ಸೋಮವಾರ, ಸೆಪ್ಟೆಂಬರ್ 27, 2021
28 °C
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ: ಪ್ರಸಾದ ಅಬ್ಬಯ್ಯ

ಬಿಜೆಪಿ ಮುಖಂಡರ ಸುಳ್ಳುಗಳಿಗೆ ಕಿವಿಗೊಡಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಚುನಾವಣಾ ಫಲಿತಾಂಶ ಬಂದ ನಂತರ ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಳ್ಳಲಿದೆ ಎಂದು ಬಿಜೆಪಿ ಮುಖಂಡರು ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಮತದಾರರು ಅವರ ಸುಳ್ಳುಗಳಿಗೆ ಕಿವಿಗೊಡಬಾರದು ಎಂದು ಲಿಡ್ಕರ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಕುಂದಗೋಳ ಮತ ಕ್ಷೇತ್ರದ ಕಡಪಟ್ಟಿ, ಬೆನಕನಹಳ್ಳಿ, ಹಿರೇನರ್ತಿ, ಚಿಕ್ಕನರ್ತಿ,ಯರಗುಪ್ಪಿ, ರೊಟ್ಟಿಗವಾಡ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಪರ ಮತಯಾಚನೆ ಮಾಡಿ ಮಾತನಾಡಿದರು. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಇದರಿಂದ ರಾಜ್ಯಕ್ಕೆ ಸಾಕಷ್ಟು ಸಹಕಾರಿಯಾಗಲಿದೆ. ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದು ಅವರ ಕನಸು ಕನಸಾಗಿಯೇ ಉಳಿಯಲಿದೆ ಎಂದರು.

ಕುಂದಗೋಳ ಕ್ಷೇತ್ರದ ಮತದಾರರು ಬಹಳ ಬುದ್ಧಿವಂತರಿದ್ದು, ಅವರು ಈ ಬಾರಿ ಅತ್ಯಂತ ಬಹುಮತದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ. ಹಿಂದೆ ಸಿ.ಎಸ್ ಶಿವಳ್ಳಿ ಅವರಿಗೆ ಐದು ವರ್ಷಕ್ಕೆ ಇಲ್ಲಿಯ ಮತದಾರರು ಆಶೀರ್ವಾದ ಮಾಡಿದ್ದರು. ಆದರೆ ಅವರ ನಿಧನದಿಂದ ಅವರ ಸ್ಥಾನಕ್ಕೆ ಅವರ ಪತ್ನಿಗೆ ಅವಕಾಶ ಮಾಡಿಕೊಟ್ಟು ದಿ. ಶಿವಳ್ಳಿ ಅವರಿಗೆ ಕಾಂಗ್ರೆಸ್ ಗೌರವ ನೀಡಿದೆ. ಈಗ ಗೌರವ ಸಲ್ಲಿಸುವ ಸರದಿ ಮತದಾರ ಪ್ರಭುಗಳದ್ದು, ದಯಮಾಡಿ ಕ್ಷೇತ್ರದ ಜನತೆ ಕುಸುಮಾ ಶಿವಳ್ಳಿ ಅವರನ್ನು ಬೆಂಬಲಿಸಿ ಆಶೀರ್ವದಿಸಬೇಕು ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಬಸವರಾಜ ಬೇವಿನಮರದ, ಕುಮಾರ ಮದರಿ, ಮಾಡೋಳ್ಳಿ, ಯಲ್ಲಪ್ಪ ಚಲವಾದಿ, ಸುಧಾಕರ ಸನ್ನಮ್ಮನವರ, ಜಗದೀಶ ಬೇವಿನಮರದ, ಭೀಮಪ್ಪ ಎಲಿಗಾರ, ಮಂಜುನಾಥ ಬೇವಿನಮರದ, ಶ್ರೀನಿವಾಸ ಬೆಳದಡಿ, ಗಣೇಶ ದೊಡ್ಮನಿ, ಪ್ರಸನ್ನ ಮಿರಜಕರ್, ವಜುನಗೌಡ ಪಾಟೀಲ್ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು