ಗುರುವಾರ , ಡಿಸೆಂಬರ್ 12, 2019
25 °C

ಸರಗಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರಿದಿದ್ದು, ಸೋಮವಾರ ಒಂದೇ ದಿನದಲ್ಲೇ ಐದು ಕಡೆಗಳಲ್ಲಿ ಚಿನ್ನದ ಸರಗಳವು ಪ್ರಕರಣಗಳು ವರದಿಯಾಗಿವೆ.

ಬಿಟಿಎಂ 2ನೇ ಹಂತದ ಐಎಎಸ್ ಕಾಲೊನಿಯಲ್ಲಿ ಸಾವಿತ್ರಮ್ಮ (57) ಎಂಬುವರ 60 ಗ್ರಾಂ ತೂಕದ  ಮಾಂಗಲ್ಯ ಸರವನ್ನು ಕಳ್ಳರು ಕಿತ್ತುಕೊಂಡು ಹೋಗಿದ್ದಾರೆ. ಬ್ಯಾಂಕ್ ಉದ್ಯೋಗಿಯಾದ ಸಾವಿತ್ರಮ್ಮ, ಇಡಬ್ಲ್ಯುಎಸ್ ಕಾಲೊನಿ ನಿವಾಸಿ.

ಅದಾದ 40 ನಿಮಿಷಕ್ಕೇ ಬಿಟಿಎಂ 2ನೇ ಹಂತದ ಬಾಲಾಜಿ ದೇವಸ್ಥಾನದ ಬಳಿಯೇ ಪುಷ್ಪಾ ರಾವ್ (66) ಎಂಬುವರ 38 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ಕಳ್ಳರು ಕಿತ್ತೊಯ್ದಿದ್ದಾರೆ.

ಮಾಂಗಲ್ಯ ಕಿತ್ತೊಯ್ದರು: ಮತ್ತೀಕೆರೆಯಲ್ಲಿ ಸೋಮವಾರ ಸಂಜೆ ಗೀತಾ (35) ಎಂಬುವರ 40 ಗ್ರಾಂ ತೂಕದ ಮಾಂಗಲ್ಯ ಸರವನ್ನು ದುಷ್ಕರ್ಮಿಗಳು ಕಿತ್ತುಕೊಂಡು ಹೋಗಿದ್ದಾರೆ.

ಬಸ್ಸಿನಲ್ಲೂ ಸರ ಕದ್ದರು: ಮಾಡ್ರನ್ ಬ್ರೆಡ್ ಫ್ಯಾಕ್ಟರಿ ವೃತ್ತದಿಂದ ಎಫ್‌ಟಿಐ ವೃತ್ತಕ್ಕೆ ಬಿಎಂಟಿಸಿ ಬಸ್ಸಿನಲ್ಲಿ ಹೊರಟಿದ್ದ ಗಾರ್ಮೆಂಟ್ಸ್ ಕಾರ್ಖಾನೆ ಉದ್ಯೋಗಿ  ಸಿ.ಎಸ್. ಉಮಾ (47) ಎಂಬುವರ 25 ಗ್ರಾಂ ತೂಕದ ಮಾಂಗಲ್ಯವನ್ನು ಕಳವು ಮಾಡಲಾಗಿದೆ.

ಇನ್ನೊಂದು ಪ್ರಕರಣದಲ್ಲಿ, ಬ್ಯಾಡರಹಳ್ಳಿ ಈಸ್ಟ್‌ ವೆಸ್ಟ್‌ ಕಾಲೇಜಿನ ನಿಲ್ದಾಣದಿಂದ ಮೆಜೆಸ್ಟಿಕ್‌ ನಿಲ್ದಾಣಕ್ಕೆ ಬಿಎಂಟಿಸಿ ಬಸ್ಸಿನಲ್ಲಿ ಹೊರಟಿದ್ದ ಮಂಗಳಾ (42) ಎಂಬುವರ ಸರ ಕದಿಯಲಾಗಿದೆ.

ಪ್ರತಿಕ್ರಿಯಿಸಿ (+)