ಬೆಂಗಳೂರು: ರಾಜ್ಯದ ಇಬ್ಬರು ಶಿಕ್ಷಕರು ಅಮೆರಿಕದ ಪ್ರತಿಷ್ಠಿತ ಫುಲ್ಬ್ರೈಟ್ ಸ್ಕಾಲರ್ಶಿಪ್ಗೆ ಆಯ್ಕೆಯಾಗಿದ್ದಾರೆ.

ನಗರದ ಜಾಲಹಳ್ಳಿಯ ಏರ್ಫೋರ್ಸ್ ಸ್ಟೇಷನ್ನಲ್ಲಿರುವ ಕೇಂದ್ರೀಯ ವಿದ್ಯಾಲಯದ ಶಿಕ್ಷಕಿ ರೇಣುಕಾ ಕೃಷ್ಣಗಿರಿ ಹಾಗೂಮೈಸೂರು ಜಿಲ್ಲೆಯ ಮಲ್ಲುಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕವೈ.ಎನ್.ರಾಜೇಶ್ ಈ ಕೀರ್ತಿಗೆ ಭಾಜನರಾಗಿದ್ದಾರೆ.

2019ರಲ್ಲಿ 6 ವಾರಗಳ ಕಾಲ ಅಮೆರಿಕಕ್ಕೆ ತೆರಳಲಿರುವ ಇಬ್ಬರೂ ಅಲ್ಲಿನ ಶಾಲೆ, ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿರುವ ಶಿಕ್ಷಣ ಪದ್ಧತಿ ಬಗ್ಗೆ ತಿಳಿದುಕೊಳ್ಳಲಿದ್ದಾರೆ.

ಗಣಿತ ಹಾಗೂ ವಿಜ್ಞಾನದ ವಿಷಯಗಳನ್ನು ಬೋಧಿಸಲು ಈ ಶಿಕ್ಷಕರು ಹೊಸ ವಿಧಾನಗಳನ್ನು ಕಂಡುಕೊಂಡಿದ್ದಾರೆ. ನಮ್ಮ ದೇಶದಿಂದ ಆಯ್ಕೆಯಾಗಿದ್ದ ಮೂವರ ಪೈಕಿ, ರಾಜ್ಯದ ಇಬ್ಬರು ಸ್ಕಾಲರ್ಶಿಪ್ ಪಡೆದಿದ್ದಾರೆ. ಇದಕ್ಕಾಗಿ ಬೇರೆ–ಬೇರೆ ದೇಶಗಳಿಂದ 3 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಆ ಪೈಕಿ ಕೇವಲ 173 ಜನರಿಗೆ ಈ ಗೌರವ ನೀಡಲುಫುಲ್ಬ್ರೈಟ್ ಸಂಸ್ಥೆ ನಿರ್ಧರಿಸಿದೆ.

ಇದನ್ನು ಪಡೆಯಲು ಅಭ್ಯರ್ಥಿಗಳು ಪ್ರಬಂಧಗಳನ್ನು ಬರೆದು, ಸಂದರ್ಶನವನ್ನು ಎದುರಿಸಿದ್ದರು. ಈ ಸ್ಕಾಲರ್ಶಿಪ್ ನೀಡುವಲ್ಲಿ ಅಮೆರಿಕದ ಶಿಕ್ಷಣ ಹಾಗೂ ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯ ಸಹಯೋಗ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.