ಶನಿವಾರ, ಜನವರಿ 18, 2020
20 °C
ವಿಶ್ವ ರೈತ ದಿನಾಚರಣೆ, ಮಣ್ಣು ಆರೋಗ್ಯ ಕಾರ್ಯಕ್ರಮದಲ್ಲಿ ಜಯಮ್ಮ ಲಕ್ಷ್ಮೀನಾರಾಯಣ್‌

ಅಧಿಕಾರಿಗಳಿಗೆ ಚಾಟಿ ಬೀಸಿದ ಜಿ.ಪಂ ಅಧ್ಯಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬೆಳವಂಗಲ (ದೊಡ್ಡಬಳ್ಳಾಪುರ): ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳು ರೈತರಿಗೆ ಸಿಗುತ್ತಿಲ್ಲ. ಇದಕ್ಕೆ ಅಧಿಕಾರಿಗಳ ಲೋಪವೇ ಕಾರಣ. ಇದನ್ನು ಸರಿಪಡಿಸಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ್‌ ಖಡಕ್‌ ಸೂಚನೆ ನೀಡಿದರು.

ತಾಲ್ಲೂಕಿನ ಕೊನೇನಹಳ್ಳಿಯಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ರೈತ ದಿನಾಚರಣೆ ಹಾಗೂ ಮಣ್ಣು ಆರೋಗ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ಯೋಜನೆಗಳಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ. ರೈತರ ಕಷ್ಟಗಳಿಗೆ ಸ್ಪಂದಿಸಿದಾಗ ಮಾತ್ರ ಕೆಲಸ ಸಾರ್ಥಕವಾಗಲಿದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ಎಸ್.ಪಿ.ನಾರಾಯಣಸ್ವಾಮಿ ಮಾತನಾಡಿ, ವಿಶ್ವ ರೈತದಿನಾಚರಣೆ ಮತ್ತು ಮಣ್ಣು ಆರೋಗ್ಯ ದಿನಾಚರಣೆ ಪ್ರಯುಕ್ತ ಕೊನೇನಹಳ್ಳಿ ರೈತರ ಭೂಮಿಯಲ್ಲಿ ಉಚಿತವಾಗಿ ಮಣ್ಣಿನ ಪರೀಕ್ಷೆ ಮಾಡಿಕೊಡಲು ಕೃಷಿ ಇಲಾಖೆ ಮುಂದಾಗಿದೆ. ಪರೀಕ್ಷೆ ನಂತರ ನೀಡುವ ವರದಿ ಅನುಸಾರ ಮಣ್ಣಿನಲ್ಲಿನ ಪೋಷಕಾಂಶಗಳ ಮಾಹಿತಿ ದೊರೆಯಲಿದೆ ಎಂದರು.

ಪ್ರಗತಿ ಪರ ಕೃಷಿಕ ಕಾರೇಪುರ ಕೃಷ್ಣಮೂರ್ತಿ ಮಾತನಾಡಿ, ಆಧುನಿಕತೆ ಅಳವಡಿಸಿಕೊಂಡು ಕೃಷಿ ಪದ್ಧತಿ ನಡೆಸಿದ್ದಲ್ಲಿ ಯಾವ ರೈತರಿಗೂ ನಷ್ಟ ಉಂಟಾಗುವುದಿಲ್ಲ. ಅದರಲ್ಲಿಯೂ ಸಮಗ್ರ ಕೃಷಿ ಪದ್ಧತಿ ರೈತನಿಗೆ ವರದಾನ ಎಂದರು.

ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ್, ಉಪಾಧ್ಯಕ್ಷೆ ರತ್ನಮ್ಮ, ಪಿಡಿಒ ಸೌಮ್ಯ, ಸದಸ್ಯರಾದ ರುದ್ರಮೂರ್ತಿ, ಮುನಿಕುಮಾರ್, ವಿರೇಗೌಡ, ಮಂಜುನಾಥ್, ನಾಗರಾಜ್, ಸರಸ್ವತಮ್ಮ, ವಿಜಯಲಕ್ಷ್ಮಮ್ಮ, ನೀಲಾಂಬಿಕೆ, ರಾಮಕ್ಕ, ಜಯಮ್ಮ,ಮಂಜುನಾಥ್, ಪ್ರಗತಿಪರ ರೈತ ತಿಮ್ಮೆಗೌಡ, ಸಹಾಯಕ ಕೃಷಿ ನಿರ್ದೇಶಕಿ ವಿನೋದಮ್ಮ, ತಾಂತ್ರಿಕ ಅಧಿಕಾರಿ ರೂಪ, ಕೃಷಿ ಅಧಿಕಾರಿಗಳಾದ ಸಿದ್ದಗಂಗಯ್ಯ, ಹರೀಶ್, ಅನಸೂಯಮ್ಮ, ಆತ್ಮ ಯೋಜನೆ ವ್ಯವಸ್ಥಾಪಕ ಅರ್ಚನಾ, ಗಗನ್, ಪ್ರವೀಣ್, ದಶರಥ್ ಇದ್ದರು.

ಆತ್ಮ ಶ್ರೇಷ್ಠ ಕೃಷಿಕ ಶ್ರೀ ಪ್ರಶಸ್ತಿ: ಸಮಗ್ರ ಕೃಷಿ ಅನುಸರಿಸುತ್ತಿರುವ ರೈತರಾದ ಶ್ರೀನಿವಾಸರೆಡ್ಡಿ, ಪಶುಪಾಲನೆಯಡಿಯಲ್ಲಿ ವೆಂಕಟಮ್ಮ, ರೇಷ್ಮೆ ಕೃಷಿಗೆ ಕೊಟ್ಟಿಗೆಮಾಚೇನಹಳ್ಳಿ ನಾಗರಾಜು, ತೋಟಗಾರಿಕೆ ಕೃಷಿಯಲ್ಲಿ ರಮೇಶ್ ಅವರಿಗೆ ‘ಆತ್ಮ ಶ್ರೇಷ್ಠ ಕೃಷಿಕ ಶ್ರೀ’ ಪ್ರಶಸ್ತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು