ಸೋಮವಾರ, ಜೂನ್ 1, 2020
27 °C

ಪ್ರಮುಖ ಆಕರ್ಷಣೆ ‘ಪರಮೇಶ್ವರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಈ ಬಾರಿಯ ಕೃಷಿ ಮೇಳದ ಪ್ರಮುಖ ಆಕರ್ಷಣೆ ‘ಪರಮೇಶ್ವರ’. ವಸ್ತು ಪ್ರದರ್ಶನ ಏರ್ಪಡಿಸಿದ್ದ ಮೈದಾನದ ಪ್ರವೇಶ ದ್ವಾರದ ಬಳಿಯೇ ವಿರಾಜಮಾನವಾಗಿರುವ ‘ಪರಮೇಶ್ವರ’ನತ್ತ ಕಣ್ಣು ಹಾಯಿಸದೇ ಯಾರೂ ಮುಂದೆ ಹೋಗುತ್ತಿರಲಿಲ್ಲ.

ಆಳೆತ್ತರದ ದೇಹ, ರಾಜಗಾಂಭೀರ್ಯ ಹಾಗೂ ಕಟ್ಟು ಮಸ್ತಾದ ಶರೀರದ ಈ ಹೋರಿಯನ್ನು ಕಣ್ತುಂಬಿಕೊಳ್ಳುವುದೇ ಹಬ್ಬ.  ಗುಜರಾತ್‌ನ ಗಿರ್‌ ತಳಿಯ ಈ ಹೋರಿಯನ್ನು ಕಾಣಲು, ಇದರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಜನ ಮುಗಿಬಿದ್ದರು.

ಗುಜರಾತ್‌ನ ಗಿರ್‌ ಅರಣ್ಯ ಪ್ರದೇಶದಲ್ಲಿ ಈ ಜಾತಿಯ ಹೋರಿಗಳ ಮೂಲ ನೆಲೆ. ಇವುಗಳ ಸಂತತಿ ನಶಿಸುತ್ತಾ ಬಂದಿದೆ. ಇಡೀ ದೇಶದಲ್ಲೇ ಶುದ್ಧ ಗಿರ್‌ ತಳಿಯ ಕೇವಲ ಐದು ಹೋರಿಗಳಿವೆ. ಅವುಗಳಲ್ಲಿ ‘ಪರಮೇಶ್ವರ’ನೂ ಒಬ್ಬ’ ಎಂದು ಕೃಷಿ ವಿಶ್ವವಿದ್ಯಾಲಯದ ಪಶುವಿಜ್ಞಾನ ವಿಭಾಗದ ಮುಖ್ಯ ಪ್ರೊ.ಚಿದಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಹೋರಿಗೀಗ 7 ವರ್ಷ. ಕನಕಪುರ ಕೋಡಿಹಳ್ಳಿಯ ಮಧುಬನ ಫಾರ್ಮ್‌ನ ಮಾಲೀಕ ಯತೀಶ್‌ ಅವರು ಇದನ್ನು ಸಾಕುತ್ತಿದ್ದಾರೆ. ಅವರು 2 ವರ್ಷಗಳ ಹಿಂದೆ ಖರೀದಿಸಿದ್ದರು. ಅವರ ಬಳಿ ಈ ತಳಿಯ ಒಂದು ಹಸು ಹಾಗೂ ಒಂದು ಕರು ಇದೆ’ ಎಂದು ಅವರು ತಿಳಿಸಿದರು.

‌‘ಈ ಹೋರಿಯಿಂದ ಪ್ರತಿ ತಿಂಗಳು 100 ಡೋಸ್‌ಗಳಷ್ಟು ವೀರ್ಯಗಳನ್ನು ಪಡೆಯಲಾಗುತ್ತಿದೆ. ಪ್ರತಿ ಡೋಸ್‌ಗೂ ₹ 1200 ಬೆಲೆ ಇದೆ. ವೀರ್ಯ ಪಡೆದು ಸಂಸ್ಕರಿಸುವುದಕ್ಕೆ ₹ 25 ಸಾವಿರ ವೆಚ್ಚ ತಗಲುತ್ತದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು