ಮೈಸೂರು: ಚುರುಕಿನ ಆಟಕ್ಕೆ ಹೆಸರಾದ ಮಣಿಪುರದ ವನಿತೆಯರು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4ನೇ ರಾಷ್ಟ್ರೀಯ ಜೂನಿಯರ್ ಮಹಿಳೆಯರ ಹಾಕಿ ಚಾಂಪಿಯನ್ಷಿಪ್ನಲ್ಲಿ ಶುಕ್ರವಾರವೂ ಗೆಲುವಿನ ಓಟವನ್ನು ಮುಂದುವರಿಸಿದರು.

ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಮಿಂಚಿದ ಸೋನಿಯಾದೇವಿ ನೆರವನಿಂದ ಮಣಿಪುರ ತಂಡವು 6–0ಯಿಂದ ವಿದರ್ಭ ತಂಡದ ವಿರುದ್ಧ ಜಯ ಗಳಿಸಿತು.

ಮೊದಲೆರಡೂ ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಮಣಿಪುರ ತಂಡವು ಶುಕ್ರವಾರ ಮೂರನೇ ಪಂದ್ಯದ ಆರಂಭದಿಂದಲೂ ಎದುರಾಳಿಗಳ ಆಟ ನಡೆಯಲು ಬಿಡಲಿಲ್ಲ. ಮೊದಲ 16 ನಿಮಿಷಗಳವರೆಗೂ ತೀವ್ರ ಹೋರಾಟ ಪ್ರದರ್ಶಿಸಿದ ವಿದರ್ಭದ ಆಟಗಾರ್ತಿಯರ ವಿರುದ್ಧ 17ನೇ ನಿಮಿಷದಲ್ಲಿ ಮಣಿಪುರ ಮೊದಲ ಗೋಲಿನ ಮುನ್ನಡೆ ಗಳಿಸಿತು.

ನಂತರ ನಾಯಕಿ ಗೀತಾರಾಣಿ (22ನಿ) ತಮ್ಮ ಕೈಚಳಕ ತೋರಿದರು. ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಿನಲ್ಲಿ ಪರಿವರ್ತಿಸಿ ಸಂಭ್ರಮಿಸಿದರು. ಪ್ರಥಮಾರ್ಧದಲ್ಲಿ ತಂಡವು 2–0ಗೋಲುಗಳಿಂದ ಮುನ್ನಡೆ ಪಡೆಯಿತು. ನಂತರದ ಅವಧಿಯಲ್ಲಿ ವಿದ್ಯಾರಾಣಿ ದೇವಿ (39ನಿ, 47ನಿ) ಎರಡು ಮತ್ತು ಸೋನಿಯಾದೇವಿ (49ನಿ, 60ನಿ) ಎರಡು ಗೋಲು ಗಳಿಸಿದರು.

ಉತ್ತರಾ ಖಂಡಕ್ಕೆ ಜಯ:
ಮೊದಲ ದಿನದಿಂದಲೂ ಸೋಲಿನ ಕಹಿ ಉಣ್ಣುತ್ತಿರುವ ತ್ರಿಪುರ ತಂಡದ ಸೋಲಿನ ಸರಣಿ ಮೂರನೇ ದಿನವೂ ಮುಂದುವರೆಯಿತು. ಉತ್ತರಾಖಂಡ ತಂಡವು 18–0 (10–0) ಗೋಲುಗಳಿಂದ ತ್ರಿಪುರ ತಂಡವನ್ನು ಪರಾಭವಗೊಳಿಸಿತು.

ಶನಿವಾರದ ಪಂದ್ಯಗಳು:
ಅಸ್ಸಾಂ ವಿರುದ್ಧ ಜಮ್ಮು ಮತ್ತು ಕಾಶ್ಮೀರ (ಬೆಳಿಗ್ಗೆ 7); ಆಂಧ್ರಪ್ರದೇಶ ವಿರುದ್ಧ ಆಸ್ಸಾಂ (ಬೆ. 8.30); ಕೇರಳ ವಿರುದ್ಧ ಚಂಡೀಗಡ ಒಲಿಂಪಿಕ್ಸ್ ಸಂಸ್ಥೆ (ಮ. 2.30); ಗುಜರಾತ್ ವಿರುದ್ಧ ಪುದುಚೇರಿ (ಸಂಜೆ 4).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.