ದೇವಸಂದ್ರ: ಮತ್ತೆ ಕಾಣಿಸಿಕೊಂಡ ಫ್ಲೆಕ್ಸ್‌

7

ದೇವಸಂದ್ರ: ಮತ್ತೆ ಕಾಣಿಸಿಕೊಂಡ ಫ್ಲೆಕ್ಸ್‌

Published:
Updated:
Deccan Herald

ಬೆಂಗಳೂರು: ಹೈಕೋರ್ಟ್‌ ಮಧ್ಯಪ್ರವೇಶದ ಬಳಿಕ ನಗರದಲ್ಲಿ ಎರಡು ತಿಂಗಳಿಂದ ಕಡಿಮೆಯಾಗಿದ್ದ ಫ್ಲೆಕ್ಸ್‌ ಹಾವಳಿ ಮತ್ತೆ ಆರಂಭವಾಗಿದೆ. ಇತ್ತೀಚೆಗೆ ನಗರದ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಮುಖಂಡರ ಭಾವಚಿತ್ರಗಳನ್ನು ಹೊಂದಿರುವ ಬ್ಯಾನರ್‌ಗಳು ಮತ್ತೆ ಕಾಣಿಸಿಕೊಳ್ಳತೊಡಗಿವೆ.

ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದ ದೇವಸಂದ್ರ ವಾರ್ಡ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಶಾಸಕ ಬಿ.ಎ.ಬಸವರಾಜ್‌ ಹಾಗೂ  ಪಾಲಿಕೆ ಸದಸ್ಯ ಎಂ.ಎನ್‌.ಶ್ರೀಕಾಂತ್‌ (ಪುಟ್ಟ) ಅವರಿಗೆ ಸ್ವಾಗತಕೋರಿ ಬ್ಯಾನರ್‌ ಅಳವಡಿಸಲಾಗಿತ್ತು. ಈ ಬಗ್ಗೆ ಸ್ಥಳೀಯರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಳ್ಳುವ ಭಯದಿಂದ ಪಾಲಿಕೆ ಅಧಿಕಾರಿಗಳು ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದರು. ಈಗ ಮತ್ತೆ ಈ ಹಾವಳಿ ಕಾಣಿಸಿಕೊಳ್ಳುತ್ತಿದೆ. ಪಾಲಿಕೆ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ಇಂತಹ ಬ್ಯಾನರ್‌ಗಳನ್ನು ತೆರವುಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು.  

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !