ಸೋಮವಾರ, ಸೆಪ್ಟೆಂಬರ್ 20, 2021
29 °C

ಪ್ಯಾರಿಸ್‌ ಕೌನ್ಸಿಲ್‌ಗೆ ಕನ್ನಡಿಗ ಅವಿರೋಧ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾಬಸ್‌ಪೇಟೆ: ಕನ್ನಡಿಗ ರವಿಕುಮಾರ್‌ ಕೆ. ವೆಂಕಟೇಶ್ ಅವರು ಇಂಗ್ಲೆಂಡ್‌ನಲ್ಲಿನ ಸ್ಥಳೀಯ ಆಡಳಿತ ಸಂಸ್ಥೆಯಾಗಿರುವ ಪ್ಯಾರಿಸ್‌ ಕೌನ್ಸಿಲ್‌ಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆ ಕುದುರಗೆರೆ ಗ್ರಾಮದ ಕೆ.ಆರ್‌. ವೆಂಕಟೇಶ್ ಮತ್ತು ರಮಾದೇವಿ ಮಗನಾಗಿರುವ ರವಿಕುಮಾರ್‌ ಎಂಬಿಎ ಪದವಿ ಪಡೆದಿದ್ದು, ಇಂಗ್ಲೆಂಡ್‌ನಲ್ಲಿ ಐಟಿ ಉದ್ಯೋಗಿಯಾಗಿದ್ದಾರೆ.

ಅಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ಅಲ್ಲಿನ ಕನ್ನಡಿಗರಲ್ಲಿ ಭಾಷಾಭಿಮಾನ ಮೂಡಿಸುತ್ತಿದ್ದಾರೆ. ಇವರು ಲೇಬರ್‌ ಪಾರ್ಟಿಯ ಸ್ಥಳೀಯ ಮುಖಂಡರಾಗಿದ್ದಾರೆ. 

ರವಿಕುಮಾರ್‌ ಅವರು ದಾಬಸ್‌ಪೇಟೆ ಮಾರ್ಗದ ಕಂಬಾಳುವಿನಲ್ಲಿ ಪ್ರಜ್ಞಾ ಜನ್ಯ ಇಂಟರ್‌ ನ್ಯಾಷನಲ್‌ ಶಾಲೆಯನ್ನು ಆರಂಭಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು