ಅನುಚಿತ ವರ್ತನೆ ತೋರಿದರೆ ದೃಶ್ಯ ಸೆರೆ

7
ಹುಬ್ಬಳ್ಳಿ– ಧಾರವಾಡ ಪೊಲೀಸ್ ಸಿಬ್ಬಂದಿಗೆ ಧರಿಸಬಹುದಾದ ಕ್ಯಾಮೆರಾ

ಅನುಚಿತ ವರ್ತನೆ ತೋರಿದರೆ ದೃಶ್ಯ ಸೆರೆ

Published:
Updated:

ಹುಬ್ಬಳ್ಳಿ: ಸಂಚಾರ ಪೊಲೀಸ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದರೆ ಸಿಕ್ಕಿಬೀಳುವುದು ಗ್ಯಾರಂಟಿ, ಅದಕ್ಕೆ ಭಾರಿ ಬೆಲೆಯನ್ನೂ ತೆರಬೇಕಾಗಬಹುದು. ಹೌದು, ಎದೆಭಾಗದಲ್ಲಿ ಧರಿಸಬಹುದಾದ ಪುಟ್ಟ ಕ್ಯಾಮೆರಾವನ್ನು ಸಂಚಾರ ಠಾಣೆ ಸಿಬ್ಬಂದಿಗೆ ನೀಡಲಾಗಿದೆ. ಕರ್ತವ್ಯದ ವೇಳೆಯಲ್ಲಿ ಅದನ್ನು ಧರಿಸುವುದರಿಂದ ಎಲ್ಲ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಲಿವೆ.

ಈ ಬಗ್ಗೆ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಮಿಷನರ್ ಎಂ.ಎನ್. ನಾಗರಾಜ, ಒಟ್ಟು 35 ಇಂತಹ ಕ್ಯಾಮೆರಾಗಳನ್ನು ಖರೀದಿಸಲಾಗಿದೆ. ದಂಡ ವಸೂಲಿ ವೇಳೆ, ಗದ್ದಲ ಅಥವಾ ಇನ್ಯಾವುದೇ ಸಂದರ್ಭದಲ್ಲಿ ಎಲ್ಲ ದೃಶ್ಯಗಳು ಇದರಲ್ಲಿ ಸೆರೆಯಾಗಲಿವೆ. ಸಾರ್ವಜನಿಕರು ಅಥವಾ ಪೊಲೀಸರು ಅನುಚಿತವಾಗಿ ವರ್ತಿಸಿದರೆ ಸಿಕ್ಕಿಬೀಳುವುದು ಖಚಿತ. 32 ಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ಇದ್ದು, ಆಡಿಯೊ ಸಹ ಸ್ಪಷ್ಟವಾಗಿ ದಾಖಲಾಗುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಸಿಬ್ಬಂದಿಗೂ ಇಂತಹ ಕ್ಯಾಮೆರಾ ನೀಡಲಾಗುವುದು ಎಂದರು.

ಭುಜದ ಮೇಲೆ ಧರಿಸುವ 135 ದೀಪಗಳನ್ನು (ಶೋಲ್ಡರ್ ಲೈಟ್ಸ್‌) ಸಹ ನೀಡಲಾಗಿದೆ. ಪೊಲೀಸ್ ಇರುವಿಕೆಯನ್ನು ಸುಲಭವಾಗಿ ಕಂಡುಹಿಡಿಯಬಹುದು. ಯಾವುದೇ ಕೃತ್ಯ ಎಸಗಲು ಹೊಂಚು ಹಾಕುವವರೂ ಪೊಲೀಸ್ ಇರುವುದು ಗೊತ್ತಾದರೆ ಧೈರ್ಯ ತೋರುವುದಿಲ್ಲ. ಆದ್ದರಿಂದ ಇವು ಬಹಳ ಉಪಯೋಗಕಾರಿಯಾಗಿವೆ ಎಂದು ಅವರು ಹೇಳಿದರು.

ನಗರದಲ್ಲಿ ವಾಹನ ದಟ್ಟಣೆಗೆ ಕಾರಣವಾಗುತ್ತಿರುವ ಭಾರೀ ವಾಹನಗಳನ್ನು ಬೆಳಿಗ್ಗೆ 8ರಿಂದ ರಾತ್ರಿ 10 ಗಂಟೆವರೆಗೆ ನಿಷೇಧಿಸಲು ನಿರ್ಧರಿಸಲಾಗಿದೆ. ಇದನ್ನು ಪ್ರಕಟಣೆ ಹೊರಡಿಸಿ ಆಕ್ಷೇಪಣೆ ಆಹ್ವಾನಿಸಲಾಗಿದ್ದು, ಶೀಘ್ರದಲ್ಲೇ ಆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !