ಬೆಂಗಳೂರು: ಎಎಸ್‌ಸಿ ಬಾಯ್ಸ ತಂಡದವರು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದ `ಬಿ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಅಗ್ರಸ್ಥಾನ ಪಡೆದು ನೂತನ ಚಾಂಪಿಯನ್ನರಾಗಿ ಹೊರಹೊಮ್ಮಿದರು.

ಶುಕ್ರವಾರ ಮುಕ್ತಾಯಗೊಂಡ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಎಎಸ್‌ಸಿ ಬಾಯ್ಸ ತಂಡದವರು ಉತ್ತಮ ಗೋಲು ಸರಾಸರಿ ಆಧಾರದ ಮೇಲೆ ಅಗ್ರಸ್ಥಾನ ಪಡೆದರು. ಎಎಸ್‌ಸಿ ಬಾಯ್ಸ ಮತ್ತು ಭಾರತ ಕ್ರೀಡಾ ಪ್ರಾಧಿಕಾರ ತಂಡಗಳ ನಡುವಣ ನಿರ್ಣಾಯಕ ಲೀಗ್ ಪಂದ್ಯ ಗೋಲಿಲ್ಲದೆ ಡ್ರಾ ಆಯಿತು. ಲೀಗ್ ಪಟ್ಟಯಲ್ಲಿ ಉಭಯ ತಂಡದವರು ತಲಾ ಏಳು ಪಾಯಿಂಟ್ಸ್ ಸಂಗ್ರಹಿಸಿದರು. ಗೋಲು ಸರಾಸರಿಯಲ್ಲಿ ಎಎಸ್‌ಸಿ ತಂಡ (ಗೋಲು ಪರ 10-0) ಅಗ್ರಸ್ಥಾನ ಗಳಿಸಿತು. ಭಾರತ ಕ್ರೀಡಾ ಪ್ರಾಧಿಕಾರ (ಗೋಲು ಪರ: 9-1) ಎರಡನೇ ಸ್ಥಾನಕ್ಕೆ ತೃಪ್ತಿ ಪಡೆಯಿತು.

ಡಿ.ವೈ.ಎಸ್.ಎಸ್. `ಬಿ~ ಹಾಗೂ ಜೈನ್ ಕಾಲೇಜ್ ತಂಡದವರು ಕ್ರಮ ವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆಯಿತು.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಲೀಗ್ ಮೊದಲ ಪಂದ್ಯದಲ್ಲಿ ಡಿ.ವೈ.ಎಸ್.ಎಸ್. `ಬಿ~ ತಂಡ 4-1 ಗೋಲುಗಳಿಂದ ಎಸ್.ಬಿ.ಎಂ. ಜೈನ್ ಕಾಲೇಜ್ ತಂಡವನ್ನು ಮಣಿಸಿತು. ವಿಜಯಿ ತಂಡದ ಶ್ರೇಯಸ್ 35, 37 ಮತ್ತು 42ನೇ ನಿಮಿಷದಲ್ಲಿ ಚೆಂಡನ್ನು ಗುರಿಮುಟ್ಟಿಸಿ `ಹ್ಯಾಟ್ರಿಕ್~ ಗೌರವಕ್ಕೆ ಪಾತ್ರರಾದರು.

ಮೊದಲ ಗೋಲು ಅಮಿತ್ ಮೂಲಕ ಬಂತು. ಎದುರಾಳಿ ತಂಡದ ಪ್ರಮೋದ್ ಏಕೈಕ ಗೋಲು ತಂದಿತ್ತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.