ರಾಜಾನುಕುಂಟೆ ಗ್ರಾ.ಪಂ. ಅಧ್ಯಕ್ಷೆಯಾಗಿ ಸುಜಾತಾ ಆಯ್ಕೆ

7

ರಾಜಾನುಕುಂಟೆ ಗ್ರಾ.ಪಂ. ಅಧ್ಯಕ್ಷೆಯಾಗಿ ಸುಜಾತಾ ಆಯ್ಕೆ

Published:
Updated:
Deccan Herald

ಬೆಂಗಳೂರು: ಯಲಹಂಕ ಸಮೀಪದ ರಾಜಾನುಕುಂಟೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಸುಜಾತಾ ಶ್ರೀನಿವಾಸರೆಡ್ಡಿ ಆಯ್ಕೆಯಾಗಿದ್ದಾರೆ.

ಹಿಂದಿನ ಅಧ್ಯಕ್ಷರಾಗಿದ್ದ ಸವಿತಾ ಈರಣ್ಣ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕಾಗಿ (ಸಾಮಾನ್ಯ) ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಜಾತಾ ಶ್ರೀನಿವಾಸರೆಡ್ಡಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಕುಂತಲಾ ಶ್ರೀನಿವಾಸರೆಡ್ಡಿ ನಾಮಪತ್ರ ಸಲ್ಲಿಸಿದ್ದರು.

ಒಟ್ಟು 27 ಸದಸ್ಯಬಲ ಹೊಂದಿದ್ದ ಪಂಚಾಯಿತಿಯಲ್ಲಿ ಮೂವರು ಸದಸ್ಯರು ಗೈರುಹಾಜರಾಗಿದ್ದರು. ಶಕುಂತಲಾ 7 ಮತಗಳನ್ನು ಪಡೆದರೆ, ಸುಜಾತಾ 17 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !