‘ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ’

ಸೋಮವಾರ, ಮೇ 27, 2019
29 °C

‘ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ’

Published:
Updated:

ಕೆ.ಆರ್‌.ಪುರ: ‘ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ದೊರಕಿಸಿಕೊಡಲು ಮೇ 23ರ ನಂತರ ಸಮನ್ವಯ ಸಮಿತಿಯಲ್ಲಿ ಚರ್ಚಿಸಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

‘ರಾಜ್ಯದಲ್ಲಿ ಕನ್ನಡ ಮಾತನಾಡುವವರಿಗೆ ಪ್ರಾತಿನಿಧ್ಯ ನೀಡಬೇಕು. ಹಾಗಂತ ಬೇರೆ ಭಾಷೆ ಕಲಿಯಬೇಡಿ ಎಂದು ಹೇಳುವುದಿಲ್ಲ. ಕನ್ನಡಕ್ಕೆ ಧಕ್ಕೆ ಬಂದರೆ ಸುಮ್ಮನಿರಲು ಸಾಧ್ಯವಿಲ್ಲ. ನಮ್ಮ ಭಾಷೆಯ ಮೇಲೆ ಇತರ ಭಾಷೆಯನ್ನು ಹೇರಲು ಮುಂದಾದರೆ, ಅದರ ವಿರುದ್ಧ ಹೋರಾಡಲು ಸಿದ್ಧವಿರಬೇಕು’ ಎಂದರು. 

ಥಣಿಸಂದ್ರ ಮುಖ್ಯರಸ್ತೆಯ ಆರ್.ಕೆ.ಹೆಗಡೆ ನಗರದಲ್ಲಿ ಸಾಯಿ ಕಲ್ಯಾಣ್ ಸುಪಿರಿಯಾ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸಾಯಿಕಲ್ಯಾಣ ಬಿಲ್ಡರ್ಸ್‌ ಮಾಲೀಕ ವೇಣುಗೋಪಾಲ್‌,‘ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಮನೆಗಳನ್ನು ಕಟ್ಟುತ್ತಿದ್ದೇವೆ. ಇಲ್ಲಿ 200 ಮನೆಗಳು ನಿರ್ಮಾಣ ಆಗಲಿವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !