಣಿ ಬಾಕಿಯಿದೆ. ನಾಲ್ಕು ಪಂದ್ಯಗಳಲ್ಲಿ ನಮ್ಮ ಆಟ ಪ್ರದರ್ಶಿಸುತ್ತೇವೆ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ~ ಎಂದರು.

`ಮಹೇಂದ್ರಸಿಂಗ್ ದೋನಿ ಒಳ್ಳೆಯ ನಾಯಕನ ಜೊತೆಗೆ ಉತ್ತಮ ಆಟಗಾರನೂ ಹೌದು. ನಮ್ಮ ಬೌಲಿಂಗ್ ಉತ್ತಮಪಡಿಸಿಕೊಳ್ಳುವ ಅಗತ್ಯವಿದೆ. ಪವರ್‌ಪ್ಲೇಗಳು ಕುತೂಹಲದ ಕ್ಷಣಗಳು. ಅದರಲ್ಲಿಯೇ ನಾವು ರನ್‌ಗಳನ್ನು ತಡೆಯಬೇಕು~ ಎಂದು ಹೇಳಿದರು.

`ವಿದೇಶದ ನೆಲದಲ್ಲಿ ಆಡುವಾಗ, ಅದರಲ್ಲೂ ವಿಶ್ವಚಾಂಪಿಯನ್ ತಂಡದ ವಿರುದ್ಧ ಆಡುವಾಗ ಸೋಲಿನ ಫಲಿತಾಂಶ ಸಹಜ. ಅವರ ನೆಲದಲ್ಲಿಯೇ ಅವರನ್ನು ಸೋಲಿಸುವುದು ಕಷ್ಟದ ಕೆಲಸ. ಆದರೆ, ನಾವು ಪುಟಿದು ನಿಲ್ಲುತ್ತೇವೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.

`ಸ್ಪಿನ್ ವಿಭಾಗವೊಂದೇ ನಮ್ಮ ಸಮಸ್ಯೆಯಲ್ಲ. ಎಲ್ಲ ವಿಭಾಗಗಳಲ್ಲಿಯೂ ನಾವು ಕೆಟ್ಟ ಪ್ರದರ್ಶನ ನೀಡಿದ್ದು ನಮ್ಮ ಸೋಲಿಗೆ ಕಾರಣ. ಮುಂದಿನ ಪಂದ್ಯಗಳಲ್ಲಿ ಸಂಪೂರ್ಣ ಸಾಮರ್ಥ್ಯ ಪ್ರದರ್ಶಿಸುತ್ತೇವೆ~ ಎಂದರು.

`ಇಲ್ಲಿನ ಪಿಚ್‌ಗಳು ತುಂಬಾ ವಿಭಿನ್ನವಾಗಿವೆ. ಇದಕ್ಕೆ ಅನುಗುಣವಾಗಿ ನಾವು ಕಾರ್ಯತಂತ್ರ ರೂಪಿಸುವ ಅಗತ್ಯವಿದೆ. ಎಲ್ಲ ಸವಾಲುಗಳನ್ನು ಎದುರಿಸಿಯೂ ಜಯಿಸುವ ಹಾದಿಯನ್ನು ಕಂಡುಹಿಡಿಯುತ್ತಿದ್ದೇವೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.