ಜಯಂತಿ ಪ್ರಯುಕ್ತ ರಾಸುಗಳಿಗೆ ಪೂಜೆ

ಶುಕ್ರವಾರ, ಮೇ 24, 2019
30 °C

ಜಯಂತಿ ಪ್ರಯುಕ್ತ ರಾಸುಗಳಿಗೆ ಪೂಜೆ

Published:
Updated:
Prajavani

ದಾಬಸ್‌ಪೇಟೆ: ಸೋಂಪುರ ಹೋಬಳಿಯಲ್ಲಿ ಮಂಗಳವಾರ ‘ಬಸವ ಜಯಂತಿ’ ನಡೆಯಿತು. 

ಶಿರಗನಹಳ್ಳಿ, ನಿಡವಂದ, ಮಾದೇನಹಳ್ಳಿ, ಲಕ್ಕೂರು ತೋಟ, ಹೊನ್ನೇನಹಳ್ಳಿ, ತಟ್ಟೇಕೆರೆ ಗ್ರಾಮಗಳಲ್ಲಿನ ಬಸವಣ್ಣ ದೇವಾಲಯಗಳನ್ನು ತಳಿರು ತೋರಣ, ಹೂಗಳಿಂದ ಸಿಂಗರಿಸಲಾಗಿತ್ತು. ವಿಶೇಷ ಪೂಜೆ ನಡೆಸಿ, ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಗ್ರಾಮಗಳ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಹಸಿರು ಚಪ್ಪರ ಹಾಕಿ, ರಾಸುಗಳಿಗೆ ಪೂಜೆ ಮಾಡಿ ಹೆಸರುಬೇಳೆ, ಪಾನಕ, ಮಜ್ಜಿಗೆ ವಿತರಿಸಿದರು. 

'ಬಸವಣ್ಣ ಅವರು ಯಾವುದೇ ಧರ್ಮ, ಜಾತಿ, ಮತ, ಪಂಗಡಕ್ಕೆ ಸೇರದೆ ಜಾತಿ ರಹಿತ ಸಮಾಜವನ್ನು ನಿರ್ಮಾಣ ಮಾಡುವುದಕ್ಕೆ ಶ್ರಮಿಸಿದ ಕ್ರಾಂತಿಪುರುಷ. ಅವರ ಆದರ್ಶಗಳನ್ನು ಎಲ್ಲ ವರ್ಗದ ಜನರು ಅಳವಡಿಸಿಕೊಂಡರೆ ಸಮಾಜ ಸುಧಾರಣೆಯಾಗುತ್ತದೆ' ಎಂದು ಸಾಮಾಜಿಕ ಕಾರ್ಯಕರ್ತ ರಘುನಂದನ್ ತಿಳಿಸಿದರು.

ನರಸೀಪುರದ ಆತ್ಮಾರಾಮ ದೇವಾಲಯದಲ್ಲಿ ನಡೆದ ಬಸವ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !