ಗುರುವಾರ , ಮೇ 19, 2022
25 °C

ಬಮೂಲ್‌ನಲ್ಲಿ ಕಾಂಗ್ರೆಸ್‌ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ (ಬಮೂಲ್‌) ಆಡಳಿತ ಮಂಡಳಿಯ 13 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 7 ಮಂದಿ ಕಾಂಗ್ರೆಸ್ ಬೆಂಬಲಿತರು ಜಯಗಳಿಸಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್‌ ಬೆಂಬಲಿತ ತಲಾ ಮೂವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಗೆದ್ದಿರುವ 13 ಮಂದಿಯ ಪೈಕಿ ಕೆಎಂಎಫ್ ಹಾಲಿ ಅಧ್ಯಕ್ಷ ಪಿ. ನಾಗರಾಜ್ ಸೇರಿ 6 ಮಂದಿ ಹಾಲಿ ನಿರ್ದೇಶಕರು ಪುನರ್ ಆಯ್ಕೆಯಾಗಿದ್ದಾರೆ. ಆನೇಕಲ್ ಮತ್ತು ಕನಕಪುರ ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ನಡೆದಿದ್ದರೆ, ಉಳಿದ 11 ಕ್ಷೇತ್ರಗಳಿಗೆ ಚುನಾವಣೆ ನಡೆಯಿತು.

ವಿಜೇತರು:
ಕೇಶವಮೂರ್ತಿ (ಬೆಂಗಳೂರು ಉತ್ತರ), ಎಂ. ಮಂಜುನಾಥ್‌(ಬೆಂಗಳೂರು ಪೂರ್ವ), ಎಚ್.ಎಸ್. ಹರೀಶ್‌ ಕುಮಾರ್‌(ಬೆಂಗಳೂರು ದಕ್ಷಿಣ), ಬಿ.ಜಿ. ಆಂಜಿನಪ್ಪ(ಆನೇಕಲ್), ಎಚ್‌.ಸಿ. ಜಯಮುತ್ತು (ಚನ್ನಪಟ್ಟಣ), ನರಸಿಂಹಮೂರ್ತಿ (ಮಾಗಡಿ), ಎಚ್‌.ಪಿ. ರಾಜಕುಮಾರ (ಕನಕಪುರ), ಪಿ. ನಾಗರಾಜ್ (ರಾಮನಗರ), ಸಿ. ಮಂಜುನಾಥ್‌ (ಹೊಸಕೋಟೆ), ಬಿ. ಶ್ರೀನಿವಾಸ್‌ (ದೇವನಹಳ್ಳಿ), ಜಿ.ಆರ್. ಭಾಸ್ಕರ್ (ನೆಲಮಂಗಲ), ಆನಂದಕುಮಾರ್‌ (ದೊಡ್ಡಬಳ್ಳಾಪುರ), ರಾಜಣ್ಣ (ಕುದೂರು).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು