ಬರ್ಲಿನ್ (ರಾಯಿಟರ್ಸ್): ಕೀನ್ಯಾದ ಪ್ಯಾಟ್ರಿಕ್ ಮಕಾವ್ ಭಾನುವಾರ ನಡೆದ ಬರ್ಲಿನ್ ಮ್ಯಾರಥಾನ್ನಲ್ಲಿ ನೂತನ ವಿಶ್ವದಾಖಲೆ ಸ್ಥಾಪಿಸಿದರು. ಅವರು 42.195 ಕಿ.ಮೀ ದೂರವನ್ನು ಎರಡು ಗಂಟೆ ಮೂರು ನಿಮಿಷ ಹಾಗೂ 38 ಸೆಕೆಂಡ್ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರು.

ಈ ಮೂಲಕ ಇಥಿಯೋಪಿಯದ ಹೈಲೆ ಗೆಬ್ರೆಸೆಲಾಸಿ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಗೆಬ್ರಸೆಲಾಸಿ 2008 ರಲ್ಲಿ ಇದೇ ತಾಣದಲ್ಲಿ 2:03.59 ಸೆಕೆಂಡ್ಗಳಲ್ಲಿ ಗುರಿ ತಲುಪಿ ವಿಶ್ವದಾಖಲೆ ಸ್ಥಾಪಿಸಿದ್ದರು. ಇದೀಗ ಕೀನ್ಯಾದ ಸ್ಪರ್ಧಿ ಅದನ್ನು 21 ಸೆಕೆಂಡ್ಗಳಿಂದ ಉತ್ತಮಪಡಿಸಿಕೊಂಡಿದ್ದಾರೆ.

ಕಣದಲ್ಲಿದ್ದ ಗೆಬ್ರಸೆಲಾಸಿ ಸ್ಪರ್ಧೆ ಕೊನೆಗೊಳಿಸುವಲ್ಲಿ ವಿಫಲರಾದರು. 27 ಕಿ.ಮೀ ಕ್ರಮಿಸಿದ ಬಳಿಕ ಅವರು ಹೊಟ್ಟೆನೋವಿನ ಕಾರಣ ಹಿಂದೆ ಸರಿದರು. ಕೀನ್ಯಾದ ಫ್ಲಾರೆನ್ಸ್ ಕಿಪ್ಲಗಾಟ್ (2:19.44 ಸೆ.) ಮಹಿಳೆಯರ ವಿಭಾಗದಲ್ಲಿ ಚಿನ್ನ ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.