ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕಾರದಿಂದ ಸದ್ಗುಣ ಪ್ರಾಪ್ತಿ: ರಂಭಾಪುರಿ ಸ್ವಾಮೀಜಿ

Last Updated 9 ಮೇ 2019, 14:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಂಸ್ಕಾವಿದ್ದರೆ ಸದ್ಗುಣ, ಇಲ್ಲವಾದರೆ ದುರ್ಗುಣಗಳು ಬೆಳೆಯುತ್ತವೆ. ಸುಖ ಶಾಂತಿದಾಯಕ ಬದುಕಿಗೆ ಸಂಸ್ಕಾರದ ಅವಶ್ಯಕತೆ ಬಹಳಷ್ಟಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಗುರುವಾರ ನಡೆದ ಧರ್ಮಸಂಸ್ಕಾರ ಮತ್ತು ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಸ್ಕಾರದ ಕೊರತೆಯಿಂದ ಮನುಷ್ಯ ಜೀವನ ಅಧಃಪತನದತ್ತ ಹೊರಟಿದೆ. ಮಾನಸಿಕ ಸ್ಥಿರತೆ ಸಮಾಧಾನ ಕಳೆದುಕೊಳ್ಳುವಂತಾಗಿದೆ. ಎಲ್ಲ ಧರ್ಮಗಳಲ್ಲಿ ಧಾರ್ಮಿಕ ಸಂಸ್ಕಾರಗಳನ್ನು ಪಡೆದುಕೊಳ್ಳಬೇಕೆಂದು ಹೇಳುತ್ತವೆ ಎಂದರು.

ಹಣೆಯಲ್ಲಿ ಭಸ್ಮ, ಕೊರಳಲ್ಲಿ ಲಿಂಗ-ರುದ್ರಾಕ್ಷಿ ಬಾಯಲ್ಲಿ ಶಿವಮಂತ್ರ ಜಪಿಸುವುದು ವೀರಶೈವ ಧರ್ಮದ ಪ್ರಮುಖ ಲಕ್ಷಣಗಳು. ಶ್ರೀ ಜಗದ್ಗುರು ರೇಣುಕಾಚಾರ್ಯರು ಅತ್ಯುನ್ನತವಾದ ಧರ್ಮ ಸಿದ್ಧಾಂತವನ್ನು ಬೋಧಿಸಿ ಉದ್ಧರಿಸಿದ್ದಾರೆ. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ದಾನಕ್ಕಿಂತ ದಾಸೋಹ, ಚರಿತ್ರೆಗಿಂತ ಚಾರಿತ್ರ್ಯ ದೊಡ್ಡದೆಂದು ಸಾರಿದ್ದಾರೆ ಎಂದು ತಿಳಿಸಿದರು.

ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮತ್ತು ಸೂಡಿ ಜುಕ್ತಿಹಿರೇಮಠದ ಡಾ.ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ವಟುಗಳಿಗೆ ಸಂಸ್ಕಾರ ನೀಡಿ ಮಂತ್ರ ಬೋಧಿಸಿ ಶುಭ ಹಾರೈಸಿದರು.

ನ್ಯಾಯವಾದಿ ಜಿ.ಆರ್.ಅಂದಾನಿಮಠ ಮತ್ತು ಶಿವಲೀಲಾ ನರ್ಸಿಂಗ್ ಹೋಂ ಮುಖ್ಯಸ್ಥ ಡಾ. ಎಸ್.ಎಸ್.ಹಿರೇಮಠ ಸಮಾರಂಭ ಉದ್ಘಾಟಿಸಿದರು. ಎನ್.ಬಿ.ಹಿರೇಮಠ, ಅಜ್ಜಯ್ಯ ಗಡ್ಡದೇವರಮಠ, ಪ್ರಕಾಶ ಬೆಂಡಿಗೇರಿ, ವಿಶ್ವನಾಥ ಹಿರೇಗೌಡ್ರ, ಇಂಧುಮತಿ ಮಾನ್ವಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕ ಆರ್.ಎಂ.ಹಿರೇಮಠ ಸ್ವಾಗತಿಸಿದರು. ಜಿ.ವಿ.ಹಿರೇಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT