ಇಂದು ಡ್ರೋನ್‌ ಒಲಿಂಪಿಕ್ಸ್‌

ಶನಿವಾರ, ಮೇ 25, 2019
22 °C

ಇಂದು ಡ್ರೋನ್‌ ಒಲಿಂಪಿಕ್ಸ್‌

Published:
Updated:

ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಇದೇ 20ರಿಂದ ನಡೆಯಲಿರುವ 2019ರ ‘ಏರೊ ಇಂಡಿಯಾ’ ವೈಮಾನಿಕ ಪ್ರದರ್ಶನದ ಅಂಗವಾಗಿ ಇದೇ ಮೊದಲ ಬಾರಿಗೆ ಜಕ್ಕೂರಿನ ವಾಯುನೆಲೆಯಲ್ಲಿ ಸೋಮವಾರ 'ಡ್ರೋನ್‍ ಒಲಿಂಪಿಕ್ಸ್‌’ ಸ್ಪರ್ಧೆ ಆಯೋಜಿಸಲಾಗಿದೆ.

ಈ ಸ್ಪರ್ಧೆಯಲ್ಲಿ ದೇಶದಲ್ಲಿನ ಬಹುತೇಕ ಎಲ್ಲ ಯುದ್ಧ ಹಾಗೂ ನಾಗರಿಕ ಡ್ರೋನ್‍ಗಳು ಪಾಲ್ಗೊಂಡು ತಮ್ಮ ಸಾಮರ್ಥ್ಯ ಪ್ರದರ್ಶಿಸಲಿವೆ. ಇದರಲ್ಲಿ ಫಾರ್ಮೇಷನ್‍ ಫ್ಲೈಯಿಂಗ್, ಪೇಲೋಡ್ ಡ್ರಾಪ್‍ ಚಾಲೆಂಜ್, ಸರ್ವಲೆನ್ಸ್ ಚಾಲೆಂಜ್ ಎಂಬ ಮೂರು ಹಂತದ ಸ್ಪರ್ಧೆಗಳು ನಡೆಯಲಿವೆ. 21ರಂದು ವೈಮಾನಿಕ ಪ್ರದರ್ಶನದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ. ಈ ಬಹುಮಾನ ₹38 ಲಕ್ಷ ನಗದು ಒಳಗೊಂಡಿದೆ.

‘ಇಲ್ಲಿಯವರೆಗೆ 130 ಡ್ರೋನ್ ಸಂಸ್ಥೆಗಳು ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದು, 57 ಡ್ರೋನ್‍ಗಳ ಸ್ಪರ್ಧೆ ಖಾತರಿಯಾಗಿದೆ. ಉಳಿದ ಹಾಗೂ ಹೊಸದಾಗಿ ಅರ್ಜಿ ಸಲ್ಲಿಸುವ ಡ್ರೋನ್‍ಗಳನ್ನು ಮೌಲ್ಯಮಾಪನ ಮಾಡಿ ಆಯ್ಕೆ ಮಾಡಲಾಗುವುದು ಎಂದು ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕ ವಿಭಾಗದ ಅಧಿಕಾರಿ ಗುರುಪ್ರಸಾದ್ ತಿಳಿಸಿದರು.

‘ಭಾರತೀಯ ಸೇನೆಯಲ್ಲಿ 1990ರಿಂದಲೇ ಡ್ರೋನ್‍ಗಳನ್ನು ಬಳಸಲಾಗುತ್ತಿದೆ. ಶತ್ರುಗಳ ಮೇಲೆ ದಾಳಿ ನಡೆಸಲು, ದಾಳಿ, ಉಗ್ರರ ತಾಣ ಪತ್ತೆ ಹಚ್ಚಲು, ಶೋಧ ಕಾರ್ಯ, ಗುರುತಿಸಲು, ಭೂಕಂಪದಂತಹ ನೈಸರ್ಗಿಕ ವಿಕೋಪಗಳು, ವೈದ್ಯಕೀಯ ನೆರವು ಒದಗಿಸಲು ಡ್ರೋನ್‍ಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ’ ಎಂದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !