ಬೆಂಗಳೂರು: ಹೂವು ಮಾರಿಕೊಂಡು ಒಂಟಿಯಾಗಿ ಬದುಕುತ್ತಿದ್ದ ಭಾಗ್ಯಮ್ಮ (45) ಎಂಬುವರನ್ನು ದುಷ್ಕರ್ಮಿಗಳು ಕತ್ತು ಸೀಳಿ ಕೊಲೆ ಮಾಡಿದ್ದಾರೆ.

ಇಸ್ರೊ ಲೇಔಟ್ ಸಮೀಪದ ವಸಂತ ವಲ್ಲಭನಗರ ನಿವಾಸಿಯಾದ ಅವರು, ಮೂರು ದಿನಗಳಿಂದ ವ್ಯಾಪಾರಕ್ಕೆ ಹೋಗಿರಲಿಲ್ಲ. ಗುರುವಾರ ಬೆಳಿಗ್ಗೆ ಮನೆ ಹತ್ತಿರ ದುರ್ವಾಸನೆ ಬರುತ್ತಿದ್ದರಿಂದ, ಸ್ಥಳೀಯರು ಭಾಗ್ಯಮ್ಮ ಅವರ ಅಣ್ಣನಿಗೆ ವಿಷಯ ಮುಟ್ಟಿಸಿದ್ದರು.

ಅವರು ಮನೆಗೆ ಬಂದು ನೋಡಿದಾಗ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕೂಡಲೇ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ‘ಕೆಲ ದಿನಗಳ ಹಿಂದೆ ಮನೆ ಬಳಿ ಗಲಾಟೆ ಮಾಡುತ್ತಿದ್ದ ಪಾನಮತ್ತ ಯುವಕರಿಗೆ ಭಾಗ್ಯಮ್ಮ ಬೈದಿದ್ದರು. ಅದೇ ಸಿಟ್ಟಿನಲ್ಲಿ ಆ ಯುವಕರೇ ಕೃತ್ಯ ಎಸಗಿರಬಹುದು ಎಂಬ ಅನುಮಾನವಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.