ಸೋಮವಾರ, ಸೆಪ್ಟೆಂಬರ್ 16, 2019
21 °C

ಹುಲಿ ಸಂರಕ್ಷಣೆಯ ಪಾಠ

Published:
Updated:
Prajavani

ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಗೋಪಾಲನ್‌ ಮಾಲ್‌ ಬಳಿ 300ಕ್ಕೂ ಹೆಚ್ಚು ಜನ ಭಾನುವಾರ ರೂಬಿಕ್‌ ಕ್ಯೂಬ್‌ಗಳನ್ನು ಚಾಕಚಕ್ಯತೆಯಿಂದ ಜೋಡಿಸಿ ಅದರಲ್ಲಿ ಹುಲಿ ಚಿತ್ರವನ್ನು ರೂಪಿಸಿ, ಹುಲಿ ಸಂರಕ್ಷಣೆ ಮಹತ್ವ ಸಾರಿದರು. ಈ ಮೂಲಕ ಗಿನ್ನೆಸ್‌ ದಾಖಲೆಗೆ ಯತ್ನಿಸಿದರು.

ನಗರದ  ರೂಬಿಕ್‌ ಕ್ಯೂಬ್‌ತರಬೇತುದಾರ ಕೆ.ಪೃಥ್ವೀಶ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲ ಭಾಗವಹಿಸಿದ್ದರು.

‘ಏಪ್ರಿಲ್‌ನಿಂದ ರೂಬಿಕ್‌ ಕ್ಯೂಬ್‌ ಆಡಲು ಪ್ರಾರಂಭಿಸಿದ್ದೇನೆ. ಇದರಿಂದ ತೊಡಕು ಪರಿಹರಿಸುವದನ್ನು ಕಲಿತಿದ್ದೇನೆ. ಆದರೆ, ಇಂಥ ದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು’ ಎಂದು ಏಳು ವರ್ಷದ ಬಾಲಕಿ ನವ್ಯಾ ರಮೇಶ್‌ ಆಚಾರ್ಯ ಹೇಳಿದಳು.

‘ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಇಂಥ ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಬೆಂಗಳೂರು ನಿವಾಸಿ ಕಾರ್ತಿಕ್‌ ಸತ್ಯಮೂರ್ತಿ ತಿಳಿಸಿದರು.

2016ರಲ್ಲಿ ಕೆ.ಪೃಥ್ವೀಶ್‌ ಹಾಗೂ ಸ್ನೇಹಿತರು ಸೇರಿ ಎರಡು ಬದಿಯ ರೂಬಿಕ್‌ ಕ್ಯೂಬ್‌ ಸೃಷ್ಟಿಸಿ, ಒಂದು ಬದಿ ಚಾರ್ಲಿ ಚಾಪ್ಲಿನ್ ಹಾಗೂ ಮತ್ತೊಂದು ಬದಿ ಮಿಸ್ಟರ್‌ ಬಿನ್‌ ಚಿತ್ರವನ್ನು ರೂಪಿಸಿದ್ದರು. ಈ ಮೂಲಕ ಅವರು ಗಿನ್ನೆಸ್‌ ದಾಖಲೆ ನಿರ್ಮಿಸಿದ್ದರು.

Post Comments (+)