ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ – ಅಮೆರಿಕದ ದೃಢ ರಕ್ಷಣಾ ಸಹಭಾಗಿತ್ವ: ಕೆನ್ನೆತ್‌ ಜಸ್ಟರ್‌ ಇಂಗಿತ

Last Updated 20 ಫೆಬ್ರುವರಿ 2019, 20:10 IST
ಅಕ್ಷರ ಗಾತ್ರ

ಬೆಂಗಳೂರು:ಭಾರತ – ಅಮೆರಿಕದ ರಕ್ಷಣಾ ಸಹಭಾಗಿತ್ವವನ್ನು ಇನ್ನಷ್ಟು ದೃಢಗೊಳಿಸುವ ಕುರಿತು ಅಮೆರಿಕದ ರಾಯಬಾರಿ ಕೆನ್ನೆತ್‌ ಜಸ್ಟರ್‌ ಆಶಯ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಮೆರಿಕದ28 ಕಂಪನಿಗಳು ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಿವೆ. ಸಾಂಕೇತಿಕವಾಗಿ ಬೋಯಿಂಗ್‌ ಬಿ – 52 ಸ್ಟ್ರಾಟಜಿಕ್‌ ಬಾಂಬರ್‌ ವಿಮಾನ ಉದ್ಘಾಟನಾ ದಿನದಂದು ಹಾರಾಟ ನಡೆಸಿದೆ. ಈ ಬಾರಿ ಅಮೆರಿಕದ ವೈಮಾನಿಕ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಬೃಹತ್‌ ಪ್ರಮಾಣದಲ್ಲಿದೆ’ ಎಂದರು

‘ಸಿ–17 ಗ್ಲೋಬ್‌ ಮಾಸ್ಟರ್‌ III, ಎಫ್‌ – 6 ಫೈಟಿಂಗ್‌ ಫಾಲ್ಕನ್‌, ಎಫ್‌/ಎ–18 ಸೂಪರ್‌ ಹಾರ್ನೆಟ್‌, ದಿ ಪಿ–8 ಪೊಸೈಡಾನ್‌ ವಿಮಾನಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಕೂಡಾ ನಡೆದಿದೆ ಎಂದ ಅವರು, ಈ ವರ್ಷ ಇಂಡೋ– ಅಮೆರಿಕನ್‌ ರಕ್ಷಣಾ ಸಹಭಾಗಿತ್ವವು ಹಿಂದಿನ ಮಟ್ಟವನ್ನೂ ಮೀರಲಿದೆ. ಭಾರತೀಯ ವಾಯುಸೇನೆಯು ಬೇಡಿಕೆ ಸಲ್ಲಿಸಿದ 25 ಸಿಎಚ್‌–47 ಹೆವಿ ಲಿಫ್ಟ್‌ ಹೆಲಿಕಾಪ‍್ಟರ್‌ಗಳ ಪೈಕಿ ನಾಲ್ಕನ್ನು ಪೂರೈಸಲಾಗಿದೆ. ಬೋಯಿಂಗ್‌ ಕಂಪನಿಯು ಫೆ. 11ರಂದು ಇವುಗಳನ್ನು ಪೂರೈಸಿದೆ. ಈ ವರ್ಷದೊಳಗೆ ಮತ್ತೆ 6 ಹೆಲಿಕಾಪ್ಟರ್‌ಗಳನ್ನು ಪೂರೈಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

‘25 ಅಪಾಚಿ ಹೆಲಿಕಾಪ್ಟರ್‌ಗಳಿಗೆ ವಾಯುಸೇನೆ ಬೇಡಿಕೆ ಸಲ್ಲಿಸಿದೆ. ಅವುಗಳ ಪೈಕಿ 17 ಈ ವರ್ಷದೊಳಗೆ ಬರಲಿವೆ. ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ ಮತ್ತು ಬೋಯಿಂಗ್ ಕಂಪನಿಯ ಜಂಟಿ ಸಹಭಾಗಿತ್ವದಲ್ಲಿಈ ವಿಮಾನಗಳ ಕವಚ ತಯಾರಿಕಾ ಘಟಕ ಹೈದರಾಬಾದ್‌ನಲ್ಲಿ ನಿರ್ಮಾಣವಾಗುತ್ತಿದೆ. ವಿಶ್ವದಾದ್ಯಂತ ಅಪಾಚೆ ಹೆಲಿಕಾಪ್ಟರ್‌ಗಳಿಗೆ ಬೇಕಾಗುವ ಕವಚಗಳು ಇಲ್ಲಿ ಉತ್ಪಾದನೆಯಾಗಲಿವೆ’ ಎಂದು ಅವರು ಹೇಳಿದರು.

‘ಭಾರತದೊಂದಿಗೆ ರಕ್ಷಣಾ ಸಹಭಾಗಿತ್ವಕ್ಕೆ ಸಂಬಂಧಿಸಿದಂತೆ 2018 ಅಮೆರಿಕದ ಪಾಲಿಗೆ ‘ಬ್ಯಾನರ್‌ ವರ್ಷ’ ಎಂದು ಬಣ್ಣಿಸಿದ ಅವರು, ಕಳೆದ ವರ್ಷ ಭಾರತದ ಸಶಸ್ತ್ರ ಪಡೆಗಳು ವಿಶ್ವದ ಬೇರೆ ಯಾವುದೇ ದೇಶಗಳಿಗಿಂತಲೂ ಹೆಚ್ಚಾಗಿ ಅಮೆರಿಕದೊಂದಿಗೆ ಮಿಲಿಟರಿ ತಾಲೀಮು ನಡೆಸಿವೆ. ಅಮೆರಿಕದ ಸೈನಿಕರೂ ಕೂಡಾ ಭಾರತದಲ್ಲೇ ಬಂದು ತರಬೇತಿ ಪಡೆದಿದ್ದಾರೆ. ಮಲಬಾರ್‌ ತ್ರಿಪಕ್ಷೀಯ ನೌಕಾಭ್ಯಾಸವು ಭಾರತ, ಅಮೆರಿಕ, ಮತ್ತು ಜಪಾನ್‌ನ ಸಹಭಾಗಿತ್ವದಲ್ಲಿ ನಡೆದಿದೆ’ ಎಂದು ಅವರು ಉಲ್ಲೇಖಿಸಿದರು.

‘ಇದಕ್ಕಿಂತಲೂ ಮೊದಲು ಎರಡು ದೇಶಗಳ ಸೇನೆಗಳ ನಡುವೆ ಅಭ್ಯಾಸ ನಡೆಯುತ್ತಿತ್ತು. ಈ ಬಾರಿ ಮೂರು ದೇಶಗಳ ಸೈನ್ಯದ ನಡುವೆ ಅಭ್ಯಾಸ ನಡೆದಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಈ ದೇಶಗಳ ಸಚಿವಾಲಯಗಳ ನಡುವೆ ನಡೆದ ಒಪ್ಪಂದ ಇದಕ್ಕೆ ಕಾರಣ’ ಎಂದು ಅವರು ಹೇಳಿದರು.

‘ಸೆಪ್ಟೆಂಬರ್‌ನಲ್ಲಿ ಅತಿ ಹಗುರ ಹವಿಟ್ಝರ್‌ (ಫಿರಂಗಿ)ಗಳನ್ನು ಭಾರತ ಅಮೆರಿಕದಿಂದ ಖರೀದಿಸಿತ್ತು. ಮುಂದಿನ ಎರಡು ವರ್ಷಗಳಲ್ಲಿ ಭಾರತೀಯ ಸೇನೆಯು 145 ಬಂದೂಕುಗಳನ್ನು ಪಡೆಯಲಿದೆ. ಈ ಪೈಕಿ ಬಹುಪಾಲುಬಂದೂಕುಗಳನ್ನು ಭಾರತದಲ್ಲಿ ಮಹಿಂದ್ರಾ ಕಂಪನಿಯು ಜೋಡಿಸಿ, ಪರೀಕ್ಷಿಸಿ ಕೊಡಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT