ಗುರುವಾರ , ಸೆಪ್ಟೆಂಬರ್ 19, 2019
21 °C
ಬೆಟದೂರು ಹಾಗೂ ಯಲಿವಾಳ ಗ್ರಾಮಗಳಲ್ಲಿ ಮನೆ ಮನೆ ‍ಪ್ರಚಾರ

ಅಭಿವೃದ್ಧಿಗಾಗಿ ಕಾಂಗ್ರೆಸ್ ಗೆಲ್ಲಿಸಿ: ಎಚ್‌.ಕೆ. ಪಾಟೀಲ್

Published:
Updated:
Prajavani

ಹುಬ್ಬಳ್ಳಿ: ಕುಂದಗೋಳ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರನ್ನು ಗೆಲ್ಲಿಸಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ. ಪಾಟೀಲ ಮನವಿ ಮಾಡಿದರು.

ಕುಂದಗೋಳ ವಿಧಾನಸಭಾ ಕ್ಷೇತ್ರದ ಬೆಟದೂರು ಹಾಗೂ ಯಲಿವಾಳ ಗ್ರಾಮಗಳಲ್ಲಿ ಶನಿವಾರ ಅವರು ಚುನಾವಣಾ ಪ್ರಚಾರ ನಡೆಸಿದರು. ಮನೆ ಮನೆಗೆ ತೆರಳಿ ಪಕ್ಷದ ಅಭ್ಯರ್ಥಿ ಪರ ಮತ ಯಾಚಿಸಿದರು.

ಸಮಾಜದ ಹಿತಾಸಕ್ತಿಯನ್ನು ಕಾಪಾಡುವ ಮೌಲ್ಯಗಳನ್ನು ಕಾಂಗ್ರೆಸ್ ಪಕ್ಷ ಹೊಂದಿದೆ. ದೇಶದಲ್ಲಿ ಬಡತನವನ್ನು ಹೋಗಲಾಡಿಸಬೇಕು ಎನ್ನುವ ಮೂಲ ಗುರಿಯನ್ನು ಇಂದಿರಾ ಗಾಂಧಿ ಹೊಂದಿದ್ದರು. ಅದೇ ಆದರ್ಶವನ್ನು ಮುಂದುವರೆಸಿಕೊಂಡು ಬಂದಿರುವ ಕಾಂಗ್ರೆಸ್ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ‘ನ್ಯಾಯ’ ಯೋಜನೆ ಘೋಷಿಸಿದೆ. ಬೇರೆ ಪಕ್ಷಗಳು ಊಹಿಸಲೂ ಸಾಧ್ಯವಿಲ್ಲದಂತಹ ಕಾರ್ಯಕ್ರಮ ಇದಾಗಿದೆ. ಬಡತನ ರೇಖೆಗಿಂತ ಕೆಳಗಿರುವವರನ್ನು ಮಧ್ಯಮವರ್ಗಕ್ಕೆ ಮೇಲೆತ್ತುವಂತ ಯೋಜನೆ ಇದಾಗಿದೆ ಎಂದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆರಂಭಿಸಿದ ಅನ್ನಭಾಗ್ಯ ಯೋಜನೆ ರಾಜ್ಯದ ಕೋಟ್ಯಂತರ ಕುಟುಂಬಗಳ ಹಸಿವನ್ನು ನೀಗಿದೆ. ಇಂತಹ ಕಾರ್ಯಕ್ರಮಗಳ ಜೊತೆಯಲ್ಲಿ ಗ್ರಾಮಮಟ್ಟದ ಅಭಿವೃದ್ಧಿಗಾಗಿ ಸಹ ಕಾಂಗ್ರೆಸ್‌ಗೆ ಮತ ನೀಡಿ ಎಂದು ಹೇಳಿದರು.

Post Comments (+)