ಗುಡಂಗಾವ್ (ಪಿಟಿಐ): `ದೇವರೇ ನಿನಗೆ ನನ್ನ ಧನ್ಯವಾದಗಳು. ನಾನೀಗ ಮರು ಜೀವ ಪಡೆದಿದ್ದೇನೆ. ನಿಮಗೆ ಜೀವನದಲ್ಲಿ ಎಲ್ಲಾ ಸಿಗಬಹುದು. ಆದರೆ ಸಂತೋಷ ತುಂಬಾ ಮುಖ್ಯವಾದುದು~

-ಕ್ಯಾನ್ಸರ್ಗೆ ಅಮೆರಿಕದಲ್ಲಿ ಯಶಸ್ವಿ ಚಿಕಿತ್ಸೆ ಪಡೆದು ಸ್ವದೇಶಕ್ಕೆ ಹಿಂತಿರುಗಿರುವ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಈ ವಿಷಯ ಹೇಳಿ ಒಮ್ಮೆಲೇ ಭಾವುಕರಾದರು. ಪಕ್ಕದಲ್ಲಿ ಅವರ ವೈದ್ಯ ನಿತೇಶ್ ರೋಹ್ಟಗಿ ಇದ್ದರು.

ಆದರೆ ಕ್ರಿಕೆಟ್ ಆಡಲು ಕಣಕ್ಕಿಳಿಯಲು ಇನ್ನು ಎರಡು ತಿಂಗಳಾದರೂ ಬೇಕು ಎಂದು ಅವರು ಹೇಳಿದರು. `ಇದೊಂದು ನನ್ನ ಜೀವನದ ಅತ್ಯಂತ ಕಠಿಣ ಸಮಯ. ಸಮಸ್ಯೆಗಳು ಪ್ರತಿಯೊಬ್ಬರಿಗೂ ಬರುತ್ತವೆ. ಆದರೆ ನಾನೀಗ ಆ ಸಮಸ್ಯೆಯಿಂದ ಪಾರಾಗಿ ಹೊರಬಂದಿದ್ದೇನೆ~ ಎಂದರು.

`ನಾನು ಮತ್ತೆ ಆಡಬೇಕೆಂಬುದು ಅಭಿಮಾನಿಗಳ ಬಯಕೆ. ಆದರೆ ಚೇತರಿಸಿಕೊಳ್ಳಲು ನನ್ನ ದೇಹಕ್ಕೆ ತುಂಬಾ ಸಮಯಬೇಕು ಎಂಬುದು ನಿಮಗೆಲ್ಲಾ ಗೊತ್ತಿದೆ. ಆರೋಗ್ಯದ ಬಗ್ಗೆ ನಾನು ಕಾಳಜಿ ವಹಿಸಬೇಕು. ಆದರೆ ಆದಷ್ಟು ಬೇಗ ಕಣಕ್ಕಿಳಿಯಲು ಪ್ರಯತ್ನಿಸುತ್ತೇನೆ. ಅದು ಇನ್ನೆರಡು ತಿಂಗಳಲ್ಲಿ ಆಗಬಹುದು. ಆದರೆ ತುಂಬಾ ಕಷ್ಟದ ದಿನಗಳನ್ನು ಕಳೆದು ಬಂದಿದ್ದೇನೆ~ ಎಂದು ಎಡಗೈ ಬ್ಯಾಟ್ಸ್ಮನ್ ಯುವಿ ನುಡಿದರು.

ಶ್ವಾಸಕೋಶದ ನಡುವೆ ಆಗಿದ್ದ ಗೆಡ್ಡೆ ಕರಗಿಸಲು ಅಮೆರಿಕದ ಬಾಸ್ಟನ್ನ ಕ್ಯಾನ್ಸರ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಅವರು ಜನವರಿಯಿಂದ ಮಾರ್ಚ್ವರೆಗೆ ಮೂರು ಹಂತದ ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ ಲಂಡನ್ಗೆ ತೆರಳಿ ವಿಶ್ರಾಂತಿ ಪಡೆದಿದ್ದರು.

`ಅಮ್ಮ ಶಬನಮ್ ನನ್ನ ಬಹುದೊಡ್ಡ ಶಕ್ತಿ. ಅಕಸ್ಮಾತ್ ಅವಳ ನೆರವು ಇಲ್ಲದಿದ್ದರೆ ನನ್ನ ಜೀವನದ ಪಯಣ ಇಲ್ಲಿಯವರೆಗೆ ಬರುತ್ತಿರಲಿಲ್ಲ. ಚಿಕಿತ್ಸೆ ವೇಳೆ ನಾನು ಕೆಲವೊಮ್ಮೆ ಅಳುತ್ತಿದ್ದೆ. ಆಗ ಅಮ್ಮ ನನ್ನನ್ನು ಸಂತೈಸುತ್ತಿದ್ದಳು. ಬೆಳಿಗ್ಗೆ ನಾಲ್ಕು ಗಂಟೆಗೆ ನಾನು ಕೆಮ್ಮುತ್ತಿದ್ದಾಗ ಅವಳು ಎದ್ದು ಕೂರುತ್ತಿದ್ದಳು~ ಎಂದು ಯುವಿ ಮತ್ತೆ ಭಾವುಕರಾದರು.

`ಸೈಕ್ಲಿಂಗ್ ದಂತಕತೆ ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ನನಗೆ ಸ್ಫೂರ್ತಿ ನೀಡಿದ ವ್ಯಕ್ತಿ. 5-6 ವರ್ಷಗಳ ಹಿಂದೆಯೇ ಅವರ ಪುಸ್ತಕ ಓದುತ್ತಿದ್ದೆ. ಆದರೆ ಯಾವುದೊ ಕಾರಣದಿಂದ ಅರ್ಧಕ್ಕೆ ನಿಲ್ಲಿಸಿದ್ದೆ. ಈಗ ಈ ಪರಿಸ್ಥಿತಿಯಲ್ಲಿ ಆ ಪುಸ್ತಕವನ್ನು ಪೂರ್ತಿ ಓದಿ ಮುಗಿಸಬೇಕಾಯಿತು. ಅವರಿಗೂ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಆದರೆ ಅದು ಕೊನೆಯ ಹಂತದಲ್ಲಿತ್ತು. ನನ್ನ ಸಮಸ್ಯೆಯನ್ನು ಬೇಗನೇ ಪತ್ತೆ ಹಚ್ಚಲಾಯಿತು~ ಎಂದೂ ಅವರು ವಿವರಿಸಿದರು.

`ಸಚಿನ್ ಕೂಡ ನನಗೆ ಸ್ಫೂರ್ತಿ. ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗಲೇ ನಾನು ಸಂಪರ್ಕದಲ್ಲಿದ್ದೆ. ಲಂಡನ್ನಲ್ಲಿ ನಾನು ಚೇತರಿಸಿಕೊಳ್ಳುತ್ತಿದ್ದಾಗ ಅವರು ನನ್ನನ್ನು ಭೇಟಿ ಮಾಡಿದ್ದರು. ಅವರು ಏಕದಿನ ಕ್ರಿಕೆಟ್ನಲ್ಲಿ 200 ರನ್ ಹಾಗೂ ಶತಕಗಳ ಶತಕ ಗಳಿಸಿದಾಗ ತಂಡದಲ್ಲಿ ನಾನಿರಬೇಕಿತ್ತು ಅಂದುಕೊಂಡೆ. ಆದರೆ ಮನಸ್ಸಿನಲ್ಲಿಯೇ ಅವರಿಗೆ ಅಭಿನಂದನೆ ಹೇಳಿದೆ~ ಎಂದರು.

ಸಮಸ್ಯೆ ಹೇಳಿಕೊಂಡಿರಲಿಲ್ಲ: `ಮೊದಲ ಬಾರಿ ಪತ್ತೆಯಾದಾಗ ಆ ನೋವಿನಿಂದ ಹೊರಬರಲು ತುಂಬಾ ಕಷ್ಟವಾಯಿತು. ಕ್ಯಾನ್ಸರ್ ಇದೆಯೇ ಎಂಬುದನ್ನು ಪತ್ತೆ ಹಚ್ಚಲು ಆರು ತಿಂಗಳು ಬೇಕಾಯಿತು. ಆಗ ಉಸಿರಾಡಲು ತುಂಬಾ ಕಷ್ಟವಾಗುತಿತ್ತು. ತುಂಬಾ ಕೆಮ್ಮು ಬರುತಿತ್ತು. ಕೆಮ್ಮಿನ ಜೊತೆಗೆ ರಕ್ತ ಬರುತಿತ್ತು~ ಎಂದು ಆ ಕ್ಷಣವನ್ನು ಯುವಿ ಮತ್ತೆ ನೆನಪಿಸಿಕೊಂಡರು.

`ನಾನು ಇದನ್ನು ಯಾರಿಗೂ ಹೇಳಿರಲಿಲ್ಲ. ಬೇರೆಯವರೆಗೆ ನನ್ನ ಸಮಸ್ಯೆ ಗೊತ್ತಾಗಲು ಬಿಡಲಿಲ್ಲ. ಬದಲಾಗಿ ಸಂತೋಷದಿಂದಲೇ ಇದ್ದೆ. ಎಲ್ಲವೂ ಸರಿ ಹೋಗಲಿದೆ ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಿದ್ದೆ. ಈಗ ನಾನು ಸಕಾರಾತ್ಮಕವಾಗಿದ್ದೇನೆ. ತುಂಬಾ ಖುಷಿಯಿಂದ ಇದ್ದೇನೆ~ ಎಂದರು.

ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಪೀಡಿತರಿಗೆ ಸಹಾಯ ಮಾಡಲು ಮುಂದಾಗುವುದಾಗಿ ಅವರು ಹೇಳಿದರು. `ಈಗ ಕ್ಯಾನ್ಸರ್ ಅಂಶಗಳು ನನ್ನ ದೇಹದಿಂದ ಹೊರಹೋಗಿವೆ. ಆದರೆ ಆ ಭಯ ಇನ್ನೂ ಇದೆ. ಹಾಗಾಗಿ ಮುಂದಿನ ದಿನಗಳಲ್ಲಿ ಸಹಾಯ ಮಾಡಲು ಸಿದ್ಧ~ ಎಂದು ಪಂಜಾಬ್ನ ಈ ಆಟಗಾರ ನುಡಿದರು.

`ನಾನೀಗ ಕ್ರಿಕೆಟ್ ಪಂದ್ಯಗಳನ್ನು ನೋಡುತ್ತಿಲ್ಲ. ಏಕೆಂದರೆ ಪಂದ್ಯ ನೋಡಿದಾಗಲೆಲ್ಲಾ ಆಡಬೇಕು ಎಂದು ಮನಸ್ಸು ತುಡಿಯುತ್ತದೆ. ಆಗ ನಿರಾಸೆ ಉಂಟಾಗುತ್ತದೆ. ಸುಮ್ಮನೆ ಮನೆಯಲ್ಲಿರುವುದೂ ಕಷ್ಟದ ಕೆಲಸ.

ಮನೆಯಿಂದ ಹೊರಹೋಗುವುದೂ ಕಷ್ಟ. ಹಾಗಾಗಿ ವಿಡಿಯೊ ಗೇಮ್ ಆಡುತ್ತೇನೆ. ಸಿನಿಮಾ ವೀಕ್ಷಿಸುತ್ತೇನೆ. ಅಮ್ಮ ಅಡುಗೆ ಮಾಡಿ ಕೊಡುತ್ತಾಳೆ~ ಎಂದರು.

`ಆದರೆ ಯಾವುದೇ ಸಮಸ್ಯೆ ಬಂದಾಗ ಅದನ್ನು ಕಡೆಗಣಿಸಬಾರದು. ಅದರಲ್ಲೂ ಕ್ರೀಡಾಪಟುಗಳು ಹಲವು ಸಮಸ್ಯೆಗೆ ಒಳಗಾಗುತ್ತಾರೆ. ಸಮಸ್ಯೆ ಇದ್ದರೂ ಆಡುತ್ತಿರುತ್ತಾರೆ. ಹಾಗಾಗಿ ತಪಾಸಣೆಗೆ ಒಳಪಡಬೇಕು.

ಆರಂಭದಲ್ಲಿ ನನಗೆ ಕೆಮ್ಮು ಇತ್ತು. ಆದರೆ ಅದನ್ನು ನಾನು ಕಡೆಗಣಿಸಿದ್ದೆ. ವಿಶ್ವಕಪ್ ಇದ್ದ ಕಾರಣ ಆ ರೀತಿ ಮಾಡಬೇಕಾಯಿತು. ಆದರೆ ಇದು ಜೀವನ ಒಂದು ಅಂಗ. ಕೆಳಗೆ ಬೀಳುತ್ತೀರಿ. ಮತ್ತೆ ಮೇಲೆದ್ದು ನಿಲ್ಲುತ್ತೀರಿ~ ಎಂದು 30 ವರ್ಷ ವಯಸ್ಸಿನ ಯುವಿ ಹೇಳಿದರು.

`ಚಿಕಿತ್ಸೆ ಪಡೆಯುವಾಗ ಆದ ಅನುಭವದ ಬಗ್ಗೆ ಪುಸ್ತಕ ಬರೆಯುತ್ತಿದ್ದೇನೆ. ಕ್ಯಾನ್ಸರ್ ನನಗೆ ಹಲವು ವಿಷಯಗಳನ್ನು ಕಲಿಸಿದೆ. ಯಾವ ಸಮಸ್ಯೆ ಎದುರಾಯಿತು. ಆಗ ನನ್ನ ಜೊತೆಗೆ ಯಾರ್ಯಾರು ಇದ್ದರು. ನನ್ನ ಯೋಚನೆಯಲ್ಲಿ ಆದ ಬದಲಾವಣೆ ಬಗ್ಗೆ ಬರೆಯಲಿದ್ದೇನೆ. ಮುಂದೊಂದು ದಿನ ಈ ಪುಸ್ತಕ ಬಿಡುಗಡೆ ಮಾಡುತ್ತೇನೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.