ಹೈದರಾಬಾದ್ (ಪಿಟಿಐ): ಗಾಯಗೊಂಡಿರುವ ಸಾನಿಯಾ ಮಿರ್ಜಾ ಅವರು ಶನಿವಾರ ಇಲ್ಲಿ ಶಸ್ತ್ರಚಿಕಿತ್ಸೆಗೊಳಗಾದರು. ಮಂಡಿ ನೋವಿನಿಂದ ಕೆಲವು ಕಾಲದಿಂದ ಟೆನಿಸ್ ಅಂಗಳದಿಂದ ದೂರ ಉಳಿದಿರುವ ಅವರು ಇನ್ನಷ್ಟು ಸಮಯ ವಿಶ್ರಾಂತಿ ಪಡೆಯಲಿದ್ದಾರೆ.

ಸ್ಥಳೀಯ ಆಸ್ಪತ್ರೆಯಲ್ಲಿ ಪರಿಣತ ವೈದ್ಯರ ತಂಡವು ಸಾನಿಯಾ ಮೊಣಕಾಲಿನ ಶಸ್ತ್ರಚಿಕಿತ್ಸೆ ಮಾಡಿದೆ ಎಂದು ಟೆನಿಸ್ ತಾರೆಯ ತಂದೆ ಇಮ್ರಾನ್ ಮಿರ್ಜಾ ಅವರು ತಿಳಿಸಿದರು. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ಅಮೆರಿಕ ಓಪನ್ ಟೆನಿಸ್ ಸಂದರ್ಭದಲ್ಲಿ ನೋವು ಹೆಚ್ಚಿತ್ತು. ಆದ್ದರಿಂದ ಶಸ್ತ್ರಚಿಕಿತ್ಸೆ ಅನಿವಾರ್ಯವಾಯಿತೆಂದು ಕೂಡ ಅವರು ವಿವರಿಸಿದರು.

ಸಾನಿಯಾ ಪತಿಯಾದ ಪಾಕಿಸ್ತಾನ ಕ್ರಿಕೆಟಿಗ ಶೋಯಬ್ ಮಲಿಕ್ ಅವರೂ ಶಸ್ತ್ರಚಿಕಿತ್ಸೆ ವೇಳೆಯಲ್ಲಿ ಆಸ್ಪತ್ರೆಯಲ್ಲಿ ಇದ್ದರೆಂದು ಹೇಳಿದ ಇಮ್ರಾನ್ `ಮಂಡಿ ನೋವನ್ನು ಔಷಧಿಗಳ ಮೂಲಕವೇ ಗುಣವಾಗಿಸಿಕೊಳ್ಳಲು ಸಾನಿಯಾ ಕೆಲವು ದಿನಗಳಿಂದ ಪ್ರಯತ್ನ ಮಾಡಿದ್ದಳು. ಆದರೆ ಪ್ರಯೋಜನವಾಗಲಿಲ್ಲ. ನೋವು ಇನ್ನಷ್ಟು ಹೆಚ್ಚಿತು. ಆದ್ದರಿಂದ ಶಸ್ತ್ರಚಿಕಿತ್ಸೆ ಮಾಡಲಾಯಿತು~ ಎಂದರು.

ಈ ಮೊದಲು ಕೂಡ ಎರಡು ಬಾರಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಭಾರತದ ಟೆನಿಸ್ ತಾರೆಯ ಕ್ರೀಡಾ ಜೀವನಕ್ಕೆ ತೊಡಕಾಗಿತ್ತು. ಈಗ ಮತ್ತೆ ಅಂಥದೇ ಪರಿಸ್ಥಿತಿಯನ್ನು ಅವರು ಎದುರಿಸಬೇಕಾಗಿ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.