ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾರಂಗ’ಕ್ಕೆ ದಂಪತಿಯ ಸಾರಥ್ಯ; ಬಾನಂಗಳದಲ್ಲಿ ಪ್ರೀತಿಯ ಅಚ್ಚು

Last Updated 20 ಫೆಬ್ರುವರಿ 2019, 20:36 IST
ಅಕ್ಷರ ಗಾತ್ರ

ಬೆಂಗಳೂರು: ವಾಯುನೆಲೆ­ಯಲ್ಲಿ ತಮ್ಮ ಚಮತ್ಕಾರದ ಮೂಲಕ ಸಾವಿರಾರು ಜನರಲ್ಲಿ ರೋಮಾಂಚನ ಮೂಡಿಸಿರುವ ‘ಸಾರಂಗ್’ ಯಶಸ್ಸಿನ ಹಿಂದೆ ಆ ಜೋಡಿಯ ಮೋಡಿ ಕೆಲಸ ಮಾಡುತ್ತಿದೆ.

ಮಹಾರಾಷ್ಟ್ರದ ರವೀಶ್ ಕುಲಕರ್ಣಿ ಹಾಗೂ ನೇಹಾ ಕುಲಕರ್ಣಿ ದಂಪತಿ ‘ಸಾರಂಗ್’ ವಿಂಗ್ ಕಮಾಂಡರ್‌ಗಳಾಗಿದ್ದಾರೆ. ಒಂದೇ ವಿಮಾನದಲ್ಲಿ ಬಾನಂಗಳಕ್ಕೆ ಜಿಗಿಯುವ ಇವರು, ಹೃದಯದ ಆಕೃತಿ ಮೂಡಿಸಿ ಪ್ರೀತಿಯ ಅಚ್ಚು ಒತ್ತುತ್ತಾರೆ.

ಬುಧವಾರ ಪ್ರದರ್ಶನ ಮುಗಿದ ಬಳಿಕ ಮಾತಿಗೆ ಸಿಕ್ಕ ನೇಹಾ, ‘ಬೆಂಗಳೂರಿನಲ್ಲಿ ಪ್ರದರ್ಶನ ನೀಡುವುದೆಂದರೆ ನಮಗೆ ಅಚ್ಚುಮೆಚ್ಚು. ಇದೊಂದು ವಿಶೇಷ ಅನುಭವ. ಎಲ್ಲ­ಕ್ಕಿಂತ ಮುಖ್ಯವಾಗಿ ಅದ್ಭುತ ಅವಕಾಶ’ ಎಂದರು.

‘ರಕ್ಷಣಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶಗಳಿವೆ. ಯುವತಿಯರು ಅದರ ಸದುಪಯೋಗ ಮಾಡಿಕೊಳ್ಳಬೇಕು. ಇಂದಿನ ನಮ್ಮ ಪ್ರದರ್ಶನವನ್ನು ಪೈಲಟ್ ಸಾಹುಲ್ ಗಾಂಧಿಗೆ ಅರ್ಪಿಸುತ್ತಿದ್ದೇವೆ’ ಎಂದು ಹೇಳಿದರು.

2017ರಲ್ಲಿ ನಡೆದ ಪ್ರದ ರ್ಶನದಲ್ಲಿ ದೀಪಿಕಾ ಮಿಶ್ರಾ ಹಾಗೂ ಸೌರಭ್ ಕಾಕರ್ ಜೋಡಿ ‘ಸಾರಂಗ್‌’ನಲ್ಲಿತ್ತು. ದೀಪಿಕಾ ಸ್ಕ್ವಾಡ್ರನ್ ಲೀಡರ್ ಆಗಿದ್ದರೆ, ಸೌರಭ್ ತಾಂತ್ರಿಕ ಅಧಿಕಾರಿಯಾಗಿದ್ದರು.

ಕೆಚ್ಚೆದೆಯ ‘ಗ್ರಿಪೆನ್‌’ ಅಚ್ಚುಮೆಚ್ಚು

ಗಂಟೆಗೆ 2,500 ಕಿ.ಮೀ ವೇಗದಲ್ಲಿ ಹಾರಾಟ ನಡೆಸಬಲ್ಲ ಸ್ವೀಡನ್‌ನ ‘ಗ್ರಿಪೆನ್‌’ ಯುದ್ಧ ವಿಮಾನ ಸಾರ್ವಜನಿಕರ ಗಮನ ಸೆಳೆಯಿತು. ಪ್ರದರ್ಶನಕ್ಕೆ ನಿಂತಿದ್ದ ಆ ವಿಮಾನದಲ್ಲಿ ಜನ ಒಬ್ಬೊಬ್ಬರಾಗಿ ಕುಳಿತು ಕ್ಷಣಕಾಲ ತಾವೂ ಪೈಲಟ್‌ಗಳಾದರು.

‘ಗ್ರಿಪೆನ್ 15.2 ಮೀ ಉದ್ದವಿದ್ದು, ರೆಕ್ಕೆಗಳು 8.6 ಮೀ ಇವೆ. ಒಂದು ಎಂಜಿನ್‌ ಸಾಮರ್ಥ್ಯದ ಈ ವಿಮಾನ, ಗರಿಷ್ಠ 16,500 ಕೆ.ಜಿ ತೂಕವನ್ನು ಹೊತ್ತೊಯ್ಯುತ್ತದೆ. ಯುದ್ಧದ ವೇಳೆ ಎದುರಾಳಿಗಳತ್ತ ಗುಂಡಿನ ಮಳೆಗರೆಯುತ್ತ, ಕೆಚ್ಚೆದೆಯಿಂದ ಮುನ್ನುಗ್ಗುವ ಧೈರ್ಯ ಇದಕ್ಕಿದೆ’ ಎಂದು ಭದ್ರತಾ ಅಧಿಕಾರಿ ಜೇಮ್ಸ್ ವಿಲಿಯಮ್ಸ್ ಹೇಳಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT