ರೈತರ ಕೃಷಿ ಅಧ್ಯಯನ ಪ್ರವಾಸ

7

ರೈತರ ಕೃಷಿ ಅಧ್ಯಯನ ಪ್ರವಾಸ

Published:
Updated:
Prajavani

ದಾಬಸ್‌ಪೇಟೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿ ಸೋಂಪುರ, ತ್ಯಾಮಗೊಂಡ್ಲು ಹೋಬಳಿ ಹಾಗೂ ನೆಲಮಂಗಲ ತಾಲ್ಲೂಕಿನ ಸಂಸ್ಥೆಯ ಆಸಕ್ತ ರೈತ ಸದಸ್ಯರಿಗೆ ಏರ್ಪಡಿಸಿದ ಮೂರು ದಿನದ ರಾಜ್ಯಮಟ್ಟದ ಕೃಷಿ ಅಧ್ಯಯನ ಪ್ರವಾಸ ಬುಧವಾರ ಆರಂಭಗೊಂಡಿತು.

ನರಸೀಪುರದ ಆತ್ಮಾರಾಮ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರವಾಸಕ್ಕೆ ಚಾಲನೆ ನೀಡಲಾಯಿತು. ರಾಮನಗರ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿನ ರೈತರು ಕೈಗೊಂಡಿರುವ ಸಾವಯವ ಕೃಷಿ, ಸಮಗ್ರ ಕೃಷಿಗಳ ಜೊತೆಗೆ ಸ್ವ ಉದ್ಯೋಗ ಆಧಾರಿತ ನಾಟಿ ಕೋಳಿ ಸಾಕಾಣಿಕೆ, ಅಣಬೆ ಬೆಳೆಗಳ ಕುರಿತು ಪ್ರವಾಸದಲ್ಲಿ ಮಾಹಿತಿ ಒದಗಿಸಲಾಗುತ್ತದೆ. ಮಳೆಯಾಧಾರಿತ ಕೃಷಿಯನ್ನೇ ಅವಲಂಬಿಸಿರುವ ಈ ಭಾಗದ ರೈತರಿಗೆ, ಕೃಷಿ ಹಾಗೂ ಪೂರಕ ಉಪಕಸುಬುಗಳ ಪರಿಚಯ ನಡೆಯಲಿದೆ. 

ಪ್ರವಾಸದ ವೇಳೆ ಅಲ್ಲಿನ ರೈತರಿಂದ ಮಾಹಿತಿ ಪಡೆದು, ನಾವು ನಮ್ಮ ಕೃಷಿಯಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂದು ರೈತರಾದ ರಂಗನಾಥ, ರಾಜಣ್ಣ ಇತರರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !