ಅಣ್ವಸ್ತ್ರ ಪರೀಕ್ಷೆ ಕೈಬಿಡಲು ಮನವಿ

ಭಾನುವಾರ, ಮೇ 26, 2019
26 °C

ಅಣ್ವಸ್ತ್ರ ಪರೀಕ್ಷೆ ಕೈಬಿಡಲು ಮನವಿ

Published:
Updated:

ವಿಶ್ವಸಂಸ್ಥೆ: ‘ಅಣ್ವಸ್ತ್ರ ಹಾಗೂ ಖಂಡಾಂತರ ಕ್ಷಿಪಣಿಗಳಿಗೆ ಸಂಬಂಧಿಸಿ ಉತ್ತರ ಕೊರಿಯಾ ನಡೆಸುತ್ತಿರುವ ಪರೀಕ್ಷೆಗಳಿಂದ ಜಗತ್ತಿನ ಶಾಂತಿಗೆ ಧಕ್ಕೆ ಎದುರಾಗುವ ಭೀತಿ ಹೆಚ್ಚುತ್ತಲೇ ಇದೆ. ಆದ್ದರಿಂದ ಈ ಯೋಜನೆಗಳನ್ನು ಕೈಬಿಡಬೇಕು’ ಎಂದು 70 ರಾಷ್ಟ್ರಗಳು ಮನವಿ ಮಾಡಿವೆ. 

ಫ್ರಾನ್ಸ್ ಸಿದ್ಧಪಡಿಸಿರುವ ಈ ಮನವಿ ಕರಡು ಪತ್ರಕ್ಕೆ ಅಮೆರಿಕ, ದಕ್ಷಿಣ ಕೊರಿಯಾ, ಏಷ್ಯಾ , ಲ್ಯಾಟಿನ್ ಅಮೆರಿಕ, ಆಫ್ರಿಕಾ ಹಾಗೂ ಐರೋಪ್ಯ ರಾಷ್ಟ್ರಗಳು ಸಹಿ ಹಾಕಿವೆ. ಆದರೆ ಉತ್ತರ ಕೊರಿಯಾವನ್ನು ಬೆಂಬಲಿಸುವ ರಷ್ಯಾ ಹಾಗೂ ಚೀನಾ ಈ ಪತ್ರಕ್ಕೆ ಸಹಿ ಹಾಕಿಲ್ಲ. 

‘ಪ್ರಾದೇಶಿಕ ಹಾಗೂ ಜಾಗತಿಕ ಶಾಂತಿಗೆ ಭೀತಿ ಉಂಟು ಮಾಡುವ ಈ ಅಣ್ವಸ್ತ್ರ ಮತ್ತು ಖಂಡಾಂತರ ಕ್ಷಿಪಣಿ ಯೋಜನೆಗಳನ್ನು ಖಂಡಿಸಲಾಗುವುದು’ ಎಂದು ಪತ್ರದಲ್ಲಿ ಹೇಳಲಾಗಿದೆ.

ಅಲ್ಪ ವ್ಯಾಪ್ತಿ ಕ್ರಮಿಸುವ ಎರಡು ಕ್ಷಿಪಣಿಗಳನ್ನು ಗುರುವಾರ ಉಡಾವಣೆ ಮಾಡಿರುವ ಉತ್ತರ ಕೊರಿಯಾ, ಶನಿವಾರ ಕ್ಷಿಪಣಿ ಪರೀಕ್ಷಾ ತಯಾರಿ ಸಹ ನಡೆಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !